ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಗಾಂಧಿ ಭವನಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳು,ಚಿಂತನೆಗಳನ್ನು ಇಂದಿನ, ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ 3 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಅದರಂತೆ ಜಿಲ್ಲೆಯಲ್ಲೂ ಭವನ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಆದಷ್ಟು ಭೇಗ ಪೂರ್ಣಗೊಳಿಸಲು ಯೋಜನಾ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಗಾಂಧಿ ಜಯಂತಿ ವೇಳೆಗೆ ಸಿದ್ಧಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿಯನ್ನು ಗಾಂಧಿ ಭವನದಕಟ್ಟಡದಲ್ಲೆ ನಡೆಸಲು ಅನುವಾಗುವಂತೆ ಕಾಮಗಾರಿ ಮುಗಿಸ ಬೇಕೆಂದು ಗುತ್ತಿಗೆ ದಾರರಿಗೆ ಈ ವೇಳೆ ಸೂಸಿಸಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ನಗರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದ್ದು, ಕಟ್ಟಡದ ಕಾಮಗಾರಿ ತೆವಳುತ್ತಿದೆ. ಗಾಂಧಿ ಭವನದ ಕನಸು ಈ ಭಾರಿಯ ಗಾಂಧಿ ಜಯಂತಿಗೆ ಈಡೇರುವ ಸಾಧ್ಯತೆ ಇದೆ. ಅನುದಾನ ಬಂದರೂ ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕಟ್ಟಡಕ್ಕೆ ಶಂಕುಸ್ಥಾಪನೆಯಾಗಿ 4 ವರ್ಷ ಕಳೆದರೂ ಜಿಲ್ಲೆಯ ಪಾಲಿಗೆ ಮಹಾತ್ಮನ ಭವನ ನಿರ್ಮಾಣದ ಕನಸು ಮಾತ್ರ ಬರೀ ಕನಸಾಗಿಯೆ ಉಳಿದಿತ್ತು. ರಾಜ್ಯದ ಪ್ರತಿ ಜಿಲ್ಲೆಗೊಂದರಂತೆ ಗಾಂಧಿ ಭವನ ನಿರ್ಮಾಣ ಆಗಬೇಕೆಂದು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಧಾರವಾಗಿ ಜಿಲ್ಲೆಗೆ ಅನುದಾನ ಕೂಡ ಮಂಜೂರಾಯಿತು. ಆದರೆ ಗಾಂಧಿ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಸಿಗದ ಕಾರಣಕ್ಕೆ ಕಾಮಗಾರಿ ಆರಂಭಗೊಳ್ಳದೇ ಭವನ ನಿರ್ಮಾಣ ನನೆಗುದಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ ಜುಂಜಣ್ಣ, ಯೋಜನಾ ಅಭಿಯಂತರ ತೇಜಸ್ ರೆಡ್ಡಿ ಇದ್ದರು.
ಸಿಕೆಬಿ-5 ಚಿಕ್ಕಬಳ್ಳಾಪುರ ನಗರದಲ್ಲಿ ಗಾಂಧಿಭವನದ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ ಪರಿಶೀಲಿಸಿದರು