ಮಲ್ಲಯ್ಯನ ಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕಾಡಾನೆ ದಾಳಿ ನಡೆಸಿ ಸೋಲಾರ್ ತಂತಿ ಬೇಲಿ ಹಾಗೂ ಕಲ್ಲು ಕಂಬ ಮುರಿಯುವ ಜೊತೆಗೆ ಮೆಕ್ಕೆಜೋಳದ ಫಸಲು ತಿಂದು ಹಾನಿ ಮಾಡಿದೆ.
ಹನೂರು: ಕಾಡಾನೆ ದಾಳಿಯಿಂದ ಪದೇ ಪದೆ ಸೋಲಾರ್ ತಂತಿ ಬೇಲಿ ಹಾನಿಯಾಗುತ್ತಿದ್ದು, ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಲ್ಲಯ್ಯನಪುರ ಗ್ರಾಮಸ್ಥರು ರೈತರು ಆರೋಪಿಸಿದ್ದಾರೆ.
ತಾಲೂಕಿನ ಮಲ್ಲಯ್ಯನ ಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕಾಡಾನೆ ದಾಳಿ ನಡೆಸಿ ಸೋಲಾರ್ ತಂತಿ ಬೇಲಿ ಹಾಗೂ ಕಲ್ಲು ಕಂಬ ಮುರಿಯುವ ಜೊತೆಗೆ ಮೆಕ್ಕೆಜೋಳದ ಫಸಲು ತಿಂದು ಹಾನಿ ಮಾಡಿದೆ.ಕಾಡಾನೆ ಜಮೀನುಗಳಿಗೆ ಬಾರದಂತೆ ತಡೆಗಟ್ಟಲು ರೈಲ್ವೆ ಗೇಟ್ ಅಥವಾ ಆನೆ ಕಂದಕವನ್ನು ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.