ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ, ಹಿಂಸೆ ಸಲ್ಲದು

KannadaprabhaNewsNetwork |  
Published : Dec 24, 2025, 02:15 AM IST
22 HRR. 01 & 01Aಹರಿಹರದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸೆ, ಅನಾಚಾರ, ಹಾಗೂ ನರಮೇಧ ನಡೆಯುತ್ತಿರುವುದನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸೆ, ಅನಾಚಾರ ಹಾಗೂ ನರಮೇಧ ನಡೆಯುತ್ತಿದೆ. ಇದನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ.

- ಹರಿಹರದಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆಯಲ್ಲಿ ಶಾಸಕ ಬಿ.ಪಿ. ಹರೀಶ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಹಿಂಸೆ, ಅನಾಚಾರ ಹಾಗೂ ನರಮೇಧ ನಡೆಯುತ್ತಿದೆ. ಇದನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ಪಕ್ಕೀರ ಸ್ವಾಮಿ ಮಠದ ಮುಂಭಾಗದಿಂದ ಶಾಸಕ ಬಿ.ಪಿ. ಹರೀಶ್‌ ನೇತೃತ್ವದಲ್ಲಿ ಮೆರವಣಿಗೆ ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆ, ಹರಪನಹಳ್ಳಿ ವೃತ್ತದ ಮೂಲಕ ತಾಲೂಕು ಕಚೇರಿಗೆ ತಲುಪಿ, ಬಳಿಕ ಮನವಿ ಸಲ್ಲಿಸಲಾಯಿತು.

ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಪ್ರತಿಭಟನೆಯಲ್ಲಿ ಮಾತನಾಡಿ, ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯ ದುಬಾಲಿಯಾ ಪ್ಯಾರಾ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪು ಹಿಂದು ಯುವಕ ದೀಪು ಚಂದ್ರದಾಸ್ ಅವರನ್ನು ಥಳಿಸಿ, ಮೃತದೇಹವನ್ನು ಮರಕ್ಕೆ ಕಟ್ಟಿ ಬೆಂಕಿಹಚ್ಚಿದೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಮಿತಿಮೀರಿದೆ. ಅಲ್ಲಿನ ಕಠೋರ ಇಸ್ಲಾಮಿಕ್ ನಾಯಕ ಉಸ್ಮಾನ್ ಹದಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆದ ಕಾರಣ ಸಾವನ್ನಪ್ಪಿದ್ದಾನೆ. ಆತನ ಬೆಂಬಲಿಗರು ಬೀದಿಗಿಳಿದು ಹಿಂದೂಗಳ ಮೇಲೆ ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಭಾರತ ರಾಯಭಾರಿ ಕಚೇರಿ ಮೇಲೆಯೂ ಕಲ್ಲು ತೂರಾಟ ನಡೆಸಿದ್ದು ಖಂಡನೀಯ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವೀರೇಶ್‌ ಹನಗವಾಡಿ, ದೂಡಾ ಮಾಜಿ ಸದಸ್ಯರಾದ ಬಾತಿ ಚಂದ್ರಶೇಖರ್‌, ರಾಜೂ ರೋಖಡೆ, ನಗರ ಘಟಕದ ಅಧ್ಯಕ್ಷ ಅಜೀತ್‌ ಸಾವಂತ್‌, ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ಎಚ್‌. ಮಂಜಾನಾಯ್ಕ, ಗ್ರಾಮಾಂತರ ಘಟಕದ ಅಧ್ಯಕ್ಷ ನಿಂಗರಾಜ್‌ ಹಿಂಡಸಟ್ಟ, ಮುಖಂಡರಾದ ಮಾಜಿ ನಗರಾಧ್ಯಕ್ಷ ಪರಶುರಾಮ್‌ ಕಾಟ್ವೆ, ಸ್ವಾತಿ ಹನುಮಂತ, ನಗರಸಭಾ ಮಾಜಿ ಸದಸ್ಯೆ ಅಶ್ವಿನಿ ಕೃಷ್ಣ, ಸಾಕ್ಷಿ ಶಿಂಧೆ, ರೂಪಾ ಶಶಿಕಾಂತ್‌, ಚಂದ್ರಕಾಂತ್‌ ಗೌಡ, ಸುರೇಶ ತೆರದಳ್ಳಿ, ಮಾಲತೇಶ್‌ ಬಂಡಾರೆ, ನಾಗರಾಜ್‌ ಬಂಡಾರಿ, ದಿನೇಶ್‌. ಎಚ್‌, ಶಿವು, ಅದ್ವೈತ್‌, ಪ್ರಶಾಂತ್‌, ರಾಜು ಐರಣಿ, ಹಿಂದೂ ಜಾಗರಣಾ ವೇದಿಕೆ, ಹಿಂದೂ ಮುಖಂಡರು ಹಾಗೂ ಇತರರು ಭಾಗವಹಿಸಿದ್ದರು.

- - -

(ಬಾಕ್ಸ್‌)

* ಬಾಂಗ್ಲಾ ಕ್ರೌರ್ಯಕ್ಕೆ ಓಂಕಾರ ಶ್ರೀ, ಬಸವಪ್ರಭು ಶ್ರೀ ಖಂಡನೆದಾವಣಗೆರೆ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಅಮಾನವೀಯ, ಪೈಶಾಚಿಕ ಕೃತ್ಯದ ಹತ್ಯೆಗಳನ್ನು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತೀವ್ರವಾಗಿ ಖಂಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಾಂಗ್ಲಾ ದೇಶದಲ್ಲಿ ಹಿಂದೂಗಳನ್ನು ವಧೆ ಮಾಡುತ್ತಿದ್ದಾರೆ. ಮರಕ್ಕೆ ಕಟ್ಟಿ ಜೀವಂತವಾಗಿ ದಹನ ಸೇರಿದಂತೆ ಅಲ್ಲಿನ ಅಮಾನವೀಯ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಜಾತಿ, ಮತ, ಪಂಥಗಳನ್ನು ಮೈಗೂಡಿಸಿಕೊಂಡ ಬಾಂಗ್ಲಾದಲ್ಲಿನ ಕೆಲ ಜನರು ಕ್ರೌರ್ಯ ಮೆರೆಸುತ್ತಿದ್ದಾರೆ. ಎಲ್ಲರಲ್ಲೂ ಭಗವಂತನಿದ್ದಾನೆ. ಮೊದಲು ಕ್ರೌರ್ಯ ಬಿಡಬೇಕು ಎಂದರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹತ್ಯಾಕಾಂಡವೇ ಆಗುತ್ತಿದೆ. ನಿಜಕ್ಕೂಇದು ನೋವಿನ ಸಂಗತಿ. ಜಗತ್ತಿನಲ್ಲಿ ಎಲ್ಲೇ ಇದ್ದರೂ ನಾವೆಲ್ಲರೂ ಮನುಷ್ಯರು. ಮಾನವ ಧರ್ಮವನ್ನು ಉಳಿಸುವ ಕೆಲಸ ಆಗಬೇಕು. ಧರ್ಮಗಳನ್ನು ನಾವು ಸೃಷ್ಟಿ ಮಾಡಿಕೊಂಡಿದ್ದು. ಆದರೆ, ಇದೇ ಧರ್ಮಗಳ ಹೆಸರಿನಲ್ಲಿ ಕೊಲ್ಲುವಂತಹ ಕೆಲಸ ಖಂಡನೀಯ ಎಂದು ಆಕ್ಷೇಪಿಸಿದರು. ನಾವೆಲ್ಲರೂ ದೇವರ ಮಕ್ಕಳು ಎಂಬ ಭಾವನೆ ಬೆಳೆಸಿಕೊಂಡರೆ ಇಂತಹ ಘಟನೆಗಳು ನಡೆಯುವುದಿಲ್ಲ. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯಾಕಾಂಡ, ಅತ್ಯಾಚಾರ, ದೌರ್ಜನ್ಯ ಎಸಗುತ್ತಿರುವವರಿಗೆ ದೇವರು ಒಳ್ಳೆಯ ಬುದ್ಧಿ ನೀಡಲಿ. ಅಲ್ಲಿನ ಹಿಂದೂಗಳ ಹತ್ಯಾಕಾಂಡ ನಿಲ್ಲುವಂತೆ ಕ್ರಮ ಕೈಗೊಳ್ಳಲು ಬಾಂಗ್ಲಾ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬೇಕು ಎಂದರು. - - - -22ಕೆಡಿವಿಜಿ9: ಓಂಕಾರ ಶಿವಾಚಾರ್ಯ ಸ್ವಾಮೀಜಿ -22ಕೆಡಿವಿಜಿ10: ಬಸವಪ್ರಭು ಸ್ವಾಮೀಜಿ- - -

-22HRR. 01 & 01A:

ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ, ನರಮೇಧ ಖಂಡಿಸಿ ಹರಿಹರದ ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮ್ಮೇಳನ ಸಭಾಂಗಣ ನಿರ್ಮಾಣಕ್ಕೆ ಅನುದಾನ ನೀಡಲು ಸಿಎಂಗೆ ಮನವಿ
ಕಲಿಕೆಯ ವಯಸ್ಸು ಸಂಯಮದಿಂದ ಕೂಡಿರಲಿ: ಡಾ. ಬಸವ ಮರುಳಸಿದ್ಧ ಸ್ವಾಮೀಜಿ