ಗದ್ದಿಗೌಡರ ಗೆಲುವು ಸಭ್ಯತೆ, ಪ್ರಾಮಾಣಿಕತೆಗೆ ಸಂದ ಜಯ: ಮಹಾವೀರ.

KannadaprabhaNewsNetwork |  
Published : Jun 05, 2024, 01:30 AM IST
ಸಂಸದ ಗದ್ದಿಗೌಡರ ಗೆಲುವು, ಸಭ್ಯತೆ, ಪ್ರಾಮಾಣಿಕತೆಗೆ ಸಂದ ಜಯ : ಮಹಾವೀರ. | Kannada Prabha

ಸಾರಾಂಶ

ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲುವಿನ ದಾಖಲೆ ಬರೆದ ಸಂಸದ ಪಿ.ಸಿ.ಗದ್ದಿಗೌಡರ ತಮ್ಮ ಸಭ್ಯತೆಯ ನಡೆ ಮತ್ತು ಪ್ರಾಮಾಣಿಕತೆಯಿಂದ ಜನರ ಒಲವು ಸಂಪಾದಿಸಿ ಪಡೆದ ನೈಜ ವಿಜಯವಾಗಿದೆ ಎಂದು ರೈತ ಹೋರಾಟಗಾರ, ಬಿಜೆಪಿ ಧುರೀಣ ಮಹಾವೀರ ಭಿಲವಡಿ ಪ್ರಶಂಸಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲುವಿನ ದಾಖಲೆ ಬರೆದ ಸಂಸದ ಪಿ.ಸಿ.ಗದ್ದಿಗೌಡರ ತಮ್ಮ ಸಭ್ಯತೆಯ ನಡೆ ಮತ್ತು ಪ್ರಾಮಾಣಿಕತೆಯಿಂದ ಜನರ ಒಲವು ಸಂಪಾದಿಸಿ ಪಡೆದ ನೈಜ ವಿಜಯವಾಗಿದೆ ಎಂದು ರೈತ ಹೋರಾಟಗಾರ, ಬಿಜೆಪಿ ಧುರೀಣ ಮಹಾವೀರ ಭಿಲವಡಿ ಪ್ರಶಂಸಿಸಿದರು.

ತಾಲೂಕಿನ ತಮದಡ್ಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರೊಡನೆ ಗುಲಾಲ್ ಎರಚಿ ಸಂಭ್ರಮಿಸಿ ಹಲಗೆ ಮೇಳ ಮತ್ತು ಚಳ್ಳಂಗ ವಾದ್ಯದೊಡನೆ ಮೆರವಣಿಗೆ ನಡೆಸಿ ಬಳಿಕ ಮಾತನಾಡಿದ ಅವರು, ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಇನ್ನೂ ಎತ್ತರಕ್ಕೇರಲಿದೆ. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವ ಮೂಲಕ ಭಾರತ ವಿಶ್ವಗುರುವಾಗುವಲ್ಲಿ ಸಂಶಯವಿಲ್ಲ ಎಂದರು. ಪ್ರಭು ಅಕ್ಕಿವಾಟ, ಗ್ರಾಪಂ ಅಧ್ಯಕ್ಷ ಭೀಮಣ್ಣ ಕೊಣ್ಣೂರ, ಗಂಗಪ್ಪ ಮಲ್ಲಣ್ಣವರ, ಪಾರೀಸ್ ನಿಲೋಜಗಿ, ಸಂಜಯ ಪಾಟೀಲ, ಬಸವು ಯಾದವಾಡ, ಬಾಬು ಶಿರಗಾರ, ಮಹಾವೀರ ಮನೆಪ್ಪನವರ, ವಿದ್ಯಾಧರ ಗೂಳಗೊಂಡ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.

ಫೋಟೊ-೪ಆರ್‌ಬಿಕೆ೫/ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಸಂಸದ ಗದ್ದಿಗೌಡರ ಗೆಲುವಿನ ವಿಜಯೋತ್ಸವವನ್ನು ಹಲಗೆ, ಚಳ್ಳಂಗ ತಾಳ ವಾದನ ಮೂಲಕ ಸಂಚರಿಸಿ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರವಾಡ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ
ಜನರ ಆರ್ಥಿಕ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆ ಸಹಾಯಕ: ರವೀಂದ್ರ ಕಲಬುರ್ಗಿ