ಹೆಮ್ಮಾಡಿ: ಗಾಂಧಿ ಜಯಂತಿ ಸಮಾರಂಭ

KannadaprabhaNewsNetwork |  
Published : Oct 03, 2024, 01:23 AM IST
ವಿವಿವಿ ಮಂಡಳಿ ಆಡಳಿತದ ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಬುಧವಾರ ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಕ್ತನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಹೆಮ್ಮಾಡಿ ಜನತಾ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಸಮಾರಂಭ ನಡೆಯಿತು. ಈ ಸಂದರ್ಭ ಗಣ್ಯರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಉತ್ಸಾಹ ತೋರುತ್ತಾರೋ ಆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವ‌ ಮೂಲಕ ಜನತಾ ಪ್ರೌಢ ಶಾಲೆಯ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್‌ ಹೇಳಿದರು.

ಅವರು ವಿದ್ಯಾದಾಯಿನಿ ವಿವಿಧೋದ್ದೇಶ ವಿದ್ಯಾಪ್ರಸಾರ ಮಂಡಳಿ ಆಡಳಿತದ ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಬುಧವಾರ ಜರುಗಿದ ಗಾಂಧಿ ಜಯಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು‌.

ಒಬ್ಬ ಗ್ರಾಮೀಣ ಭಾಗದ ಹುಡುಗನಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಪ್ರೇರೇಪಿಸಿ, ಮತ್ತಷ್ಟು ಅವಕಾಶಗಳನ್ನು ನೀಡುವ ಮೂಲಕವಾಗಿ ಸುಜಯ್ ಇಂದು ಕಬಡ್ಡಿ ಚಾಂಪಿಯ್ಶಿಪ್‌ನಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು‌ ಗಳಿಸುವಂತಾಗಿರುವುದು ಶ್ಲಾಘನೀಯ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಗಾಂಧೀಜಿಯವರನ್ನು ದೇವರಂತೆಯೇ ಆರಾಧಿಸುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ರಾಜಕೀಯ ದ್ವೇಷಗಳಿಂದಾಗಿ ಮಹಾತ್ಮ‌ಗಾಂಧೀಜಿ ಅವರನ್ನು ಖಳನಾಯಕನಾಗಿ ಬಿಂಬಿಸಲಾಗುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ ಎಂದು ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಪ್ರಾಕ್ತನ ವಿದ್ಯಾರ್ಥಿಗಳ ಸಾಧನೆಗಳನ್ನು ಬೆನ್ನು ತಟ್ಟಿ, ಸ್ಪೂರ್ತಿ‌ ತುಂಬಿಸುವ ಜೊತೆ ಜೊತೆಗೆ ನಮ್ಮ‌ ವಿದ್ಯಾರ್ಥಿಗಳಿಗೆ ಇಂತಹ ಉದಯೋನ್ಮುಖ ಸಾಧಕರ ಸಾಧನೆ ಪ್ರೇರಣೆಯಾಗಲಿ ಎನ್ನುವುದೇ ಈ ಕಾರ್ಯಕ್ರಮದ ಸದುದ್ದೇಶ. ನಮ್ಮಂತಹ ಶಿಕ್ಷಕರು ಪ್ರೀತಿಸುವುದು ನಿಮ್ಮಂತ ಶಿಷ್ಯವೃಂದದವರನ್ನು ಎಂದರು‌.

ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಯುವ ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಜಯ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಶ್ರೀಧರ ಗಾಣಿಗ, ಪ್ರವೀತಾ ಅಶೋಕ್, ವಿದ್ಯಾ, ಬೋಧಕೇತರ ಸಿಬ್ಬಂದಿ ಸೌಮ್ಯ, ಪ್ರಾಕ್ತನ ವಿದ್ಯಾರ್ಥಿ ನಾದಶ್ರೀ ಉಪಸ್ಥಿತರಿದ್ದರು.

ಶಿಕ್ಷಕರಾದ ವಿಠಲ್ ನಾಯ್ಕ್ ಸ್ವಾಗತಿಸಿದರು. ದೇವೇಂದ್ರ ನಾಯ್ಕ್ ವಂದಿಸಿದರು. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್ಚೆತ್ತ ಬೆಂ.ವಿವಿ: ಲೋಪ ಸರಿಪಡಿಸಿ 400 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ
ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ