ಕನ್ನಡ ಭಾಷೆಗೆ ಮನ್ನಣೆ ನೀಡಿ: ಗಾಲಿ ಜನಾರ್ದನ ರೆಡ್ಡಿ

KannadaprabhaNewsNetwork |  
Published : Nov 10, 2026, 01:15 AM IST
ಗಂಗಾವತಿ ಸಮೀಪದ ಹೇರೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ದನ ರಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಭಾಗವಹಿಸಿದ್ದರು. | Kannada Prabha

ಸಾರಾಂಶ

ಗಂಗಾವತಿ ಸಮೀಪದ ಹೇರೂರು ಗ್ರಾಮದಲ್ಲಿ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಉದ್ಘಾಟಿಸಿದರು.

ಗಂಗಾವತಿ: ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕುವೆಂಪು ನುಡಿಯಂತೆ ಬದುಕಿನ ಭಾಷೆ ಯಾವುದಾದರೂ ಪ್ರತಿಯೊಬ್ಬರು ಮನದ ಭಾಷೆ ಕನ್ನಡಕ್ಕೆ ಮನ್ನಣೆ ನೀಡಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಸಮೀಪದ ಹೇರೂರು ಗ್ರಾಮದಲ್ಲಿ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಯಿ ಭುವನೇಶ್ವರಿ ಜನ್ಮತಾಳಿದ ಈ ನೆಲದಲ್ಲಿ ಜನಿಸಿದ ನಾವು ಕನ್ನಡನಾಡು ನುಡಿ, ಸಂಸ್ಕೃತಿ, ಭಾಷೆ, ನೆಲ, ಜಲಕ್ಕೆ ರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲೋಣ. ಅಮೆರಿಕದಲ್ಲಿ ಜರುಗಿದ ಅಕ್ಕ ಸಮ್ಮೇಳನದಲ್ಲೂ, ಇಂಗ್ಲೆಂಡ್‌ನ ಮಂಚೆಸ್ಟರ್‌ನಲ್ಲಿ ಕನ್ನಡ ಕೆಲಸದಲ್ಲಿ ನಾನು ಭಾಗಿಯಾಗಿದ್ದೇನೆ, ನಿತ್ಯೋತ್ಸವದ ಕವಿ ನಿಸಾರ್ ಆಹ್ಮದ್ ಅವರೊಟ್ಟಿಗೆ ವೇದಿಕೆ ಹಂಚಿಕೊಂಡ ಹೆಮ್ಮೆಯಿದೆ ಎಂದರು.

ಬಿಜೆಪಿ ಪ್ರಮುಖರಾದ ಅರುಣಾಲಕ್ಷ್ಮೀ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಅನೇಕ ಸಾಹಿತಿಗಳು, ಕವಿಗಳು ಕಲಾವಿದರು, ಗವಾಯಿಗಳು, ನಾಟಕಕಾರರು, ಕನ್ನಡ ನಾಡನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮನೆಯ ಮೊದಲು ಪಾಠಶಾಲೆ, ಜ್ಞಾನಕ್ಕಾಗಿ ಯಾವುದೇ ಭಾಷೆ ಕಲಿತರೂ ಮಾತೃಭಾಷೆ ಮರೆಯಬೇಡಿ, ಮನೆಗಳಲ್ಲಿ ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನು ಪಾಲಕರು ತೊಡೆದುಹಾಕಬೇಕು, ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಬೆಳೆಸಬೇಕು ಎಂದರು.

ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿರೂಪಾಕ್ಷಗೌಡ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರು, ಕಾರ್ಮಿಕರು, ಶ್ರಮಿಕರು ಹಾಗೂ ಸಮಾಜದ ಕಟ್ಟಡಕಡೆಯ ವ್ಯಕ್ತಿಗೂ ಅನ್ಯಾಯವಾದಾಗ ನಮ್ಮ ಸಂಘಟನೆ ಹೋರಾಟ ನಡೆಸಿ, ಪರಿಹಾರ ಕಂಡುಕೊಂಡಿದೆ ಎಂದರು.

ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಮಾತನಾಡಿದರು. ಪ್ರಥಮದರ್ಜೆ ಗುತ್ತಿಗೆದಾರ ವೀರಯ್ಯಸ್ವಾಮಿ ಹಿರೇಮಠ ಹೇರೂರು, ಪ್ರಸಾದ ಹಾಗೂ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಮೌನೇಶ್ ದಢೇಸೂಗೂರು, ಉದ್ಯಮಿ ವೀರಯ್ಯಸ್ವಾಮಿ ಹಿರೇಮಠ ಹೇರೂರು, ಮನೋಹರಗೌಡ ಹೇರೂರು, ಕೆ. ಜಾನಕಿರಾಮ್, ಅಮರೇಶ್ ಗೋನಾಳ್, ತಾಪಂ ಮಾಜಿ ಅಧ್ಯಕ್ಷ ವಿರೂಪಾಕ್ಷಗೌಡ ಮಾ.ಪಾ., ಪ್ರಸಾದ್ ರಾಜಶೇಖರ್, ಶರಣೇಗೌಡ ಪೊಲೀಸ್ ಪಾಟೀಲ್, ಶಶಿಧರಗೌಡ, ರುದ್ರೇಶ್ ಆರ‍್ಹಾಳ್, ಡಿ.ಕೆ. ಆಗೋಲಿ, ವೀರೇಶ್ ಬಲ್ಕುಂದಿ, ಜೋಗದ ದುರ್ಗಪ್ಪ ದಳಪತಿ, ಜೀಲಾನ್ ಬಾಷಾ, ಅರ್ಜುನ್ ನಾಯಕ, ರಾಮಣ್ಣ ಬಳ್ಳಾರಿ, ಪಂಪಣ್ಣ ನಾಯಕ, ಜೇಕಿನ ಚನ್ನಬಸವ ಇತರರಿದ್ದರು. ಲಿಂಗಾರೆಡ್ಡಿ ಆಲೂರು ಕಾರ್ಯಕ್ರಮ ನಿರೂಪಿಸಿದರು. ಮ್ಯಾಜಿಕ್ ಮೈಲಾರಿ ತಂಡ ಹಾಡು ನೃತ್ಯದ ಮೂಲಕ ಮನರಂಜಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ