ಕೊಪ್ಪ ದೀಪ ಬೆಳಗಿಸುವ ಉದ್ದೇಶ ಮನೆ-ಮನದಲ್ಲಿರುವ ಕತ್ತಲನ್ನು ಹೋಗಲಾಡಿಸುವುದೇ ಆಗಿದೆ. ಅದೇ ರೀತಿ ನಮ್ಮಲ್ಲಿರುವ ಇಂಗ್ಲೀಷ್ ವ್ಯಾಮೋಹದ ಕತ್ತಲನ್ನು ಸರಿಸಿ ಮಾತೃಭಾಷೆ ಕನ್ನಡ ಮನೆ ಮನದ ನಮ್ಮ ಅಭಿಮಾನವಾಗಬೇಕು ಎಂದು ಹರಿಹರಪುರ ಶ್ರೀ ರಾ.ಸ.ಸ.ಮಾ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ಹೇಳಿದರು.
ಕನ್ನಡಪ್ರಭ ವಾರ್ತೆ, ಕೊಪ್ಪ
ದೀಪ ಬೆಳಗಿಸುವ ಉದ್ದೇಶ ಮನೆ-ಮನದಲ್ಲಿರುವ ಕತ್ತಲನ್ನು ಹೋಗಲಾಡಿಸುವುದೇ ಆಗಿದೆ. ಅದೇ ರೀತಿ ನಮ್ಮಲ್ಲಿರುವ ಇಂಗ್ಲೀಷ್ ವ್ಯಾಮೋಹದ ಕತ್ತಲನ್ನು ಸರಿಸಿ ಮಾತೃಭಾಷೆ ಕನ್ನಡ ಮನೆ ಮನದ ನಮ್ಮ ಅಭಿಮಾನವಾಗಬೇಕು ಎಂದು ಹರಿಹರಪುರ ಶ್ರೀ ರಾ.ಸ.ಸ.ಮಾ.ಹಿ.ಪ್ರಾ. ಶಾಲೆ ಮುಖ್ಯೋಪಾಧ್ಯಾಯಿನಿ ಕಮಲಾಕ್ಷಿ ಹೇಳಿದರು.ಹಾಲ್ಮುತ್ತೂರಿನ ದಿನೇಶ್ ಶೆಟ್ಟಿ ಕಸ್ತೂರಿಯವರ ಮನೆಯಂಗಳದಲ್ಲಿ ಆಯೋಜಿಸಿದ್ದ ಕಸಾಪ ನಡಿಗೆ ಹಳ್ಳಿ ಕಡೆಗೆ, ಮನೆ ಮನದಲ್ಲಿ ಸಾಹಿತ್ಯ ಹಾಗೂ ನಮ್ಮ ಆಹಾರ ನಮ್ಮ ಆರೋಗ್ಯ ಮನೆಮದ್ದು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವ್ಯವಹಾರಿಕ ಉದ್ಯೋಗಕ್ಕೆ ಎಲ್ಲಾ ಭಾಷೆಗಳ ಕಲಿಕೆ ನಮಗೆ ಅಗತ್ಯ ಜತೆಗೆ ಮಾತೃಭಾಷೆ ಪ್ರೇಮ ಹೊಂದಿರಬೇಕು ಪ್ರಸ್ತುತ ಕಸಾಪ ಹೋಬಳಿ ಘಟಕ ಹರಿಹರಪುರ ಮಕ್ಕಳಲ್ಲಿ ಕನ್ನಡ ಕಥೆ ಕವನ ಪ್ರಬಂಧ ಮುಂತಾದ ಸಾಹಿತ್ಯಿಕ ಸ್ಪರ್ಧೆ ಏರ್ಪಡಿಸಿ ಬರೆವಣಿಗೆಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಹರಿಹರಪುರ ಕಸಾಪ ಹೋಬಳಿ ಘಟಕ ಅಧ್ಯಕ್ಷ ವೈದ್ಯ ಬಿ.ಆರ್.ಅಂಬರೀಶ ಭಂಡಿಗಡಿ ಮಾತನಾಡಿ ಕಸಾಪ ನಡಿಗೆ ಹಳ್ಳಿಯ ಕಡೆಗೆ, ಮನೆ ಮನದಲ್ಲಿ ಸಾಹಿತ್ಯ ಕಾರ್ಯಕ್ರಮ ಹಲವಾರು ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಜನರಲ್ಲಿರುವ ಸಾಹಿತ್ಯಿಕ ಅಭಿರುಚಿಗೆ ವೇದಿಕೆಯಾಗುತ್ತಿದೆ ಮುಂದೆಈ ಕಾರ್ಯಕ್ರಮ ವಿನೂತನವಾಗಿ ಮುಂದುವರಿಯಲಿದೆ ಎಂದರು.ಕಸ್ತೂರಿ ದಿನೇಶ್ ಶೆಟ್ಟಿ ಮಾತನಾಡಿ ಹಳ್ಳಿಯ ಜನ ಸಾಮಾನ್ಯರನ್ನು ಗುರುತಿಸಿ ಸಾಹಿತ್ಯದ ಕಾರ್ಯಕ್ರಮ ನಡೆಸಿ ಪ್ರತಿಭಾವಂತರನ್ನು ಮುಖ್ಯ ವೇದಿಕೆಗೆ ತರುತ್ತಿರುವ ಸಾಹಿತ್ಯ ಪರಿಷತ್ತಿನ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದರು.
ಪ್ರಧಾನ ಸಂಚಾಲಕ ಶುಕುರ್ ಅಹಮದ್, ವೈದ್ಯ ಬಿ.ಆರ್.ಅಂಬರೀಶ ಹಾಗೂ ವೈದ್ಯ ಎ.ಎಂ.ಸುಬ್ರಹ್ಮಣ್ಯ ನಮ್ಮ ಆಹಾರ ನಮ್ಮ ಆರೋಗ್ಯ ಕುರಿತು ಸರಳವಾಗಿ ಮನೆಯಲ್ಲಿಯೇ ಮಾಡಬಹುದಾದ ಮನೆಮದ್ದು ಮಾಹಿತಿ ಹಂಚಿಕೊಂಡರು.ಕಸಾಪ ಭಂಡಿಗಡಿ ಗ್ರಾಮ ಘಟಕ ಅಧ್ಯಕ್ಷೆ ಅಸ್ಮಾ, ಸಫಾ ಶುಕುರ್ ಅಹಮದ್, ಪ್ರವೀಣ್ ಕುಸುರಿಗೆ, ಪುಷ್ಪಾ, ದಿನೇಶ್ ಶೆಟ್ಟಿ, ವನಜಾ, ಪ್ರಮದ ಎನ್.ಭಟ್, ಜಯ, ಮಮತಾ, ಜಯ, ಅನನ್ಯ, ಮಧುರ, ಜಾಯದ್ ಅಹಮದ್, ಮುಂತಾದವರು ಉಪಸ್ಥಿತರಿದ್ದರು.