ಉಡುಪಿ ರೈಲ್ವೆ ಯಾತ್ರಿ ಸಂಘದ ಮಹಾಸಭೆ

KannadaprabhaNewsNetwork |  
Published : Oct 29, 2026, 02:45 AM IST
27ಯಾತ್ರಿ | Kannada Prabha

ಸಾರಾಂಶ

ಉಡುಪಿ ರೈಲ್ವೆ ಯಾತ್ರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಧೀರಜ್ ಎನ್ ಶಾಂತಿ ಅಧ್ಯಕ್ಷತೆಯಲ್ಲಿ ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ನಡೆಯಿತು.

ಉಡುಪಿ: ಉಡುಪಿ ರೈಲ್ವೆ ಯಾತ್ರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಧೀರಜ್ ಎನ್ ಶಾಂತಿ ಅಧ್ಯಕ್ಷತೆಯಲ್ಲಿ ನಗರದ ಹಿಂದಿ ಪ್ರಚಾರ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಅಮೃತ್ ಯೋಜನೆಯಂತಹ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಘ ನಿರಂತರ ಹೋರಾಟ ನಡೆಸಲು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು - ಜನಪ್ರತಿನಿಧಿಗಳನ್ನು ಭೇಟಿಯಾಗಿ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.

ಸಂಘದ ನಿರ್ದೇಶಕರು ಮತ್ತು ಸದಸ್ಯರಾದ ಸದಾನಂದ ಅಮೀನ್, ರಾಧಾಕೃಷ್ಣ ರಾವ್, ಜಯರಾಮ್ ಪ್ರಭು, ರತ್ನಶ್ರೀ ಆಚಾರ್ಯ, ಹೇಮನಾಥ ಹೆಗ್ದೆ, ಪಿ ಎನ್ ರವೀಂದ್ರ, ಅಪ್ರಾಯ ಶೆಟ್ಟಿಗಾರ್, ಮಹಮ್ಮದ್ ಮೌಲಾ, ಶ್ರೀನಿವಾಸ ಶೆಟ್ಟಿ ತೊನ್ಸೆ, ರವೀಶ್ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ತಿಲಕನಾಥ್ ಮಂಜೇಶ್ವರ, ಐವಾನ್ ಡಿಸೋಜ, ನಾರಾಯಣ ಕಾಂಚನ್ ಮತ್ತಿತರರು ಹಾಜರಿದ್ದರು.

ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ವಾರ್ಷಿಕ ವರದಿ, ಕೋಶಾಧಿಕಾರಿ ಯು. ಅಜಿತ್ ಕುಮಾರ್ ಶೆಣೈ ಅವರು ಲೆಕ್ಕಪತ್ರ ಮಂಡನೆ ಮಾಡಿದರು. ನಿರ್ದೇಶಕರಾದ ಜನಾರ್ದನ್ ಕೋಟ್ಯಾನ್ ಸ್ವಾಗತಿಸಿ, ಜಾನ್ ರೆಬೆಲ್ಲೊ ವಂದಿಸಿದರು. ಪ್ರಭಾಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆ ಧಮ್ಕಿ ಹಾಕಿ ದಾಂಧಲೆ : ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್