ಕಡೂರು ರೈತ ದೇಶದ ಬೆನ್ನೆಲುಬಾದರೆ ರೈತರಿಗೆ ಪಶುಸಂಪತ್ತು ಬೆನ್ನೆಲುಬು. ಕೃಷಿ ಮತ್ತು ಪಶುಸಂಗೋಪನೆ ಎರಡನ್ನೂ ಜೊತೆಯಾಗಿ ಮಾಡಿ ಆರ್ಥಿಕವಾಗಿ ಮುಂದೆ ಬನ್ನಿ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಕರೆ ನೀಡಿದರು.

ಮಾಚಗೊಂಡನಹಳ್ಳಿಯಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ರೈತ ದೇಶದ ಬೆನ್ನೆಲುಬಾದರೆ ರೈತರಿಗೆ ಪಶುಸಂಪತ್ತು ಬೆನ್ನೆಲುಬು. ಕೃಷಿ ಮತ್ತು ಪಶುಸಂಗೋಪನೆ ಎರಡನ್ನೂ ಜೊತೆಯಾಗಿ ಮಾಡಿ ಆರ್ಥಿಕವಾಗಿ ಮುಂದೆ ಬನ್ನಿ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಕರೆ ನೀಡಿದರು. ತಾಲೂಕಿನ ಸಖರಾಯಪಟ್ಟಣದ ಮಾಚಗೊಂಡನಹಳ್ಳಿಯಲ್ಲಿ ತಾಪಂ, ತಾಲ್ಲೂಕು ಆಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ಶೇ.70 ಭಾಗ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆ ಮಾಡುತ್ತ ಆರ್ಥಿಕವಾಗಿ ಮುಂದೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪಶು ಸಂಪತ್ತು ದೇಶದ ಸಂಪತ್ತು. ಈ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಮಾಚಗೊಂಡನಹಳ್ಳಿಯಲ್ಲಿ ಪಶು ಆಸ್ಪತ್ರೆ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ 50 ಹೊಸ ಪಶು ಆಸ್ಪತ್ರೆ ಮಂಜೂ ರಾಗಿದೆ. ಅದರಲ್ಲಿ ನಮ್ಮ ಜಿಲ್ಲೆಗೆ 3 ಮಂಜೂರಾಗಿತ್ತು. ಈ ಭಾಗದಲ್ಲಿ ಸುಮಾರು 2500 ಜಾನುವಾರುಗಳಿದ್ದು, ಅದಕ್ಕ ನುಗುಣವಾಗಿ ಮಾಚಗೊಂಡನಹಳ್ಳಿಯಲ್ಲಿ ಪಶುಚಿಕಿತ್ಸಾಲಯ ಪ್ರಾರಂಭ ಮಾಡಿದ್ದು ಸ್ವಂತ ಕಟ್ಟಡ ಸಧ್ಯಕ್ಕಿಲ್ಲದ ಕಾರಣ ಶಾಲೆಯಲ್ಲಿಯೇ ಪ್ರಾರಂಭಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು. ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಮೋಹನಕುಮಾರ್ ಮಾತನಾಡಿ, ಮಾಚ ಗೊಂಡನಹಳ್ಳಿಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ 350 ರಿಂದ 400 ಲೀ.ಹಾಲು ಉತ್ಪಾದನೆಯಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಔಷಧ ಮತ್ತು ಶಸ್ತ್ರ ಚಿಕಿತ್ಸೆಗೂ ವ್ಯವಸ್ಥೆಯಿದೆ. ರೈತರು ಇದನ್ನು ಬಳಸಿಕೊಳ್ಳಿ ಎಂದರು. ಚಿಕ್ಕದೇವನೂರು ಗ್ರಾಪಂ ಅಧ್ಯಕ್ಷೆ ವಸಂತಾ ಸ್ವಾಮಿ ಮಾತನಾಡಿ, ಈ ಭಾಗಕ್ಕೆ ಆಸ್ಪತ್ರೆ ಅವಶ್ಯಕತೆಯಿದೆ. ಇಲ್ಲಿಂದ ಐದಾರು ಹಳ್ಳಿಗಳಲ್ಲಿ ಸಾವಿರಾರು ಜಾನುವಾರುಗಳು ಇವೆ. ಏನಾದರೂ ರೋಗವಾದಲ್ಲಿ ಅನೇಕ ಕಿಮೀ. ವರೆಗೆ ಪಶುಗಳನ್ನು ಹೊಡೆದು ಕೊಂಡು ಹೋಗಬೇಕಿತ್ತು. ಈ ಆಸ್ಪತ್ರೆ ಆಗಿರುವುದು ಸಂತಸವಾಗಿದೆ. ಸರಿಯಾದ ಸಿಬ್ಬಂದಿ ಒದಗಿಸಿ ಎಂದರು. ಗ್ರಾಮದ ಹಿರಿಯ ಮುಖಂಡ ರಾಮೇಗೌಡ ದೀಪ ಬೆಳಗಿಸಿದರು. ಗ್ರಾಪಂ ಉಪಾಧ್ಯಕ್ಷೆ ಶೋಭಾ ಪುಟ್ಟಸ್ವಾಮಿ , ಗ್ರಾಪಂ ಸದಸ್ಯರಾದ ಕಿರಣ್, ಲೋಹಿತ್ ಕುಮಾರ್, ಅಶೋಕ್, ಗಂಗಾಧರ್, ಚಂದ್ರಶೇಖರ್, ರಂಗಮ್ಮ, ಸುಲೋಚನಾ, ಸರಸ್ವತಿ, ವಿಎಸ್ಸೆಸ್ಸೆನ್ ನಿರ್ದೇಶಕ ಮಲ್ಲಿಕಾರ್ಜುನ, ಪಿಕಾರ್ಡ ಬ್ಯಾಂಕ್ ನಿರ್ದೇಶಕ ಮೋಹನನಾಯ್ಕ ಭಾಗವಹಿಸಿದ್ದರು. 23ಕೆಕೆಡಿಯು2

ಕಡೂರು ತಾಲೂಕಿನ ಸಖರಾಯಪಟ್ಟಣದ ಮಾಚಗೊಂಡನಹಳ್ಳಿಯಲ್ಲಿ ತಾಪಂ, ತಾಲೂಕು ಆಡಳಿತ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪಶು ಚಿಕಿತ್ಸಾಲಯವನ್ನು ಶಾಸಕ ತಮ್ಮಯ್ಯ ಉದ್ಘಾಟಿಸಿದರು.