ಗಂಗಾಮತ ಸಮಾಜ ಮುಖ್ಯವಾಹಿನಿಗೆ ಬರಲು ವಿಫಲ

KannadaprabhaNewsNetwork |  
Published : Oct 28, 2026, 02:15 AM IST
ಹರಪನಹಳ್ಳಿ ತಾಲೂಕಿನ ಕಂಚೀಕೆರೆ ಗ್ರಾಮದಲ್ಲಿ  ತಾಲೂಕು ಗಂಗಾಮತ ಸಮಾಜದ ಸಂಘಟನಾ ಸಭೆಯನ್ನು ಉಪಾದ್ಯಕ್ಷ ಮತ್ತಿಹಳ್ಳಿ ನಿಂಗಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮೆದುರಿಗೆ ನಡೆಯುವ ಅನ್ಯಾಯವನ್ನು ಸಹಿಸುವುದು ನಾವುಗಳು ಕೂಡ ಅನ್ಯಾಯವೆಸಗುವುದಕ್ಕೆ ಪ್ರೇರೇಪಣೆ ನೀಡಿದಂತಾಗುತ್ತದೆ.

ಹರಪನಹಳ್ಳಿ: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಗಂಗಾಮತ ಸಮಾಜವು ಅತ್ಯಂತ ಹಿಂದುಳಿದಿದ್ದು ಮುಖ್ಯವಾಹಿನಿಗೆ ಬರುವಲ್ಲಿ ವಿಫಲವಾಗಿದೆ ಎಂದು ನಿವೃತ್ತ ಎಂಜಿನಿಯರ್‌ ಬಾರಿಕರ ಚಂದ್ರಪ್ಪ ವಿಷಾದಿಸಿದ್ದಾರೆ.

ತಾಲೂಕಿನ ಕಂಚೀಕೆರೆ ಗ್ರಾಮದಲ್ಲಿ ಹರಪನಹಳ್ಳಿ ತಾಲೂಕು ಗಂಗಾಮತ ಸಮಾಜದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಪೋಷಕರು ತಮಗೆ ಎಷ್ಟೇ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಸಮಾಜದ ಯುವಕರು ದೇಶದ ಪ್ರತಿಷ್ಠಿತ ಹುದ್ದೆಗಳಾದ ಐಎಎಸ್ ಹಾಗೂ ಐಪಿಎಸ್ ನಂತಹ ಸ್ಪರ್ಧಾತ್ಮಕ ಹುದ್ದೆ ಪಡೆಯುವತ್ತ ದೊಡ್ಡ ಕನಸು ಹೊಂದಬೇಕು. ಆಗ ಮಾತ್ರ ಸಮಾಜದ ಏಳ್ಗೆ ಸಾಧ್ಯವೆಂದರು.

ವಕೀಲ ಕಣಿವಿಹಳ್ಳಿ ಬಿ. ಮಂಜುನಾಥ ಮಾತನಾಡಿ. ನಮ್ಮೆದುರಿಗೆ ನಡೆಯುವ ಅನ್ಯಾಯವನ್ನು ಸಹಿಸುವುದು ನಾವುಗಳು ಕೂಡ ಅನ್ಯಾಯವೆಸಗುವುದಕ್ಕೆ ಪ್ರೇರೇಪಣೆ ನೀಡಿದಂತಾಗುತ್ತದೆ. ಗಂಗಾಮತ ಸಮಾಜದ ಗುರುಗಳಾದ ವೇದವ್ಯಾಸ ಮಹರ್ಷಿಗಳು ವಿಶ್ವಕ್ಕೆ ಗುರುವಾಗಿದ್ದಾರೆ. ಇಂತಹ ಸಮಾಜದಲ್ಲಿ ಜನಿಸಿದ ನಾವುಗಳು ಧನ್ಯರು, ಸಮಾಜದ ಏಳ್ಗೆಗೆ ಎಲ್ಲರು ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.

ಗಂಗಾಮತ ಸಮಾಜದ ಮಾಜಿ ಅಧ್ಯಕ್ಷ ಅರಸೀಕೆರೆ ರಾಮಣ್ಣ ಮಾತನಾಡಿ. ಸಂಘಟನೆಗಳು ಬೆಳೆಯಲು ನಾಯಕತ್ವ ಗುಣವುಳ್ಳ ಪ್ರತಿಭಾಂತರನ್ನು ಆಯ್ಕೆ ಮಾಡಬೇಕು, ಯುವಜನತೆಯು ವೈಜ್ಞಾನಿಕವಾಗಿ ಸಾಕಷ್ಟು ಮುನ್ನೆಲೆಯಲ್ಲಿದ್ದಾರೆ. ಆದ್ದರಿಂದ ಅವರನ್ನು ಗುರುತಿಸಿ ಬೆಳೆಸುವ ಕೆಲಸ ಮಾಡಬೇಕು ಎಂದ ಹೇಳಿದರು.

ಗಂಗಾಮತ ಸಮಾಜದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹರಿಯಮ್ಮನಹಳ್ಳಿ ಅಂಜಿನಪ್ಪ ಮಾತನಾಡಿ. ಸಮಾಜದ ಕೋಟದಡಿ ವಿವಿಧ ಇಲಾಖೆಗಳಲ್ಲಿ ಸ್ಥಾನಮಾನ ಪಡೆದಿರುವ ನೌಕರರು ಸಮಾಜದ ಕಾರ್ಯಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸಮಾಜದ ಬಗ್ಗೆ ನಮಗೆ ಕೀಳರಿಮೆ ಇರಬಾರದು. ಸಮಾಜದ ಬೆಳವಣಿಗೆಗೆ ಪಕ್ಷಾತೀತವಾಗಿ, ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.

ನಿವೃತ್ತ ಎಇಇ ಕೆ.ಸಿ. ಗಂಗಾಧರ, ಮುಖಂಡರಾದ ಬಸವರಾಜಪ್ಪ, ಮಂಜುನಾಥ, ಭೀಮಪ್ಪ, ರೇವಣಸಿದ್ದಪ್ಪ, ಕೆಂಚಪ್ಪ, ಪವಾಡಿ ಬಸವರಾಜ, ಜಾಲಗಾರ ಕೊಟ್ರೇಶ, ಅಣಜಿಗೆರೆ ನಿಂಗಪ್ಪ, ಕ್ಯಾರಕಟ್ಟಿ ಸಣ್ಣ ಶೇಖರಪ್ಪ, ದೊಡ್ಡ ಶೇಖರಪ್ಪ, ಶಿಕ್ಷಕ ರಾಜಶೇಖರ, ಪವಾಡಿ ದೇವೇಂದ್ರಪ್ಪ, ರವಿ ಎನ್, ಬಿ.ವೈ. ದುರುಗೇಶ, ಉಚ್ಚಂಗಿದುರ್ಗ ಚೌಡಪ್ಪ, ಚಿಗಟೇರಿ ಸುರೇಶ, ಹಾಲಮ್ಮ, ಕಡತಿ ನಾಗರಾಜ, ಗರ್ಭಗುಡಿ ಶೇಖಪ್ಪ, ಮಂಜುನಾಥ, ತಾವರಗುಂದಿ ಯಲ್ಲಪ್ಪ, ಸಾತಲಿಂಗಪ್ಪ, ಸೇರಿದಂತೆ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಂದ ಬಂದಿದ್ದ ಸಮಾಜದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆ ಧಮ್ಕಿ ಹಾಕಿ ದಾಂಧಲೆ : ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್