ನರಗುಂದ: ಹಳ್ಳಿಯಿಂದಲೆ ದೇಶ ಉದ್ಧಾರ, ಹಾಗಾಗಿ ಹಳ್ಳಿಗಳಲ್ಲಿ ಪ್ರತಿಯೊಬ್ಬರೂ ಶ್ರಮ ಪಟ್ಟ ಕಾಯಕ ಮಾಡಬೇಕೆಂದು ಗಾಂಧೀಜಿಯವರು ಹೇಳಿದ ಮಾತು ಇಂದು ನಿಜವಾಗುತ್ತದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಚನ್ನಯ್ಯ ಕಾಡದೇವರಮಠ ಮಾತನಾಡಿ, ಒಂದು ಕೆಲಸವಾಗಲು ಒಂದು ಶಕ್ತಿ ಬೇಕು, ಆ ಶಕ್ತಿಯನ್ನು ಇಂತಹ ಶಿಬಿರಗಳು ನೀಡುತ್ತವೆ ಎಂದರು. ಗ್ರಾಮದ ಎಲ್ಲ ಹಿರಿಯರು ಇಲ್ಲಿ ನಡೆಯುವ ಏಳು ದಿನಗಳ ಎನ್ಎಸ್ಎಸ್ ಶಿಬಿರಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು. ಎಸ್. ವೈ. ಎಸ್. ಶಿಕ್ಷಣ ಸಂಸ್ಥೆಯ ನಿರ್ದೇಶಕ ಎ.ವಿ. ಪಾಟೀಲ ಮಾತನಾಡಿ, ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರು ಕೈಜೋಡಿಸಬೇಕು, ಆ ಹಿನ್ನೆಲೆಯಲ್ಲಿ ಎನ್ಎಸ್ಎಸ್ ವಾರ್ಷಿಕ ಶಿಬಿರಗಳು ಇಂತಹ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ. ಗ್ರಾಮಗಳೆಂದರೆ ಉತ್ತಮವಾದ ಕೃಷಿ ಪದ್ಧತಿಯನ್ನು ಹೊಂದಿರುತ್ತವೆ. ಅಂತಹ ಪದ್ಧತಿಗಳನ್ನು ಸ್ವಯಂಸೇವಕರು ಶಿಬಿರಗಳಿಂದ ತಿಳಿದುಕೊಳ್ಳಬೇಕು, ಜೊತೆಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಶಿಬಿರದ ಎಲ್ಲಾ ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿಯನ್ನು ಎನ್.ಎಸ್.ಎಸ್. ಅಧಿಕಾರಿ ಎಂ.ಇ. ವಿಶ್ವಕರ್ಮ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಿರೇಕೊಪ್ಪ ಗ್ರಾಪಂ ಅಧ್ಯಕ್ಷೆ ಮಂಜುಳಾ ಜಗಾಪೂರ, ಕಾಲೇಜಿನ ಪ್ರಾಚಾರ್ಯರಾದ ಆರ್.ಬಿ. ಪಾಟೀಲ, ವಿ.ಎಫ್. ಮೇಟಿ, ಬಿ.ಎಚ್. ರಿತ್ತಿ, ಶಂಕರಗೌಡ ಪಾಟೀಲ, ಯಲ್ಲಪ್ಪ ನೆಲಗುಡ್ಡದ, ಪಿ.ಎಚ್. ರಾಯರೆಡ್ಡಿ, ಕಿಲಬನೂರು, ಚಿಕ್ಕಯ್ಯ ಹಿರೇಮಠ, ವಿಠಲರೆಡ್ಡಿ ಮೇಟಿ, ವೆಂಕರೆಡ್ಡಿ ಹಳಕಟ್ಟಿ, ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.