ಗಂಗಾವತಿ: ತೃತೀಯ ಲಿಂಗಿ ಎಂದು ಭಾವಿಸದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಮಂಜಮ್ಮ ಜೋಗತಿ ಹೇಳಿದರು.
ತೃತೀಯ ಲಿಂಗಿ ನಾನು ಇದ್ದೇನೆ.ಯಾರ ಮನೆಯಲ್ಲಿ ಆಗಲಿ ನನ್ನಂತ ಮಗು ಜನಸಿದರೆ ಅದಕ್ಕ ಉತ್ತಮ ಶಿಕ್ಷಣ ನೀಡಿ ಬೆಳೆಸಬೇಕು ಎಂದರು. ಇಂದು ನನಗೆ ಎಲ್ಲೆಡೆ ಸನ್ಮಾನ ಅಭಿನಂದನೆ ನಡೆಯುತ್ತಿವೆ. ಮಂಜಮ್ಮ ಜೋಗತಿ ಯಾರೆಂದು ತಿಳಿಯದೇ ಇರುವಾಗ ನನ್ನನ್ನು ಕರೆಯಿಸಿ ಪರಿಚಯಿಸಿದ ಊರನ್ನು ನಾನು ಎಂದಿಗೂ ಮರೆಯುವದಿಲ್ಲ.ದಿ.ಬಸವರಾಜ ಕೋಟಿ ಪ್ರಥಮವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಗoಗಾವತಿಯಲ್ಲಿ ನಡೆದಾಗ ನನಗೆ ವೇದಿಕೆಗೆ ಅವಕಾಶ ಕಟ್ಟು, ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗೆ ನನ್ನ ಬೆಳೆಸಿತು ಎoದು ಭಾವುಕರಾದರು.
ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಮಾತನಾಡಿ, ಮನುಕುಲಕ್ಕೆ ಬೇಕಾದವರು ಬಸವಣ್ಣನವರು. ತಮ್ಮ ಸಮಾಜದ ದೇವಸ್ಥಾನವನ್ನೂ ಬಸವ ಜಯಂತಿಯಂದು ಉದ್ಘಾಟನೆ ಮಾಡಿರುವುದನ್ನು ನೆನಪಿಸಿಕೊಂಡರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಬಸವಣ್ಣ ತತ್ವ ಆದರ್ಶ ಪರಿಪಾಲನೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ ಡಾ. ಮಹಾoತ ಬಸವಲಿoಗ ಸ್ವಾಮೀಜಿ ಪ್ರವಚನ ನೀಡಿದರು. ಡಾ.ಶಿವಕುಮಾರ ಸ್ವಾಗತಿಸಿದರು.ಕೆ.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಲಿಂಗಪ್ಪ ಬನ್ನಿಕೊಪ್ಪ ವೀರೇಶ,ಎ.ಕೆ.ಮಹೇಶ ನಿರೂಪಿಸಿದರು.