ಜೀವನದಲ್ಲಿ ಗುರಿ ಸಾಧನೆ ಮುಖ್ಯ-ತಹಸೀಲ್ದಾರ್‌ ಸಂತೋಷ ಹಿರೇಮಠ

KannadaprabhaNewsNetwork |  
Published : Aug 21, 2024, 12:41 AM IST
ಪೊಟೋ ಪೈಲ್ ನೇಮ್ ೨೦ಎಸ್‌ಜಿವಿ೧  ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ಪಂಚಾಯತ ಪುರಸಭೆ, ಮತ್ತು  ಹಿಂದುಳಿದ ವರ್ಗಗಳ ಇಲಾಖೆ ಇವರ ಸಂತುಕ್ತಾಶ್ರಯದಲ್ಲಿ ಡಿ ದೇವರಾಜ ಅರಸು ಅವರ ೧೦೯ ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕಾ ತಹಶೀಲ್ದಾರ ಸಂತೋಷ ಹಿರೇಮಠ ಉದ್ಘಾಟಿಸಿ ಮಾತನಾಡಿದರು.೨೦ಎಸ್‌ಜಿವಿ೧-೧ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ಪಂಚಾಯತ ಪುರಸಭೆ, ಮತ್ತು  ಹಿಂದುಳಿದ ವರ್ಗಗಳ ಇಲಾಖೆ ಇವರ ಸಂತುಕ್ತಾಶ್ರಯದಲ್ಲಿ ಡಿ ದೇವರಾಜ ಅರಸು ಅವರ ೧೦೯ ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸೈಯ್ಯದ ಅಜ್ಜೀಂಪೀರ್ ಖಾದ್ರಿ ಮಾತನಾಡಿದರು.೨೦ಎಸ್‌ಜಿವಿ೧-೨  ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ಪಂಚಾಯತ ಪುರಸಭೆ, ಮತ್ತು  ಹಿಂದುಳಿದ ವರ್ಗಗಳ ಇಲಾಖೆ ಇವರ ಸಂತುಕ್ತಾಶ್ರಯದಲ್ಲಿ ಡಿ ದೇವರಾಜ ಅರಸು ಅವರ ೧೦೯ ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಇಂಧೂದರ  ಮತ್ತಳ್ಳಿ. | Kannada Prabha

ಸಾರಾಂಶ

ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಿ, ಕನಸನ್ನು ಕಾಣುವುದು ಮುಖ್ಯವಲ್ಲ ಗುರಿಯನ್ನು ಸಾಧಿಸಬೇಕು ಎಂದು ತಾಲೂಕು ತಹಸೀಲ್ದಾರ್‌ ಸಂತೋಷ ಹಿರೇಮಠ ಹೇಳಿದರು.

ಶಿಗ್ಗಾಂವಿ: ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಿ, ಕನಸನ್ನು ಕಾಣುವುದು ಮುಖ್ಯವಲ್ಲ ಗುರಿಯನ್ನು ಸಾಧಿಸಬೇಕು ಎಂದು ತಾಲೂಕು ತಹಸೀಲ್ದಾರ್‌ ಸಂತೋಷ ಹಿರೇಮಠ ಹೇಳಿದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್‌, ಪುರಸಭೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಿ. ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಶಕ್ತಿ ಪ್ರಬಲವಾದ ಬದಲಾವಣೆಗಳನ್ನು ಮಾಡಬಹುದು. ಬಾವಿಯೊಳಗಿನ ಕಪ್ಪೆ ಆಗದೆ ಸಮುದ್ರದ ಕಪ್ಪೆ ಆಗಿ, ಸಮಾಜ ವಿಶಾಲವಾಗಿದೆ. ಸ್ಪರ್ಧಾತ್ಮಕ ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಪರೀಕ್ಷಾ ಸಿದ್ಧತೆ ಮಾಡಿ ಎಂದು ಹೇಳಿದರು.ಮಾನವನ ಜೀವನ ಶ್ರೇಷ್ಠವಾದದ್ದು ಸದಾ ಕಾಲ ದೇಶಕ್ಕೆ ಸೇವೆಯನ್ನು ಮಾಡುವ ಗುಣ ಬೆಳೆಸಿಕೊಳ್ಳಿ ಎಂದರು.ಮಾಜಿ ಶಾಸಕ ಸೈಯದ ಅಜ್ಜಂಪೀರ ಖಾದ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿ.ದೇವರಾಜ ಅರಸು ಬಡವರು, ಶೋಷಿತರು,ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಅಂಥಹ ನಾಯಕರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು ನನಗೂ ಕೂಡಾ ಹೆಮ್ಮೆಯಾಗಿದೆ ಎಂದರು.ಉಪನ್ಯಾಸವನ್ನು ಹಿರೇಮಣಕಟ್ಟಿಯ ಪ್ರೌಢಶಾಲೆಯ ಶಿಕ್ಷಕ ಪ್ರಭು ಬಂಗೇರ ನೀಡಿದರು.ಇಂಧೂದರ ಮತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಇಓ ವಿಶ್ವನಾಥ ಪಾಲಯ್ಯನಕೋಟಿ, ಶಿವಾನಂದ ಮ್ಯಾಗೇರಿ, ಮಲ್ಲೇಶಪ್ಪ ಹರಿಜನ, ಅಶೋಕ ಕಾಳೆ ಸೇರಿದಂತೆ ಹಲವರು ಮಾತನಾಡಿದರು.

ಇಸೂಪ ಬಾವಿಕಟ್ಟಿ, ಆರ್.ಜಿ. ಭಜಂತ್ರಿ, ಹನುಮಂತಪ್ಪ ಮಾದರ, ಶಿವಾನಂದ ರಾಮಗೇರಿ, ಈರಣ್ಣ ಸಮಗೋಮಡ, ಮುತ್ತಪ್ಪ ಗುಡಗೇರಿ, ಕರೆಪ್ಪ ಕಟ್ಟಿಮನಿ, ಕಾಳಪ್ಪ ಬಡಿಗೇರ, ಅಣ್ಣಪ್ಪ ಲಮಾಣಿ, ಮಲ್ಲಿಕಾರ್ಜುನ ಹಡಪದ, ಬಸಲಿಂಗಪ್ಪ ನರಗುಂದ, ಪಕ್ಕೀರಪ್ಪ ಕುಂದುರ, ಹನುಮಂತಪ್ಪ ಬಂಡಿವಡ್ಡರ, ತಾಲೂಕು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಎಸ್‌ಬಿಬಿಎಂಡಿ ಶಾಲೆಯ ವಿದ್ಯಾರ್ಥಿನಿಯರು ನಾಡ ಗೀತೆ ಹಾಡಿದರು. ರಾಜಶೇಖರ ಪಾರ್ವತೆರ ಸ್ವಾಗತಿಸಿದರು. ರಮೇಶ ಹರಿಜನ ಕಾರ್ಯಕ್ರಮ ನಿರೂಪಿಸಿದರು. ಗುರುಶಾಂತಪ್ಪ ವಿ. ವಂದಿಸಿದರು.

ಪೊಟೋ ಪೈಲ್ ನೇಮ್ ೨೦ಎಸ್‌ಜಿವಿ೧ ಶಿಗ್ಗಾಂವಿಯಲ್ಲಿ ನಡೆದ ಡಿ. ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ತಹಸೀಲ್ದಾರ್‌ ಸಂತೋಷ ಹಿರೇಮಠ ಉದ್ಘಾಟಿಸಿ ಮಾತನಾಡಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...