ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿ ಬಲಿ, ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork | Published : Aug 10, 2024 1:31 AM

ಸಾರಾಂಶ

ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದ ಬಾಲಕಿಯೊಬ್ಬಳು ಶಂಕಿತ ಡೆಂಘೀ ಜ್ವರಕ್ಕೆ ಶುಕ್ರವಾರ ಬಲಿಯಾಗಿದ್ದಾಳೆ.

ಶಿಗ್ಗಾಂವಿ: ತಾಲೂಕಿನ ಶಿಡ್ಲಾಪುರ ಗ್ರಾಮದ ಬಾಲಕಿಯೊಬ್ಬಳು ಶಂಕಿತ ಡೆಂಘೀ ಜ್ವರಕ್ಕೆ ಶುಕ್ರವಾರ ಬಲಿಯಾಗಿದ್ದಾಳೆ.

ರೇಖಾ (೧೦) ವಿರೂಪಾಕ್ಷಪ್ಪ ದೊಡ್ಡಮನಿ ತೀವ್ರ ಜ್ವರದಿಂದ ಬಳಲುತ್ತಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಯೇ ಬಾಲಕಿ ಸಾವನ್ನಪ್ಪಿದ್ದಾರೆ. ಶಿಗ್ಗಾಂವಿ ಆಸ್ಪತ್ರೆಯಲ್ಲಿ ಜುಲೈ ೧೩ರಂದು ಬಾಲಕಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಶುಕ್ರವಾರ ಬೆಳಗಿನ ಜಾವ ೬ ಗಂಟೆಗೆ ಸಾವನ್ನಪ್ಪಿದ್ದಾಳೆ.

ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ:ನಂತರದ ಬೆಳವಣಿಗೆಯಲ್ಲಿ ಗ್ರಾಮಸ್ಥರು ನಮ್ಮ ಊರಿಗೆ ಸರಬರಾಜು ಆಗುತ್ತಿದ್ದ ನೀರು ಕಲುಷಿತವಾಗಿದೆ. ಗ್ರಾಮ ಪಂಚಾಯಿತಿ ಕೊಳವೆಬಾವಿಗಳು ಕೆರೆಯಲ್ಲಿ ಇದ್ದುದರಿಂದ ಕೆರೆಯ ನೀರು ಹೆಚ್ಚಿಗೆಯಾಗಿ ನೀರು ಕಲುಷಿತಗೊಂಡಿದ್ದು ಇದನ್ನು ಗ್ರಾಮಸ್ಥರು ಕುಡಿಯುವುದರಿಂದ ರೋಗಗಳು ಹೆಚ್ಚಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದ ಚರಂಡಿಗಳು ಸಹ ಸ್ವಚ್ಛವಾಗಿಲ್ಲ ಇದಕ್ಕೆ ಕಾರಣ ಪಿಡಿಒ ಎಂದು ಆಪಾದಿಸಿ ಗ್ರಾಮಕ್ಕೆ ಪಿಡಿಒ ಅವರನ್ನು ಕರೆಯಿಸಿ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್‌ ಸಂತೋಷ ಹಿರೇಮಠ, ಪೊಲೀಸ್ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿ ಡಾ. ಸತೀಶ್ ಅವರು ಆಗಮಿಸಿ ಇಂದಿನಿಂದಲೇ ಗ್ರಾಮದ ಎಲ್ಲ ಚರಂಡಿಗಳನ್ನು ಸ್ವಚ್ಛ ಮಾಡುತ್ತೇವೆ. ಎಲ್ಲಾ ಮನೆಗಳಲ್ಲಿ ಇರುವ ಜನರನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗುವುದು ಎಂದು ಭರವಸೆ ನೀಡಿದರಲ್ಲದೇ, ಗ್ರಾಮಕ್ಕೆ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ಅಧಿಕಾರಿಗಳು ಪಿಡಿಒಗೆ ಸೂಚಿಸಿದರು. ಸೂಕ್ತ ಭರವಸೆ ನೀಡಿದ್ದರ ಮೇರೆಗೆ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹಿಂಪಡೆದು ತೆರಳಿರುತ್ತಾರೆ.

ಜ್ವರ ಶಂಕಿತವಾಗಿದ್ದು, ಶಿಡ್ಲಾಪುರದ ಬಾಲಕಿ ಸಾವಿನ ಕುರಿತು ಸ್ಪಷ್ಪವಾದ ವರದಿ ಬರಬೇಕಿದೆ.

ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕೆತ್ಸೆನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸಗೆ ಕಳಿಸಲಾಗಿತ್ತು. ಇಂದು ಮುಂಜಾನೆ ೬ ಗಂಟೆಗೆ ಮೃತಪಟ್ಟಿದ್ದಾಳೆ ಟಿಎಚ್‌ಓ ಡಾ. ಸತೀಶ ಎ.ಆರ್‌. ಹೇಳಿದ್ದಾರೆ.

Share this article