ಒತ್ತಡ ಕಳೆಯಲು ಕ್ರೀಡಾಕೂಟ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ

KannadaprabhaNewsNetwork |  
Published : Jan 21, 2026, 01:45 AM IST
20ಎಚ್ಎಸ್ಎನ್13 :  | Kannada Prabha

ಸಾರಾಂಶ

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ನೌಕರರು ಕೆಲಸದ ಜೊತೆಗೆ ಆರೋಗ್ಯದ ಕಡೆಯೂ ಹಾಗೂ ಕುಟುಂಬದವರಿಗೂ ಹೆಚ್ಚು ಒತ್ತು ನೀಡಬೇಕು, ಕಳೆದ ವರ್ಷ ಕ್ರೀಡಾಕೂಟಕ್ಕೆ ಭಾಗವಹಿಸಲು ೨೫೦೦ ನೌಕರರು ನೋಂದಣಿ ಮಾಡಿಕೊಂಡಿದ್ದರು, ಆದರೆ ಈ ಭಾರಿ ೩೫೦೦ಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರಿ ನೌಕರರು ದಿನನಿತ್ಯ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸದ ಒತ್ತಡ ಕಳೆಯಲು ಕ್ರೀಡಾಕೂಟ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಶಾಸಕರಾದ ಸ್ವರೂಪ್ ಪ್ರಕಾಶ್ ತಿಳಿಸಿದ್ದಾರೆ.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಸಂಯುಕ್ತಶ್ರಯದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ನೌಕರರು ಕೆಲಸದ ಜೊತೆಗೆ ಆರೋಗ್ಯದ ಕಡೆಯೂ ಹಾಗೂ ಕುಟುಂಬದವರಿಗೂ ಹೆಚ್ಚು ಒತ್ತು ನೀಡಬೇಕು, ಕಳೆದ ವ? ಕ್ರೀಡಾಕೂಟಕ್ಕೆ ಭಾಗವಹಿಸಲು ೨೫೦೦ ನೌಕರರು ನೋಂದಣಿ ಮಾಡಿಕೊಂಡಿದ್ದರು, ಆದರೆ ಈ ಭಾರಿ ೩೫೦೦ಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು

ಕ್ರೀಡೆಯು ಪ್ರತಿಯೊಬ್ಬ ಮನುಷ್ಯ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ, ಎಲ್ಲಾ ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಮಾತನಾಡಿ, ನಿರಂತವಾಗಿ ಕ್ರೀಡೆಯಲ್ಲಿ ತೊಡಗಿಸಿಳ್ಳುವವರು ಆರೋಗ್ಯವಾಗಿರುತ್ತದೆ, ಕ್ರೀಡೆಯಲ್ಲಿ ಎಂದಿಗೂ ಸಹ ವಯಸ್ಸಿನ ಭೇದ ಇರುವುದಿಲ್ಲ, ಶಿಸ್ತು ಆದ್ದರಿಂದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಆದ್ದರಿಂದ ನೌಕರರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಆರೋಗ್ಯದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಸ್ಪರ್ಧಾತ್ಮಕ ಪರೀಕ್ಷೆತಯಾರಿ ನಡೆಸಿ ಸರ್ಕಾರಿ ಹುದ್ದೆಯನ್ನು ಪಡೆಯುತ್ತಾರೆ, ಕೆಲಸವನ್ನು ಒತ್ತಡ ಜೀವನವ ಮಾಡಿಕೊಳ್ಳಬಾರದು, ಕೆಲಸವನ್ನು ಸಂತೋ?ದಿಂದ ಮಾಡಬೇಕು ಆವಾಗ ಜೀವನವೇ ಕೆಲಸವಾಗಿರುತ್ತದೆ, ಸರ್ಕಾರಿ ಕೆಲಸ ಸಮಾಜದಲ್ಲಿ ತಮ್ಮ ಗುರುತಿಸುವಿಕೆಯನ್ನು ತೋರುತ್ತದೆ ಆದ್ದರಿಂದ ಕೆಲಸಕ್ಕೆ ಗೌರವವನ್ನು ನೀಡುವ ಮುಖಂತರ ಕೆಲಸ ಮಾಡಬೇಕು.ಶಾಸಕರಾದ ಸಿ. ಎನ್ ಬಾಲಕೃಷ್ಣ ಅವರು ಮಾತನಾಡಿ, ಶಾಸಕಾಂಗ ಮತ್ತು ಕಾಯಾಂಗ ನಾಣ್ಯದ ಎರಡು ಮುಖಗಳು, ಶಾಸನಗಳನ್ನು ರೂಪಿಸುವಂತಹ ಕೆಲಸ ಶಾಸಕಾಂಗದ್ದರುತ್ತದೆ ಕಾರ್ಯ ರೂಪಕ್ಕೆ ತರುವುದು ಕಾಯಂಗದಾಗಿರುತ್ತದೆ ಎಂದರು. ಸರ್ಕಾರಿ ನೌಕರರು ದೈಹಿಕ, ಮಾನಸಿಕ ಒತ್ತಡ ತಡೆಯಲು ಕ್ರೀಡೆ ತುಂಬಾ ಮುಖ್ಯ, ಆರೋಗ್ಯವೇ ಭಾಗ್ಯ ಎಂದು ಇಂದು ಆಲೋಚಿಸಬೇಕಾಗಿದೆ ಆದ್ದರಿಂದ ಸರ್ಕಾರಿ ನೌಕರರು ಆರೋಗ್ಯದ ಕಡೆಯೂ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು. ಶಾಸಕರಾದ ಸಿಮೆಂಟ್ ಮಂಜು ಅವರು ಮಾತನಾಡಿ ಶಾಸಕಾಂಗ ಹಾಗೂ ಕಾಯಾಂಗ ಒಗ್ಗಟ್ಟಾಗಿ ಕೆಲಸವನ್ನು ಮಾಡಿದರೆ ರಾಜ್ಯ ಜನತೆಗೆ ಉತ್ತಮ ಆಡಳಿತವನ್ನು ನೀಡಲು ಸಾಧ್ಯ, ಪ್ರತಿಯೊಬ್ಬರೂ ಮಾಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ, ಆತ್ಮವಿಶ್ವಾಸದಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣಗೌಡ ಮಾತನಾಡಿ ಪ್ರತಿಯೊಬ್ಬರೂ ಗೆಲುವು ಮತ್ತು ಸೋಲನ್ನು ಒಂದೇ ಮನಸ್ಸಿನಲ್ಲಿ ಸ್ವೀಕರಿಸಬೇಕು, ನಾವು ಆರೋಗ್ಯವಾಗಿದ್ದರೆ ಒತ್ತಡವನ್ನು ಕಡಿಮೆ ಮಾಡಬಹುದು, ಆಟವನ್ನು ಸ್ಪರ್ಧೆಯಾಗಿ ತೆಗೆದುಕೊಂಡು ರಾಜ್ಯ ಮಟ್ಟಕ್ಕೆ ರಾಷ್ಟ್ರಮಟ್ಟಕ್ಕೆ ಭಾಗವಹಿಸಿದರೆ ಹಾಸನ ಜಿಲ್ಲೆಯ ಕೀರ್ತಿ ಹೆಚ್ಚಾಗುತ್ತದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ಆರ್‌. ಕೆಂಚೆಗೌಡ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಎಚ್.ಎಸ್ ಮಲ್ಲೇಶ್ ಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆನಂದ್ ಮೂರ್ತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ