ಕನ್ನಡಪ್ರಭ ವಾರ್ತೆ ಗದಗ
ಅವರು ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಶಿವಾನುಭವ ಸಮಿತಿ ಹಾಗೂ ಪಂಚಾಕ್ಷರಿ ಸೇವಾ ಸಮಿತಿಯ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮಗಳ ರೂಪುರೇಷೆ ಅಂತಿಮಗೊಳಿಸಿ ಮಾತನಾಡಿದರು.
ಅಡವೀಂದ್ರಸ್ವಾಮಿ ಮಠದ ಆಶ್ರಯದಲ್ಲಿ 333ನೇ ಶಿವಾನುಭವ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಎರಡು ದಿನಗಳವರೆಗೆ ಜರುಗಲಿದ್ದು, ನಾಡಿನ ಹೆಸರಾಂತ ಮಠಾಧೀಶರು, ಖ್ಯಾತ ಸಂಗೀತ ಕಲಾವಿದರು ಪಾಲ್ಗೊಳ್ಳುವರು. ಮಾ. 4ರಂದು ಸಂಜೆ 4 ಗಂಟೆಗೆ ರಾಷ್ಟ್ರೀಯ ಪಂಚಾಕ್ಷರ ಘರಾನಾ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗುವುದು. ಗದುಗಿನ ಜ. ಶಿವಾನಂದ ಬ್ರಹನ್ಮಠದ ಜ.ಸದಾಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹರ್ಲಾಪೂರದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸುವರು.ಮಾ.5ರಂದು ಬುಧವಾರ ಸಂಜೆ 4 ಗಂಟೆಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ ಸಮಾರಂಭ ಜರುಗಲಿದ್ದು, ಸಾನ್ನಿಧ್ಯವನ್ನು ಮುಂಡರಗಿಯ ನಾಡೋಜ ಜ.ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ವಹಿಸುವರು. ನೇತೃತ್ವ ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ವಹಿಸುವರು. ಅಂತಾರಾಷ್ಟ್ರೀಯ ಖ್ಯಾತ ಗಾಯಕ ಪದ್ಮಶ್ರೀ ಪಂ.ಎಂ. ವೆಂಕಟೇಶಕುಮಾರ ಸೇರಿದಂತೆ ನಾಡಿನ ಹೆಸರಾಂತ ಗಾಯಕರ ಗಾಯನವಿದ್ದು ಅಪರೂಪದ ವೈವಿಧ್ಯಮಯ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವಿದೆ ಎಂದು ಕಲಿಕೇರಿ ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರಸ್ವಾಮಿಗಳು, ಶಿವಾನುಭವ ಸಮಿತಿಯ ಡಾ. ಎಸ್.ಕೆ. ನಾಲತ್ವಾಡಮಠ, ಪ್ರಧಾನ ಕಾರ್ಯದರ್ಶಿ ಬಿ.ಬಿ. ತೋಟಗೇರ, ಸೇವಾ ಸಮಿತಿಯ ಪದಾಧಿಕಾರಿ ಮಲ್ಲಯ್ಯ ಶಿರೋಳಮಠ, ಡಾ. ಶಿವಬಸಯ್ಯ ಗಡ್ಡದಮಠ, ಶಿವಲಿಂಗಶಾಸ್ತ್ರಿ ಸಿದ್ದಾಪೂರ ಮುಂತಾದವರಿದ್ದರು.