ಕಸದ ರಾಶಿ; ಸಿಎಂ ಕಚೇರಿಯಿಂದ ಸೂಚನೆ

KannadaprabhaNewsNetwork |  
Published : Sep 30, 2026, 01:45 AM IST
ಚಿತ್ರ 29ಬಿಡಿಆರ್3ಕಮಲನಗರ ಪಟ್ಟಣದ ವಾರ್ಡ ಸಂಖ್ಯೆ 3ರ ಮುಖ್ಯ ರಸ್ತೆ ಮತ್ತು ರೈಲ್ವೆ ಗೇಟ್‌ ಬಳಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಿರುವುದು. | Kannada Prabha

ಸಾರಾಂಶ

ಪಟ್ಟಣದ ವಾರ್ಡ ಸಂಖ್ಯೆ 3ರ ಮುಖ್ಯ ರಸ್ತೆ ಮತ್ತು ರೈಲ್ವೆ ಗೇಟ್‌ ಬಳಿ ರಾಶಿ ರಾಶಿಯಾಗಿ ಬಿದ್ದಿದ್ದ ತ್ಯಾಜ್ಯ ಹಾಗೂ ಕೊಳಕು ವಾಸನೆ ಹರಡಿದ್ದರ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ಸೆ. 10ರ ವಿಶೇಷ ವರದಿಯು ಮುಖ್ಯಮಂತ್ರಿಗಳ ಕಚೇರಿ ಗಮನ ಸೆಳೆದಿದ್ದು, ವಿಶೇಷ ವರದಿಗೆ ಸ್ಥಳೀಯ ಆಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಶುಚಿತ್ವಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಕಮಲನಗರ

ಪಟ್ಟಣದ ವಾರ್ಡ ಸಂಖ್ಯೆ 3ರ ಮುಖ್ಯ ರಸ್ತೆ ಮತ್ತು ರೈಲ್ವೆ ಗೇಟ್‌ ಬಳಿ ರಾಶಿ ರಾಶಿಯಾಗಿ ಬಿದ್ದಿದ್ದ ತ್ಯಾಜ್ಯ ಹಾಗೂ ಕೊಳಕು ವಾಸನೆ ಹರಡಿದ್ದರ ಕುರಿತು ಕನ್ನಡಪ್ರಭ ಪ್ರಕಟಿಸಿದ್ದ ಸೆ. 10ರ ವಿಶೇಷ ವರದಿಯು ಮುಖ್ಯಮಂತ್ರಿಗಳ ಕಚೇರಿ ಗಮನ ಸೆಳೆದಿದ್ದು, ವಿಶೇಷ ವರದಿಗೆ ಸ್ಥಳೀಯ ಆಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಶುಚಿತ್ವಕ್ಕೆ ಮುಂದಾಗಿದೆ.ವಿಶೇಷ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿ ಹಾಗೂ ಬೀದರ್‌ ಜಿಪಂ ಸಿಇಒ ಅವರಿಗೆ ಸೆ. 10ರಂದು ಪತ್ರ ಬರೆದು ಈ ಕುರಿತು ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡುವಂತೆ ಸೂಚನೆ ನೀಡಿದ್ದರು. ಸಿಎಂ ಕಚೇರಿಯ ಸೂಚನೆ ಮೇರೆಗೆ 24 ಗಂಟೆಯಲ್ಲಿಯೇ ಪಿಡಿಒ ದಿಲೀಪ ಸಂತಪೂರೆ ಹಾಗೂ ಪಂಚಾಯತ್‌ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಿತು. ತಕ್ಷಣವೇ ವಿಶೇಷ ಸ್ವಚ್ಛತಾ ಸಿಬ್ಬಂದಿ ಹಾಗೂ ಜೆಸಿಬಿ ವಾಹನಗಳನ್ನು ಬಳಸಿ, ರಸ್ತೆ ಬದಿಯಲ್ಲಿದ್ದ ಟನ್‌ಗಟ್ಟಲೆ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ನಿಯೋಜಿತ ಘಟಕಕ್ಕೆ ರವಾನಿಸಲಾಗಿದೆ.ಪ್ರಸ್ತುತ ಇಡೀ ಪ್ರದೇಶವು ಕಸಮುಕ್ತವಾಗಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ. ಆ ಜಾಗದಲ್ಲಿ ಕಸ ಹಾಕುವುದು ನಿಷೇಧಿಸಲಾಗಿದೆ ಎಂಬ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು ಜೊತೆಗೆ ಸಾರ್ವಜನಿಕರು ರಸ್ತೆಗಳ ಮೇಲೆ ಕಸ ಹಾಕದೆ, ನಿತ್ಯ ಬೆಳಿಗ್ಗೆ ಬರುವ ಆಟೋ ಟಿಪ್ಪರ್ ವಾಹನಗಳಿಗೆ ಕಸ ನೀಡುವಂತೆ ಜಾಗೃತಿ ಮೂಡಿಸಲಾಗುವುದು. ನಿಯಮ ಮೀರಿ ಕಸ ಎಸೆಯುವವರಿಗೆ ದಂಡ ವಿಧಿಸುವುದಾಗಿ ಅಧಿಕಾರಿಗಳು ಕಠಿಣ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾ ವರದಿಯ ತೀವ್ರತೆಗೆ ಸ್ಪಂದಿಸಿ ಕೇವಲ 24 ಗಂಟೆಗಳಲ್ಲಿ ಕಸದ ಗಂಡಾಂತರದಿಂದ ಮುಕ್ತಿ ಕೊಡಿಸಿದ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕ ಧ್ವನಿಯಾದ ಪತ್ರಿಕೆಗೆ ಸ್ಥಳೀಯ ನಿವಾಸಿಗಳು ಮತ್ತು ವಾರ್ಡಿನ ಜನತೆ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ
ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ