ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ಕಂದಾಯ ಇಲಾಖೆ ಆಯೋಜಿಸಿದ್ದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಗಣೇಶ್ ಪ್ರಸಾದ್ ಅವರು, ತಾಲೂಕಿನ ಬರಗಿ ಗ್ರಾಮದಿಂದ ಮುಕ್ತಿ ಕಾಲೋನಿ ಹಾಗೂ ಮುಂಟೀಪುರ ಬೇರ್ಪಡಿಸಿದ ಬಳಿಕ ಹೊಸ ಕಂದಾಯ ಗ್ರಾಮ ರಚನೆ ಬಳಿಕ ಮುಂಟೀಪುರ ಹಾಗೂ ಮುಕ್ತಿ ಕಾಲೋನಿಯಲ್ಲಿ ಕಂದಾಯ ಜಾಗದಲ್ಲಿ ಮನೆ ಕಟ್ಟಿದ್ದ 82 ಮಂದಿ ಫಲಾನುಭವಿಗಳಿಗೆ ಕಂದಾಯ ಇಲಾಖೆಯೇ ಮುತುವರ್ಜಿ ವಹಿಸಿ ಕಟ್ಟಿದ್ದ ವಾಸದ ಮನೆ ನೋಂದಾಯಿಸಿ, ಗ್ರಾಪಂ ಇ-ಸ್ವತ್ತು ಮಾಡಿಸಿದ ಬಳಿಕ ವಾಸದ ಮನೆಯ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
10 ಸಾಗುವಳಿ ಚೀಟಿ:ತಾಲೂಕಿನ ಹಂಗಳ ಹೋಬಳಿಯ ಬೊಮ್ಮಲಾಪುರ ಗ್ರಾಮದ ದೇವಮ್ಮಣ್ಣಿ, ನಾಗಮ್ಮ, ಗವಿಯಮಣ್ಣಿ, ಹನುಮಂತಯ್ಯ, ಕುಮಾರ, ಕಸಬಾ ಹೋಬಳಿಯ ನೇನೇಕಟ್ಟೆ ಗ್ರಾಮದ ಸಿದ್ದಮ್ಮ, ಸಿದ್ದರಾಜು, ಶಿವಕುಮಾರ, ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಮಂಜುಳ, ಸಿದ್ದರಾಜುಗೆ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯ ತೀರ್ಮಾನದಂತೆ ಸಾಗುವಳಿ ಜಮೀನಿಗೆ ದುರಸ್ತಿಪಡಿಸಿ, ನೋಂದಣಿ ಮಾಡಿಸಿ ,ಖಾತೆ ಮಾಡಿಸಿ 10 ಸಾಗುವಳಿ ಚೀಟಿಯನ್ನು ಶಾಸಕರು ವಿತರಿಸಿದರು.
ಜಿಲ್ಲೆಗೆ ಮೊದಲು ಗುಂಡ್ಲುಪೇಟೆ!
ಜಿಲ್ಲೆಯ ಯಾವ ತಾಲೂಕಿನಲ್ಲೂ ಕಂದಾಯ ಜಾಗದಲ್ಲಿ ವಾಸದ ಮನೆ ಕಟ್ಟಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಆದರೆ ಗುಂಡ್ಲುಪೇಟೆ ಶಾಸಕ ಹಾಗೂ ತಹಸೀಲ್ದಾರ್ ಕಾಳಜಿ ಫಲವಾಗಿ ಹಕ್ಕುಪತ್ರ ಫಲಾನುಭವಿಗಳ ಕಿಸೆ ಸೇರಿವೆ.