ಕುಷ್ಟಗಿ: ಭೂಮಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಸಭೆ ಸಮಾರಂಭದಲ್ಲಿ ವಸ್ತುಗಳ ಬದಲು ಗಿಡಗಳನ್ನು ಉಡುಗೋರೆಯಾಗಿ ನೀಡುವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಹೇಳಿದರು.
ಭೂಮಿಯ ಮೇಲೆ ಗಿಡಮರ ಬೆಳೆಸದ ಪರಿಣಾಮ ಇಂದು ನಾವು ಎಸಿ, ಫ್ಯಾನ್ ಇಲ್ಲದೆ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.
ಸೌರಮಂಡಲದಲ್ಲಿ ಭೂಮಿ ವಿಶೇಷ ಗ್ರಹವಾಗಿದ್ದು, ಇಲ್ಲಿ ಜೀವಿಸುವ ಪ್ರತಿಯೊಬ್ಬರು ಭೂಮಿಯ ರಕ್ಷಣೆ ಮಾಡಬೇಕಿದೆ. ನಮ್ಮ ಜಮಿನೀನಲ್ಲಿರುವ ಮಣ್ಣನ್ನು ಹರಿದು ಹೋಗದಂತೆ ನೋಡಿಕೊಳ್ಳಬೇಕು ಸರಿಯಾದ ಒಡ್ದು ನಿರ್ಮಾಣ ಮಾಡಬೇಕು, ಜಮೀನಿನಲ್ಲಿ ಗಿಡಗಳನ್ನು ನೆಡಬೇಕು ಎಂದರು.ಅಭಿವೃದ್ಧಿ ನೆಪದಲ್ಲಿ ಕಟ್ಟಡ ನಿರ್ಮಾಣಕ್ಕೆ ದೊಡ್ಡ ದೊಡ್ಡ ಮರ ನಾಶ ಮಾಡುತ್ತಿದ್ದು, ಅರಣ್ಯ ಭೂಮಿ ಒತ್ತುವರಿಯಾಗುತ್ತಿದ್ದು, ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.
ಇಂದಿರಾ ಸುಹಾಸಿನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮರಳು ಸಾಗಾಣಿಕೆ. ಮೈನಿಂಗ್ ಕಾರ್ಯ ನಡೆಯುತ್ತಿದ್ದರ ಪರಿಣಾಮ ಭೂಮಿ ಬರಿದಾಗುತ್ತಿದ್ದು, ಜಲ ಮಾಲಿನ್ಯ ವಾಯು ಮಾಲಿನ್ಯ ತಡೆಗಟ್ಟುವ ಕಾರ್ಯ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹೊಗೆ ರಹಿತ ವಾಹನ ಬಳಕೆ ಮಾಡುವ ಮೂಲ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಡಿಆರ್‌ಎಫ್‌ಓ ಅಬ್ದುಲ್ , ಅರಣ್ಯ ರಕ್ಷಕ ಮಹಾಂತೇಶ ರೆಡ್ಡಿ, ಗಸ್ತು ಪಾಲಕ ವಿನಯ್, ನ್ಯಾಯಾಂಗ ಇಲಾಖೆಯ ಸುನೀಲ ಮಠದ, ಆಕಾಶ ಸಂಗನಾಳ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಸಿ ನೆಡಲಾಯಿತು.