ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯ 60ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಅವಕಾಶಗಳು ಮತ್ತು ಸವಾಲುಗಳು ಒಟ್ಟಾಗಿ ಎದುರಾಗುತ್ತವೆ. ಸವಾಲುಗಳನ್ನು ಹೇಗೆ ಮೆಟ್ಟಿಲಾಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ನಾಯಕತ್ವ ಗುಣವನ್ನು ಅಳೆಯಲಾಗುತ್ತದೆ. ಇಂದಿನ ಕಲಿಕೆ ನಾಳೆಯೇ ಹಳತಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಜೀವನ ಪರ್ಯಂತ ಕಲಿಕೆಗೆ ಮುಕ್ತವಾಗಿರಬೇಕು ಎಂದರು.ತಂತ್ರಜ್ಞಾನ, ಉದ್ಯಮ ಕ್ಷೇತ್ರದ ಪೈಪೋಟಿ ಇಂದು ವಿಶ್ವಮಟ್ಟದಲ್ಲಿದೆ. ಬೆಂಗಳೂರು, ಭಾರತದ ಗಡಿಯಾಚೆಗೆ ನಾವು ಸ್ಪರ್ಧಿಸಲು ಸಿದ್ಧರಿರಬೇಕು. ಡಿಜಿಟಲ್ ಕ್ರಾಂತಿ, ಕೃತಕ ಬುದ್ಧಿಮತ್ತೆ ಹೊಸ ಮಾದರಿಯ ಸವಾಲುಗಳನ್ನು ಸುಸ್ಥಿರ ಅಧ್ಯಯನ, ನಾವಿನ್ಯತೆಯ ಮೂಲಕ ಎದುರಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪಡೆಯುವ ಜ್ಞಾನವನ್ನು ಉತ್ತಮ ಸಮಾಜ ನಿರ್ಮಾಣ ಹಾಗೂ ದೇಶದ ಅಭಿವೃದ್ಧಿಗೆ ಬಳಸುವಂತೆ ಕರೆಕೊಟ್ಟರು.
11 ಚಿನ್ನದ ಪದಕ: ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಪ್ರೇಮಾ ಎಸ್. 11 ಚಿನ್ನದ ಪದಕ ಪಡೆದರು. ಸ್ನಾತಕ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಹೇಮಂತ. ಎಸ್ 7 ಚಿನ್ನದ ಪದಕ, ಎಂಎಸ್‌ಸಿ ಫಿಸಿಕ್ಸ್‌ನಲ್ಲಿ ಸೌಫಿಯಾ ಕೆ.ಎಂ. 7 ಚಿನ್ನದ ಪದಕ, ಎಂಎಸ್‌ಸಿ ಕೆಮೆಸ್ಟ್ರಿಯಲ್ಲಿ ವಿದ್ಯಾಶ್ರೀ ಬಿ.ಎಸ್. 7 ಚಿನ್ನದ ಪದಕ ಪಡೆದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ., ಕುಲಸಚಿವರು ಕೆ.ಟಿ. ಶಾಂತಲಾ, ಕುಲಸಚಿವರು (ಮೌಲ್ಯಮಾಪನ ) ಪ್ರೊ.ಸಿ.ಎಸ್.ಕರಿಗಾರ್, ಸಿಂಡಿಕೇಟ್ ಸದಸ್ಯ ದಂಡಿಕೆರೆ ನಾಗರಾಜ್ ಉಪಸ್ಥಿತರಿದ್ದರು.
------
1) ಬೆಂಗಳೂರು ವಿಶ್ವವಿದ್ಯಾಲಯ 60ನೇ ಘಟಿಕೋತ್ಸವದಲ್ಲಿ ಡಿ. ಮಾದೇಗೌಡ, ಡಾ.ಟಿ.ಬಿ.ಪ್ರಸನ್ನ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೆಟ್ ಪ್ರದಾನ ಮಾಡಿದರು.