ಕನ್ನಡಪ್ರಭ ವಾರ್ತೆ ಬೈಲಹೊಂಗಲ
ತಾಲೂಕಿನ ಹಿರೇಬೆಳ್ಳಿಕಟ್ಟಿ ಗ್ರಾಮದ ಲಿಂ.ಗಿರಿಮಲ್ಲೇಶ್ವರ ಹಾಗೂ ಶ್ರೀ ಮಾಧವಾನಂದ ಪ್ರಭುಜಿ ಆಶ್ರಮದಲ್ಲಿ ನಡೆದ ವಾರ್ಷಿಕ ಸಪ್ತಾಹ ಮತ್ತು 53ನೇ ವರ್ಷದ ಜಾತ್ರಾ ಮಹೋತ್ಸವದ ಧರ್ಮಸಭೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾತ್ರೆ, ಉತ್ಸವಗಳು ಪ್ರಾಚೀನ ಪರಂಪರೆಗಳನ್ನು ಬಿಂಬಿಸಿ ಧರ್ಮ, ಅಧ್ಯಾತ್ಮದ ತಳಹದಿ ಮೇಲೆ ಸಾಗಬೇಕು. ಒಂದೂರಿನ ಜನರು ಮತ್ತೂಂದೂರಿಗೆ ಮಾದರಿಯಾಗುವಂತೆ ಬದುಕಬೇಕು. ಸಾಮಾಜಿಕ ಕಾರ್ಯಗಳಿಂದ ಜನ ಮನ್ನಣೆ ಗಳಿಸಬೇಕೆಂದರು.
ಶಂಕರೆಪ್ಪ ಕೌಜಲಗಿ ಮಾತನಾಡಿ, ತಾಲೂಕಿನ ಗಡಿಯಂಚಿನ ಈ ಹಿರೇಬೆಳ್ಳಿಕಟ್ಟಿ ಗ್ರಾಮವು ನಿತ್ಯ ಹಲವಾರು ಧಾರ್ಮಿಕ ಕಾರ್ಯಗಳಿಂದ ಹೆಸರುವಾಸಿಯಾಗಿದೆ. ಗಿರಿಮಲ್ಲೇಶ್ವರ ಆಶ್ರಮದ ಮೂಲಕ ಸುತ್ತಲಿನ ಜನರನ್ನು ಅಧ್ಯಾತ್ಮದತ್ತ ಕರೆ ತಂದು ನೆಮ್ಮದಿ ಜೀವನಕ್ಕೆ ಕಾರಣವಾಗುತ್ತಿದೆ ಎಂದರು. ಭೀಮಣ್ಣ ಮಹಾರಾಜರು, ರಾಮಣ್ಣ ಮಹಾರಾಜರು, ಶೆಟ್ಟೆಪ್ಪ ಮಹಾರಾಜರು, ಸದಾಶಿವ ಮಹಾರಾಜರು, ಗೋಪಾಲ ಮಹಾರಾಜರು, ಯುವ ಧುರೀಣ ಕಿರಣ ಮೂಡಲಗಿ, ನಿವೃತ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೀಗಿಹಳ್ಳಿ, ಮುಖಂಡ ಮಹಾಂತೇಶ ಹಕಾರಿ, ಗಿರಿಮಲ್ಲ ಬೆಳವಡಿ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಶ್ರೀ ಗಿರಿಮಲ್ಲೇಶ್ವರ ಟ್ರಸ್ಟ ಕಮೀಟಿಯ ಸದಸ್ಯರು ವೇದಿಕೆ ಮೇಲಿದ್ದರು.ಗ್ರಾಮದ ಮುಖಂಡರು, ಹಿರಿಯರು, ಭಕ್ತರು ಪಾಲ್ಗೊಂಡಿದ್ದರು. ಮಾಧವಾನಂದ ಹಕಾರಿ ಸ್ವಾಗತಿಸಿ, ನಿರೂಪಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಇದಕ್ಕೂ ಮೊದಲು ಪುರಾಣ, ಕೀರ್ತನೆಗಳು ನಡೆದವು. ಶ್ರೀ ಗಿರಿಮಲ್ಲೇಶ್ವರರ ಹಾಗೂ ಶ್ರೀ ಮಾಧವಾನಂದ ಪ್ರಭುಜಿಯವರ ಗದ್ದುಗೆಗೆ ಕಾಕಡಾರತಿ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಅನ್ನ ಸಂತರ್ಪಣೆ ನಡೆದವು. ಗ್ರಾಮದ ಭಜನಾ, ಡೊಳ್ಳಿನ ಸಂಘಗಳಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.