ಕನ್ನಡಪ್ರಭ ವಾರ್ತೆ ಕುಂದಾಪುರ
ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮನಸ್ಥಿತಿ ಹೆಚ್ಚುತ್ತಿರುವುದೇ ಕಾರಣ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಎಲ್ಲರೂ ಜೊತೆಯಾಗಿ ಬದುಕುವಂತಹ ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಉಳಿಸಿಕೊಂಡು ವೃದ್ಧಾಶ್ರಮ ವ್ಯವಸ್ಥೆಗೆ ಕೊನೆ ಹಾಕಬೇಕಾಗಿದೆ ಎಂದು ರಾಜ್ಯ ಸರ್ಕಾರದ ನಿಕಟಪೂರ್ವ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಹೇಳಿದರು.ಅವರು ಭಾನುವಾರ ಇಲ್ಲಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಶ್ರೀ ಗುರುಧಾಮ ವಸತಿ ಗೃಹವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರತಿಯೊಬ್ಬರು ಧಾರ್ಮಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಹಾಗೇ ನಾವು ನಂಬಿದ ದೇವರ, ದೇಗುಲಗಳಿಗೆ ಆಗಾಗ್ಗೆ ಭೇಟಿ ನೀಡುವ ಪರಿಪಾಠವನ್ನು ಕೂಡ ಬೆಳೆಸಿಕೊಳ್ಳಬೇಕು ಎಂದರು.ಇದೇ ವೇಳೆ ದೇಗುಲದ ಗುರುಧಾಮಕ್ಕೆ ಸಹಕಾರ ನೀಡಿದ ದಾನಿಗಳಾದ ಯು.ಎ.ಸದಾಶಿವ ಹೊಳ್ಳ ಉಪ್ಪಿನಕುದ್ರು, ಡಾ.ಕೆ.ಎಸ್. ಕಾರಂತ, ರವೀಂದ್ರನಾಥ ಭಟ್ ಕಳಶ, ಡಾ.ವಿಷ್ಣುಮೂರ್ತಿ ಐತಾಳ್, ಗೋಪಾಲಕೃಷ್ಣ ಐತಾಳ್, ಎಚ್. ನರಸಿಂಹ ಐತಾಳ್ ಬೆಂಗಳೂರು ದಂಪತಿಯನ್ನು ಗೌರವಿಸಲಾಯಿತು.ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಬೆಂಗಳೂರು ಹೋಟೆಲ್ ಉದ್ಯಮಿ ಹರ್ತಟ್ಟು ಪ್ರಕಾಶ್ ಮಯ್ಯ, ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ವಿಶ್ರಾಂತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಅಧ್ಯಕ್ಷ ಎಚ್. ಸತೀಶ್ ಹಂದೆ, ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಪಿ.ಲಕ್ಷ್ಮೀನಾರಾಯಣ ತುಂಗ, ಉಪಾಧ್ಯಕ್ಷ ಗಣೇಶಮೂರ್ತಿ ನಾವಡ ಕುಡಿನಲ್ಲಿ, ಸದಸ್ಯರಾದ ಎ.ವಿ. ಶ್ರೀಧರ ಕಾರಂತ ಬೆಂಗಳೂರು, ಕೆ. ಅನಂತಪದ್ಮನಾಭ ಐತಾಳ ಕೋಟ, ಜಿ. ಚಂದ್ರಶೇಖರ ಉಪಾಧ್ಯ ಗುಂಡ್ಮಿ, ಆರ್.ಎಂ. ಶ್ರೀಧರ ರಾವ್ ಮೀಯಪದವು ಮತ್ತಿತರರು ಉಪಸ್ಥಿತರಿದ್ದರು.ಸಭೆಯ ಅಧ್ಯಕ್ಷತೆಯನ್ನು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ್ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಪಿ. ಸದಾಶಿವ ಐತಾಳ ಕೃಷ್ಣಾಪುರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗಣೇಶ್ ಮಧ್ಯಸ್ಥ ನಿರೂಪಿಸಿದರು. ಕೋಶಾಧಿಕಾರಿ ಪರಶುರಾಮ ಭಟ್ಟ ಎಡಬೆಟ್ಟು ವಂದಿಸಿದರು.