ಕನ್ನಡಪ್ರಭ ವಾರ್ತೆ ಯರಗಟ್ಟಿಸೈನಿಕರ ಪಾತ್ರ ಮಹತ್ವವಾಗಿದ್ದು, ದೇಶದ ರಕ್ಷಣೆಗಾಗಿ ಸೈನಿಕರು ಹಗಲಿರುಳು ಶ್ರಮಿಸುತಿದ್ದಾರೆ. ನಮ್ಮ ವೀರ ಯೋಧರಿಗೆ ಕೃತಜ್ಞತೆ ಸಲ್ಲಿಸಿ ಎಂದು ತೊರಗಲ್ಲಮಠದ ದೀಪಕಸ್ವಾಮಿ ನುಡಿದರು.ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾರತೀಯ(ಬಿಎಸ್‌ಎಫ್) ಸೇನೆಗೆ ಸೇರಿದ ಛಾಯಾ ತಲ್ಲೂರಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಯಶಸ್ಸು ಸಾಧಿಸಬೇಕಾದರೇ ನಿರಂತರ ಅಧ್ಯಯನ ಮತ್ತು ಪರಿಶ್ರಮ ಅತ್ಯಗತ್ಯ ಎಂದರು.ಬೈಲಹೊಂಗಲ ಕೆಆರ್‌ಸಿ ಕಾಲೇಜ ಪ್ರಾಂಶುಪಾಲ ಎಂ.ಸಿ.ಬೀರಾದರ ಮಾತನಾಡಿ, ಇಂದಿನ ಯುವಕರು ದೇಶ ಸೇವೆ ಮಾಡಲು ಮುಂದೆ ಬರಬೇಕು. ಇದು ಹೆಮ್ಮೆಯ ಕೆಲಸ ಎಂದರು. ಭಾರತೀಯ ಸೇನೆಗೆ ಸೇರಿದ ಮಹಿಳೆ ಛಾಯಾ ತಲ್ಲೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇರಿ ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನನಗೆ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ. ಸಿಕ್ಕವರು ದೇಶಾಭಿಮಾನದಿಂದ ಸೇವೆ ಸಲ್ಲಿಸಿದರೇ ಮಾತ್ರ ಗೌರವ ಸಿಗುತ್ತದೆ ಎಂದು ತಿಳಿಸಿದರು.ಶಿಕ್ಷಕ ಎಂ.ವಿ.ಉಪ್ಪಿನ, ಶಿಕ್ಷಕ ಆನಂದ ಲಕ್ಕನ್ನವರ, ಶಿಕ್ಷಕ ಯು.ಡಿ.ತಲ್ಲೂರ ಮಾತನಾಡಿದರು. ಸೇವೆಗೆ ಸೇರಿದ ಛಾಯಾ ಹಾಗೂ ತಂದೆ ಉಮಾರೋಡ, ತಾಯಿ ಲತಾ ಅವರನ್ನು ಗೆಳೆಯರ ಬಳಗ ಸೇರಿದಂತೆ ವಿವಿಧ ಸಂಘಟನೆಯವರು ಸನ್ಮಾನಿಸಿದರು. ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸಪ್ಪ ಅಂಗಡಿ, ಮುಖಂಡ ಶಂಕರಗೌಡ ಪಾಟೀಲ, ಬಸವೇಶ್ವರ ಯುವಕ ಮಂಡಳ ಪ್ರೌಢ ಶಾಲೆ ನಿರ್ದೇಶಕಿ ಲತಾ ತಲ್ಲೂರ, ಬಸಪ್ಪ ರೊಕ್ಕದಕಟ್ಟಿ, ಲೋಕನಾಥ ಪೂಜೇರ, ಎ.ಎಂ.ಬಾಣದಾರ, ಆರ್.ಸಿ.ಯರಗಟ್ಟಿ, ಎಂ.ವಿ.ಉಪ್ಪಿನ, ಬಿಡಿಸಿಸಿ ಬ್ಯಾಂಕ ಅಧಿಕಾರಿ ಸುಭಾಷ ಪೂಜೇರ, ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ವಾಯ.ವಾಯ್.ಕಾಳಪ್ಪನವರ, ಗಂಗವ್ವ ವನ್ನೂರ, ಜಗದೀಶ ಹೊಸಮಠ ಇದ್ದರು. ಶಿಕ್ಷಕ ರಾಜು ದುಂಡನಕೊಪ್ಪ ನಿರೂಪಿಸಿ, ವಂದಿಸಿದರು.