ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನೀವು ಯಜ್ಞದ ಮೂಲಕ ಉತ್ಕರ್ಷ ಹೊಂದಿ ನಿಮ್ಮೆಲ್ಲ ಇಷ್ಟಾರ್ಥಗಳನ್ನು ಪೂರೈಸುವ ಕಾಮಧೇನುವಾಗಲಿ. ಯಜ್ಞದಿಂದ ದೇವತೆಗಳನ್ನು ಸಂತುಷ್ಟಗೊಳಿಸಿ ಒಲಿಸಿಕೊಳ್ಳಲು ಸಾಧ್ಯ ಎಂದು ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ನುಡಿದರು.ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಯವರ 84ನೇ ಜಯಂತ್ಯುತ್ಸವ ಹಾಗೂ ವಿಶ್ವಶಾಂತಿಗಾಗಿ 54ನೇ ಅಖಿಲ ಭಾರತ ವೇದಾಂತ ಪರಿಷತ್ತಿನಲ್ಲಿ ಶನಿವಾರ ನಡೆದ 2ನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಯಜ್ಞ ದಾನ ತಪಃ ಕರ್ಮಪಾವನಾನಿ ಮನಿಷಿಣಾಮ ವಿಷಯದ ಕುರಿತು ಮಾತನಾಡಿದ ಅವರು, ಮನುಷ್ಯ ಗುರಿವಿನ ಅಮೃತ ವಾಣಿಗಳಿಂದ ಆತನು ಜೀವನ ಪಾವನಗೊಂಡು ಆಧ್ಯಾತ್ಮಿಕದತ್ತ ಶರಣಾಗುತ್ತಾನೆ. ನಾವು ಮಾಡುವ ಪುಣ್ಯ-ಪಾಪಗಳ ಮೇಲೆ ಮುಕ್ತಿ ಸಿಗುತ್ತದೆ. ಪ್ರವಚನ ಆಲಿಸುವುದು ಇದು ಜ್ಞಾನದ ಯಜ್ಞ. ಆಧ್ಯಾತ್ಮ ಚಿಂತನೆ ಮಾಡುವುದರಿಂದ ನಾವು ಬ್ರಹ್ಮ ಲೀನವಾಗುತ್ತೇವೆ. ಲಕ್ಷಾಂತರ ಜೀವರಾಸಿಗಳಲ್ಲಿ ಮನುಷ್ಯ ಜನ್ಮ ಸಿಕ್ಕಿರುವುದು ಪುಣ್ಯ. ಆದರೆ, ಇದನ್ನು ಕಾಪಾಡಿಕೊಂಡು ಹೊಗಬೇಕು ಎಂದರು.
ಅನ್ನದಾನ ಮಹಾದಾನ. ಅನ್ನದಾನಕಿಂತಲು ವಿದ್ಯಾದಾನ ಬಹಳ ಶ್ರೇಷ್ಠವಾಗಿದೆ. ಮನುಷ್ಯ ತನ್ನ ಶರೀರವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಒಂದು ದೊಡ್ಡ ಯಜ್ಞವಾಗಿದೆ ಎಂದರಲ್ಲದೇ ಇಂಚಲ ಶ್ರೀಗಳು ಪುಟ್ಟ ಗ್ರಾಮದಲ್ಲಿ ಪ್ರತಿವರ್ಷ ವೇದಾಂತ ಪರಿಷತ್ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಾಡಿಗೆ ಆಧ್ಯಾತ್ಮಿಕ ಚಿಂತನೆ ಭಿತ್ತುತ್ತಿರುವ ಕಾರ್ಯ ಅನನ್ಯವಾಗಿದೆ. ಅವರಿಗೆ ಭಗವಂತನು ನೂರಾರು ವರ್ಷ ಆಯುಷ್ಯ, ಆರೋಗ್ಯ ದಯೆ ಪಾಲಿಸಲೆಂದು ದೇವರಲ್ಲಿ ಪ್ರಾರ್ಥಿಸಿದರು.ಹರಳಕಟ್ಟಿ ಶಿವಾನಂದ ಬ್ರಹ್ಮವಿದ್ಯಾಶ್ರಮದ ನಿಜಗುಣ ಸ್ವಾಮೀಜಿ ಮಾತನಾಡಿ, ಯಜ್ಞದಿಂದ ನಾವು ಮಾಡುವ ಕರ್ಮಗಳು ದೂರವಾಗುತ್ತವೆ. ಭಗವಂತನ ನಾಮ ಸ್ಮರಣೆ ನಿತ್ಯ ಮಾಡಬೇಕು. ದಾನ ಮಾಡುವುದು ಕೊಡಾ ಒಂದು ಯಜ್ಞ ಎಂದರು.
ಖುರ್ದಕಂಚನಳ್ಳಿಯ ಸುಬ್ರಮಣ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಸುಧಾರಸ ಧಾರೆ ಯಾವುದು ಮಿಗೆ ಮೃದುವಚನ ವಿಷಯ ಕುರಿತು ಮಾತನಾಡಿ, ಮಾತು ನಮಗೆ ಭಗವಂತ ನೀಡಿರುವ ಒಂದು ವರದಾನ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅತ್ಯುತ್ತಮ ಸಾಧನವಾಗಿದೆ. ಮೃದುವಾದ ಮಾತುಗಳು ಅಮೃತಕ್ಕೆ ಸಮಾನ. ಅಂತಹ ಮಾತುಗಳನ್ನಾಡುವರರನ್ನು ಜನರು ಪ್ರೀತಿಸುತ್ತಾರೆ. ಮಾತನಾಬೇಕಾದರೇ ನಾವು ಬಹಳ ವಿಚಾರ ಮಾಡಬೇಕು. ಅತಿಥಿಗಳನ್ನು ಪ್ರಿತಿಯಿಂದ ಕಾಣಬೇಕು. ಮನುಷ್ಯನ ವಿನಯ ಮಾತುಗಳು ಅವರನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯೊಲು ಸಾಧ್ಯ ಎಂದರು.ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುರಗೋಡದ ನೀಲಕಂಠ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ದಾವಣಗೆರೆಯ ಜಡಿಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಹಡಗಿನಾಳದ ಸುಜ್ಮಾನ ಕುಟೀರ ಮಲ್ಲೇಶ್ವರ ಶರಣರು, ತೊಂಡಿಕಟ್ಟಿ ಅವಧೂತ ಗಾಳೇಶ್ಬರ ಮಠದ ಅಭಿನವ ವೆಂಕಟೇಶರ ಸ್ವಾಮೀಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಖೋದಾನಪುರದ ಶಾಂಭವಿ ಆಶ್ರಮದ ಜಾನಮ್ಮತಾಯಿ, ಸವಟಗಿ ನಿಂಗಾನಂದ ಸ್ವಾಮೀಜಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ತಾಯಿ, ಬಾದಾಮಿಯ ದಯಾಭಾರತಿ ತಾಯಿ, ತುಂಗಳದ ಅನಸೂಯಾ ತಾಯಿ ಮುಂತಾದವರು ಇದ್ದರು. ಸಹಸ್ರಾರು ಸದ್ಭಕ್ತರು ಉಪಸ್ಥಿತರಿದ್ದರು. ಇದೇ ವೇಳೆ ಶ್ರೀಗಳಿಂದ ಗಣ್ಯ ಮಾನ್ಯರನ್ನು ಸತ್ಕರಿಸಲಾಯಿತು.30ಬಿಎಲ್‌ಎಚ್1ಬೈಲಹೊಂಗಲ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ವಿಶ್ವಶಾಂತಿಗಾಗಿ 54ನೇ ಅಖಿಲ ಭಾರತ ವೇದಾಂತ ಪರಿಷತ್ ಎರಡನೇ ದಿನದ ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.
-------------------------ಬಾಕ್ಸ್..
ಅನನ್ಯ ಭಕ್ತಿಯಿದ್ದರೇ ಪರಮಾತ್ಮನು ಪ್ರತ್ಯಕ್ಷಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಯವರ 84ನೇ ಜಯಂತ್ಯುತ್ಸವದಲ್ಲಿ ವಿದ್ಯಾನಂದ ಭಾರತಿ ಸ್ವಾಮೀಜಿ ಅಭಿನುಡಿಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮಡದಿ, ಮಕ್ಕಳ ಮೇಲೆ ಇಟ್ಟ ಪ್ರೀತಿಯನ್ನು ದೇವರ ಮೇಲೆ ಇಟ್ಟರೇ ಭಗವಂತ ತಮ್ಮನ್ನು ಸನ್ಮಾರ್ಗದತ್ತ ಕೊಂಡ್ಯೊಯ್ಯಲು ಸಾಧ್ಯ ಎಂದು ಹಂಪಿ ಹೇಮಕೂಟದ ಶಿವರಾಮಾಧೂತಾಶ್ರಮದ ವಿದ್ಯಾನಂದ ಭಾರತಿ ಸ್ವಾಮೀಜಿ ನುಡಿದರು.ಸಮೀಪ ಸುಕ್ಷೇತ್ತ ಇಂಚಲ ಗ್ರಾಮದ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿಯವರ 84ನೇ ಜಯಂತ್ಯುತ್ಸವ ಹಾಗೂ ವಿಶ್ವಶಾಂತಿಗಾಗಿ 54ನೇ ಅಖಿಲ ಭಾರತ ವೇದಾಂತ ಪರಿಷತ್ತಿನಲ್ಲಿ ಶುಕ್ರವಾರ ಮೊದಲ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಭಕ್ತ್ಯಾತ್ವನನ್ಯಯಾಶಕ್ಕಃ ಅಹಮೇವಂ ವಿದೋರ್ಜುನ ಎಂಬ ವಿಷಯದ ಕುರಿತು ಮಾತನಾಡಿದ ಅವರು, ದೇವರು ನನ್ನ ಭಕ್ತಿಯಲ್ಲಿ ಹಾಡಿ ಹೊಗುಳುತ್ತಾನೋ ಅಲ್ಲಿ ನಾನಿರುವೇ, ನಮ್ಮಲ್ಲಿ ಅನನ್ಯ ಭಕ್ತಿಯಿದ್ದರೇ ಪರಮಾತ್ಮನು ಪ್ರತ್ಯಕ್ಷನಾಗುತ್ತಾನೆ. ಮನುಷ್ಯನಲ್ಲಿ ಶುದ್ದ ಭಕ್ತಿಯಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು.ಶಿವಯೋಗೀಶ್ವರ ಮಠಕ್ಕೆ ಬಂದು ವೇದಾಂತ ಪರಿಷತಗಳಲ್ಲಿ ಪಾಲ್ಗೊಳ್ಳಿ ಸಾಕು ನಿಮ್ಮ ಜೀವನ ಸಾರ್ಥಕವಾಗುತ್ತದೆ. ಅಧ್ಯಾತ್ಮದತ್ತ ಮನಸ್ಸು ಹರಿಸಿದರೆ ಮನುಷ್ಯ ಒತ್ತಡ, ಜಂಜಾಟದಿಂದ ಮುಕ್ತಿ ಪಡೆದು ಸಂತೋಷ ಕಾಣಬಹುದು. ಪ್ರಶ್ನಾತಿತರು, ಯಾರಿಗೂ ನೋವನ್ನು ಕೊಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತ ಭಕ್ತರಲ್ಲೇ ಗುರುನಾಥರೂಢರನ್ನು ಕಾಣುವವರು ಡಾ.ಶಿವಾನಂದ ಭಾರತಿ ಅಪ್ಪನವರು ಎಂದರು.
ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತಿಯ ಪ್ರೀತಿ , ಭಕ್ತಿಯ ಯೋಗವಾಗಿದೆ. ಇದು ಜೀವಮಾನದ ಕ್ರಮೇಣ ಪ್ರಕ್ರೀಯೆಯಾಗಿದ್ದು, ಅದು ನಿಜವಾಗಿಯೂ ದೇವರ ಸಾಕ್ಷಾತ್ಕಾರಕ್ಕೆ ಕಾರಣವಾಗಿದೆ. ಆಡಂಬರವಿಲ್ಲದ ಶುದ್ಧವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞ ಮಾಡಿಯೇ ದೇವರನ್ನು ಪ್ರಸನ್ನಗೊಳಿಸುತ್ತನೆ ಎಂಬುವುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ ಅರ್ಪಿಸುವ ಹವಿಸ್ಸು ದೇವರ ಪಾದವನ್ನು ಸೇರಲು ನಮ್ಮಲ್ಲಿ ಆಳವಾದ ಭಕ್ತಿ ಇರಲೇಬೇಕು. ಏಕಾಗ್ರತೆ ಹೊಂದಿದ ಭಕ್ತಿಯೇ ಯಜ್ಞ, ತಪಸ್ಸು, ವೃತ್ತ ಮೊದಲಾದ ಪೂಜಾ ವಿಧಿ ವಿಧಾನಗಳಿಗೆ ಮೂಲ ಜ್ಞಾನವಿಲ್ಲದವನು ಕತ್ತಲನ್ನು ಓಡಿಸಲಾರ ಬೆಳಕನ್ನು ಅನುಭವಿಸಲಾರ. ದೇವರು ಎಂದರೇ ಮನಷ್ಯನ ಸಂತೃಪ್ತ ಸ್ಥಿತಿಯ ಅದೃಶರೂಪ ಏನೇ ಅಂದರೂ ಮನುಷ್ಯ ಒಳಗೆ ಸರ್ವಾಂತಯಾಮಿಯಾದ ದೇವರು ಇದ್ದಾನೆ. ದೇವರ ಒಲವಿಗಾಗಿ ಪರಿ ಪರಿಯಾಗಿ ಪೂಜಸುವ ನಾವು ಬಯಸುವುದು ಆತನ ಅನುಗ್ರಹ ಮತ್ತು ಅದರಿಂದ ದೊರೆಯುವ ಸಂತೃಪ್ತ ಜೀವನ ಮಾತ್ರ ಎಂದರು.ಹುಬ್ಬಳ್ಳಿ ಜಡಿಸಿದ್ದಯೋಗೀಂದ್ರ ಮಠದ ರಾಮಾನಂದ ಭಾರತಿ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಹುಬ್ಬಳ್ಳಿ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮಿಗಳು, ತುಂಗಳದ ಅನಸೂಯಾತಾಯಿ, ಕುಳ್ಳೂರಿನ ಶಿವಯೋಗೀಶ್ವರ ಮಠದ ಬಸವಾನಂದ ಭಾರತಿ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಇದ್ದರು. ಇದಕ್ಕೂ ಮುಂಚೆ ಪ್ರಾಥಕಾಲದಲ್ಲಿ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಶಾಲಾ ಮಕ್ಕಳಿಂದ ಮದ್ವಗವದ್ಗೀತಾ ಪಾರಾಯಣ ಜರುಗಿತು. ಹಂಪಿ ಹೇಮಕೂಟ ವಿದ್ಯಾನಂದ ಭಾರತಿ ಸ್ವಾಮೀಜಿ ಅವರಿಂದ ಪ್ರಣವ ಧ್ವಜಾರೋಹಣ ಮತ್ತು ಕಳಸ ಸ್ಥಾಪನೆ ಜರುಗಿತು.
ಈ ಸಂದರ್ಭದಲ್ಲಿ ಸಾವಿರಾರು ಸದ್ಭಕ್ತರು ಇದ್ದರು.