ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬದಲಾವಣೆಗಾಗಿ ಸಹಭಾಗಿತ್ವದ ಭವಿಷ್ಯ ಎಂಬ ಪರಿಕಲ್ಪನೆಯಲ್ಲಿ ‘ವಿಶ್ವ ಸಮಾಜಕಾರ್ಯ ದಿನ- 2024 ’ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಜಾಬ್ ರಾಜ್ಯದ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಪ್ರಮಾಣವು ಶೇ.65.5 ರಷ್ಟಿದೆ. ಭಾರತದ ಗ್ರಾಮೀಣ ಭಾಗದಲ್ಲಿ ಬಡತನ, ಮೂಲ ಸೌಕರ್ಯಗಳಾದ ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆ, ಅಸಮರ್ಪಕ ಆರೋಗ್ಯ ಸೌಲಭ್ಯಗಳು, ಅನಕ್ಷರತೆ, ನಿರುದ್ಯೋಗ ಮತ್ತು ಕೃಷಿ ಸವಾಲುಗಳು ಇಂದಿಗೂ ಚಾಲ್ತಿಯಲ್ಲಿವೆ. ಇಂತಹ ಸಮಸ್ಯೆಗಳನ್ನು ಸವಾಲುಗಳಾಗಿ ತೆಗೆದುಕೊಂಡು ಪರಿಹಾರ ನೀಡಬೇಕಾದವರು ಸಮಾಜಕಾರ್ಯದವರು ಎಂದು ತಿಳಿಸಿದರು.ಸಮಾಜಮುಖಿ ಕಾರ್ಯಗಳನ್ನು ಶಿಬಿರಗಳ ಮೂಲಕ ಬಗೆಹರಿಸುವ ಕಾರ್ಯವಾಗಬೇಕು. ನಗರ ಪ್ರದೇಶದ, ಮೂಲಭೂತ ಸೌಕರ್ಯ ವಂಚಿತ ಪ್ರದೇಶಗಳಲ್ಲಿ ಶಿಬಿರಗಳನ್ನು ಏರ್ಪಡಿಸಬೇಕು.ಅಲ್ಲಿನ ಸವಾಲುಗಳನ್ನು ಸಮಸ್ಯೆಗಳೆಂದು ಭಾವಿಸದೇ, ದೇಶದ ಅಭಿವೃದ್ಧಿಗಾಗಿ ದುಡಿಮೆ ಎಂದು ಕಾರ್ಯನಿರ್ವಹಿಸಬೇಕು ಎಂದರು.
ಸಮಾಜಕಾರ್ಯ ವಿದ್ಯಾರ್ಥಿಗಳು ಗ್ರಾಮೀಣ ಸ್ಥಿತಿಗತಿಗಳಿಗೆ ತೆರೆದುಕೊಳ್ಳಬೇಕು. ಅಭಿವೃದ್ಧಿಯ ಶೂನ್ಯ ಸಂಪರ್ಕವಿರುವ ಗ್ರಾಮಗಳನ್ನು ಸುಧಾರಿಸುವ ಸವಾಲುಗಳನ್ನು ತೆಗೆದುಕೊಳ್ಳಬೇಕು. ಬದಲಾವಣೆ ತರಲು ನಾವು ಮೊದಲು ಬದಲಾಗಬೇಕು ಎಂದು ತಿಳಿಸಿದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಸ್ನಾತಕೋತ್ತರ ಸಮಾಜಕಾರ್ಯಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಜಿ. ಪರಶುರಾಮ ಉಪಸ್ಥಿತರಿದ್ದರು.