ಗಂಗಾ ಕಲ್ಯಾಣ ಯೋಜನೆ ಲಾಭ ಪಡೆಯಿರಿ

KannadaprabhaNewsNetwork |  
Published : Aug 25, 2026, 01:45 AM IST
ಪಟ್ಟಣದ ತೀನಂಶ್ರೀ ಭವನದ ಬಳಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿಯ ಪಲಾನುಭವಿಗಳಿಗೆ ಮೋಟಾರ್‌ಪಂಪ್, ಪೈಪ್‌ಗಳು, ಕೇಬಲ್‌ಗಳನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ವಿತರಿಸಿದರು. | Kannada Prabha

ಸಾರಾಂಶ

ಬಡ ರೈತರ ಆರ್ಥಿಕ ಸ್ವಾವಲಂಬನೆ, ಉತ್ತಮ ಜೀವನ ಮಟ್ಟದ ನಿರ್ವಹಣೆಗಾಗಿ ಸರ್ಕಾರದ ಹಲವಾರು ಯೋಜನೆಗಳ ಪೈಕಿ ಗಂಗಾಕಲ್ಯಾಣ ಯೋಜನೆ ಉತ್ತಮವಾಗಿದ್ದು ಈ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಬಡ ರೈತರ ಆರ್ಥಿಕ ಸ್ವಾವಲಂಬನೆ, ಉತ್ತಮ ಜೀವನ ಮಟ್ಟದ ನಿರ್ವಹಣೆಗಾಗಿ ಸರ್ಕಾರದ ಹಲವಾರು ಯೋಜನೆಗಳ ಪೈಕಿ ಗಂಗಾಕಲ್ಯಾಣ ಯೋಜನೆ ಉತ್ತಮವಾಗಿದ್ದು ಈ ಮೂಲಕ ಯೋಜನೆ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.ಪಟ್ಟಣದ ತೀನಂಶ್ರೀ ಭವನದ ಬಳಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಮೋಟಾರ್‌ಪಂಪ್, ಪೈಪ್‌ಗಳು, ಕೇಬಲ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಅಲ್ಪ ಸ್ವಲ್ಪ ಜಮೀನುಗಳನ್ನು ಇಟ್ಟುಕೊಂಡು ಅದರಲ್ಲೇ ಜೀವನ ಮಾಡುತ್ತಾ ಬಡತನದಲ್ಲಿರುವಂತಹವರನ್ನು ಗುರುತಿಸಿ ಈ ಬೋರ್‌ವೆಲ್ ನೀಡಲಾಗಿದೆ. ಇಂದು ಒಟ್ಟು ೧೨ಲಕ್ಷ ವೆಚ್ಚದಲ್ಲಿ ತಾಲೂಕಿನ ಮೂರುಜನ ಫಲಾನುಭವಿಳಿಗೆ ಬೋರ್‌ವೆಲ್‌ ಕೊರೆಯುದು, ವಿದ್ಯುತ್ ಸಂಪರ್ಕ, ಮೋಟಾರ್ ಪಂಪ್, ಹಾಗೂ ಅಗತ್ಯ ಪೈಪ್‌ಗಳನ್ನು ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಲಿಂ ಉಲ್ಲಾ, ನದೀಮ್, ಸೈಯದ್ ಇಮ್ರಾನ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಾಹ್ಮಣ ಯುವಕರು ಸಮಾಜಕ್ಕೆ ಕೊಡುಗೆ ನೀಡಿ: ಮಾ.ಸ ನಂಜುಂಡಸ್ವಾಮಿ
ವಿವಿಧ ಪ್ರದೇಶಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ, ಪರಿಶೀಲನೆ