ಕಾನೂನಿನ ಸಾಮಾನ್ಯ ಜ್ಞಾನ ಎಲ್ಲರಿಗೂ ಅಗತ್ಯ

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಕಾನೂನು ಎಂಬುದು ಸಾಮಾನ್ಯ ಜ್ಞಾನ ಇದ್ದಂತೆ. ಹುಟ್ಟಿನಿಂದ ಹಿಡಿದು ಸಾಯುವವರೆಗೆ ಸುಗಮ ಜೀವನಕ್ಕಾಗಿ ಕಾನೂನಿನ ಸಾಮಾನ್ಯ ಜ್ಞಾನವನ್ನು ಇಟ್ಟುಕೊಂಡು ಬದುಕಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾದೀಶ ಸುನಿಲ್ ಎಸ್.ಹೊಸಮನಿ ನುಡಿದರು.

ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿದ ನ್ಯಾ.ಸುನಿಲ್ ಎಸ್.ಹೊಸಮನಿ । ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರ

ಕಾನೂನು ಎಂಬುದು ಸಾಮಾನ್ಯ ಜ್ಞಾನ ಇದ್ದಂತೆ. ಹುಟ್ಟಿನಿಂದ ಹಿಡಿದು ಸಾಯುವವರೆಗೆ ಸುಗಮ ಜೀವನಕ್ಕಾಗಿ ಕಾನೂನಿನ ಸಾಮಾನ್ಯ ಜ್ಞಾನವನ್ನು ಇಟ್ಟುಕೊಂಡು ಬದುಕಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾದೀಶ ಸುನಿಲ್ ಎಸ್.ಹೊಸಮನಿ ನುಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಲಕ್ಷ್ಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡದರು.

ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು

ಇತ್ತೀಚಿನ ದಿನಗಳಲ್ಲಿ ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ಮತ್ತು ಬಾಲ್ಯವಿವಾಹದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನಿನಲ್ಲಿ ಇವೆಲ್ಲವೂ ಶಿಕ್ಷಾರ್ಹ ಅಪರಾಧ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡದಿದ್ದರೆ ಅದೂಕಾನೂನು ಉಲ್ಲಂಘನೆಯಾಗುತ್ತದೆ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ವಿವರಿಸಿದರು.

ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಮಂಜುಳಾ ಭೀಮರಾವ್ ಮಹಿಳೆಯರು ಮನಸು ಮಾಡಿದರೆ ಯಾವುದೇ ಕುಟುಂಬದಲ್ಲಿ ಸಂಸ್ಕಾರ, ಸ್ವಾವಲಂಬನೆ, ಸ್ವಾಭಿಮಾನ, ಸಾಧನೆಗಳು ಸಾಧ್ಯವಾಗುತ್ತದೆ. ಇದನ್ನು ಅರಿತು ಮಹಿಳೆಯರು ಕುಟುಂಬವನ್ನು ಸುಸ್ಥಿತಿಯತ್ತ ಕೊಂಡೊಯ್ಯಬೇಕು ಎಂದು ನುಡಿದರು.

ಕೌನ್ಸೆಲಿಂಗ್‌ ಮಾಡಲು ಮನವಿ

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಮಹಿಳೆಯರು ತಮ್ಮ ಕುಟುಂಬದವರ ಜತೆ ಹೇಳಿಕೊಳ್ಳಲಾಗದ ಅನೇಕ ನೋವುಗಳಿಗೆ ತುತ್ತಾಗಿರುತ್ತಾರೆ. ಅಂತಹವರ ನೆರವಿಗಾಗಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲೇ ಕೌನ್ಸೆಲಿಂಗ್ ಕಾರ್ಯಕ್ರಮ ನಡೆಸಿದರೆ ಅವರಲ್ಲಿ ಧೈರ್ಯ-ಸ್ತೈರ್ಯ ರೂಡಿಸಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿದರು.

ಯೋಜನೆ ಜಿಲ್ಲಾ ನಿರ್ದೇಶಕ ಸಿ.ಎಚ್.ಪದ್ಮಯ್ಯ ಮಾತನಾಡಿ, ಧರ್ಮಸ್ಥಳ ಸಂಘದಲ್ಲಿ ಯಾವುದೇ ಲಂಚ, ಋಷುವತ್ತುಗಳಿಗೆ ಅವಕಾಶ ಇಲ್ಲ. ಬಡವರು ಅರ್ಜಿ ಸಲ್ಲಿಸಿದ ಒಂದೇ ವಾರದಲ್ಲಿ ಸಾಲ ದೊರಕಿಸಲಾಗುವುದು. ಅದನ್ನು ಕುಟುಂಬದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜ್ಞಾನವಿಕಾಸ ಯೋಜನೆ ಪ್ರಾದೇಶಿಕ ಅಧಿಕಾರಿ ಸಂಧ್ಯಾ ವಿ.ಶೆಟ್ಟಿ ಕೋಲಾರ ತಾಲೂಕು ಯೋಜನಾಧಿಕಾರಿ ಸಿದ್ಧಗಂಗಯ್ಯ, ವಿಜಯಕುಮಾರ್, ಸೌಮ್ಯ, ಹರೀಶ್, ಪತ್ರಕರ್ತ ಗೋಪಿನಾಥ್‌ ಇದ್ದರು.

೧೭ಕೆಎಲ್‌ಆರ್-೫....

ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ನ್ಯಾ. ಸುನಿಲ್ ಎಸ್.ಹೊಸಮನಿ ಉದ್ಘಾಟಿಸಿದರು.

Share this article