ಚಿರತೆ ದಾಳಿಗೆ ಮೇಕೆ ಬಲಿ: ಪರಿಹಾರ ನೀಡುವಂತೆ ಮನವಿ

KannadaprabhaNewsNetwork |  
Published : Jan 10, 2025, 12:46 AM IST
9ಕೆಎಂಎನ್ ಡಿ21 | Kannada Prabha

ಸಾರಾಂಶ

ಹಲವು ದಿನಗಳಿಂದ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿ ಕುರಿ, ಮೇಕೆಗಳು ಬಲಿಯಾಗಿವೆ. ರೈತರು ಮೇಕೆ ಸಾಕಾಣಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡಿದ್ದಾರೆ. ಚಿರತೆ ದಾಳಿಯಿಂದ ಸಾಕಾಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಮನೆ ಆವರಣದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಸಮೀಪದ ಎನ್.ಹಲಸಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಗ್ರಾಮದ ರತ್ನಮ್ಮ ಮೇಕೆ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಎಂದಿನಂತೆ ತಮ್ಮ ಕೊಟ್ಟಿಗೆಯಲ್ಲಿ ಮೇಕೆಯನ್ನು ಕಟ್ಟಿ ಹಾಕಿದ್ದ ವೇಳೆ ರಾತ್ರಿ 2 ಗಂಟೆ ಸುಮಾರಿಗೆ ಚಿರತೆ ಮನೆಯ ಆವರಣದಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆ ಮೇಲೆ ದಾಳಿ ಮಾಡಿದೆ. ಮೇಕೆ ಚಿರಾಟದ ಶಬ್ದ ಕೇಳಿ ಮನೆ ಹೊರಗಡೆ ಬಂದು ನೋಡಿದಾಗ ಚಿರತೆ ಮೇಕೆ ಕುತ್ತಿಗೆ ಭಾಗ ಹಿಡಿದಿದ್ದು ಗೊತ್ತಾಗಿದೆ. ಮಾಲೀಕರನ್ನು ನೋಡಿದ ಚಿರತೆ ಕಾಲ್ಕಿತ್ತಿದೆ.

ಚಿರತೆ ದಾಳಿಯಿಂದ ಮೇಕೆ ಮೃತಪಟ್ಟಿದ್ದು, ನನಗೆ ಸಮಾರು 10 ಸಾವಿರರು. ನಷ್ಟ ಉಂಟಾಗಿದೆ. ಪರಿಹಾರ ಕೊಡಿಸುವಂತೆ ರತ್ನಮ್ಮ ನೋವು ತೋಡಿಕೊಂಡರು.

ಹಲವು ದಿನಗಳಿಂದ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿ ಕುರಿ, ಮೇಕೆಗಳು ಬಲಿಯಾಗಿವೆ. ರೈತರು ಮೇಕೆ ಸಾಕಾಣಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡಿದ್ದಾರೆ. ಚಿರತೆ ದಾಳಿಯಿಂದ ಸಾಕಾಣಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನ್ ಇಡಲು ವ್ಯವಸ್ಥೆ ಮಾಡಬೇಕು ಮತ್ತು ಜನವಸತಿ ಪ್ರದೇಶಗಳತ್ತ ದಾಳಿ ಮಾಡುವ ಕಾಡು ಪ್ರಾಣಿಗಳ ತಡೆಗೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗಸ್ತು ಅರಣ್ಯ ಪಾಲಕ ಎಂ.ಜೆ.ಉಮೇಶ್, ಪಶುಪಾಲನೆ ಇಲಾಖೆ ಮುಖ್ಯ ಪಶು ವೈದ್ಯಕೀಯ ಸಿಬ್ಬಂದಿ ಮಂಜು ಸ್ಥಳಕ್ಕೆ ಆಗಮಿಸಿ ಮೇಕೆಯ ಮರಣೋತ್ತರ ಪರೀಕ್ಷೆ ನಡೆಸಿದರು.

ನಾಯಿಗಳ ದಾಳಿಗೆ 4 ಕುರಿ ಬಲಿ

ಮಳವಳ್ಳಿ:

ನಾಯಿಗಳ ದಾಳಿಯಿಂದ ೪ ಕುರಿಗಳು ಬಲಿಯಾಗಿರುವ ಘಟನೆ ತಾಲೂಕಿನ ತಳಗವಾದಿ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ.

ಗ್ರಾಮದ ರೈತ ಚಿಕ್ಕಲಿಂಗಯ್ಯರಿಗೆ ಸೇರಿದ ಕುರಿಗಳನ್ನು ಎಂದಿನಂತೆ ಕುರಿಗಳ ಹಿಂಡನ್ನು ಗ್ರಾಮದ ಹೊರವಲಯದಲ್ಲಿ ಮೇಯಲು ಬಿಟ್ಟಿದ್ದ ವೇಳೆ ಸುಮಾರು 10 ರಿಂದ 12 ನಾಯಿಗಳ ಗುಂಪು ಏಕಾಏಕಿ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿವೆ. ದಾಳಿಯಲ್ಲಿ ಮೂರು ಕುರಿಗಳು ಸಾವನ್ನಪ್ಪಿದ್ದು, ಒಂದು ಕುರಿಯನ್ನು ಹೊತ್ತಿಕೊಂಡು ಹೋಗಿವೆ.

ರೈತ ಚಿಕ್ಕಲಿಂಗಯ್ಯ ಮಾತನಾಡಿ, ಜೀವನ ನಿರ್ವಹಣೆಗಿದ್ದ ಕುರಿಗಳನ್ನು ನಾಯಿಗಳು ಬಲಿಯಾಗಿವೆ. ಇದ್ದರಿಂದ 71 ಸಾವಿರಕ್ಕೂ ಅಧಿಕ ನಷ್ಟವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ