ವಿದ್ಯಾರ್ಥಿನಿ ಹತ್ಯೆ: ಎನ್‌ಕೌಂಟರ್ ಕಾನೂನು ಬರಬೇಕು

KannadaprabhaNewsNetwork |  
Published : Apr 20, 2024, 01:04 AM IST
ಲಾಡ್‌ ಭೇಟಿ | Kannada Prabha

ಸಾರಾಂಶ

ಎನ್‌ಕೌಂಟರ್ ಕಾನೂನು ಮಾಡಿದರೆ ಈ ರೀತಿ ಮಾಡುವವರನ್ನು ಹೊಡೆದು ಉರುಳಿಸಬಹುದು. ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ.

ಹುಬ್ಬಳ್ಳಿ:

ವಿದ್ಯಾರ್ಥಿನಿಯ ಬರ್ಬರ ಕೊಲೆಯಂತಹ ಘಟನೆ ಆಗಬಾರದು. ಈ ಕೊಲೆಯನ್ನು ನಾನು ಖಂಡಿಸುತ್ತೇನೆ. ಇಂತಹ ಪ್ರಕರಣದಲ್ಲಿ ಎನ್ಕೌಂಟರ್ ಕಾನೂನು ಬರಲೇಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿನ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ ಅವರು, ಮೃತ ನೇಹಾ ಹಿರೇಮಠ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ಎನ್‌ಕೌಂಟರ್ ಕಾನೂನು ಮಾಡಿದರೆ ಈ ರೀತಿ ಮಾಡುವವರನ್ನು ಹೊಡೆದು ಉರುಳಿಸಬಹುದು. ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಸರ್ಕಾರಗಳ ಅವಧಿಯಲ್ಲಿ ಘಟನೆಗಳ ಸಂಖ್ಯೆಗಳನ್ನು ಕೊಡಬಲ್ಲೆ, ಆದರೆ ಅದಕ್ಕೆ ಉತ್ತರಿಸುವ ಪರಿಸ್ಥಿತಿ ಇದಲ್ಲ. ಕೆಲವರು ಇದನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯಗೊಳಿಸದೇ ಸೂಕ್ಷ್ಮತೆ, ಸ್ವಯಂತೆ ಕಾಯ್ದುಕೊಳ್ಳಬೇಕು ಬಿಜೆಪಿಗರಿಗೆ ಕಿವಿ ಮಾತು ಹೇಳಿದರು‌.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 13.30 ಲಕ್ಷ ಯುವತಿಯರು ಕಾಣೆಯಾಗಿದ್ದಾರೆ. ಈ ಬಗ್ಗೆ ಪ್ರಹ್ಲಾದ ಜೋಶಿ ಉತ್ತರಿಸಲಿ. ಹುಬ್ಬಳ್ಳಿ ಘಟನೆ ರಾಜಕರಣಗೊಳಿಸುತ್ತಿರುವ ಬಿಜೆಪಿಯವರು, ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಬಾರದು. ತನಿಖೆ ಮುಗಿಯದೇ ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲವೇ? ಅಂಕಿ ಸಂಖ್ಯೆ ಕೊಡಲೇ ಎಂದು ತಿರುಗೇಟು ನೀಡಿದರು. ಘಟನೆ ಆಕಸ್ಮಿಕ ಎಂಬ ಗೃಹಸಚಿವರ ಹೇಳಿಕೆಯನ್ನೂ ಇದೇ ವೇಳೆ ಸಚಿವ ಲಾಡ್ ಸಮರ್ಥಿಸಿಕೊಂಡರು.

ಈ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ, ಅಲ್ತಾಫ್‌ ಹಳ್ಳೂರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಹೊರತರುವ ಮುಹೂರ್ತ, ಜಾತ್ರೆಗೆ ಕ್ಷಣಗಣನೆ
ಮಧ್ಯಪ್ರಾಚ್ಯ ಯುದ್ಧ ಬೆನ್ನಿಗೇ ಕೈಸುಡುತ್ತಿದೆ ಮೊಬೈಲ್‌ ಫೋನ್‌ ದರ!