ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣ ಪುರಸಭೆಗೆ ಸೇರಿದ ಹೊಸಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೋಟೆಭೈರವೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಹಾಗು ಸಮುದಾಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಐತಿಹಾಸಿಕ ಇತಿಹಾಸ ಹಿನ್ನೆಲೆಯುಳ್ಳ ಸ್ಥಳ ಇಂದು ಸುಂದರ ಸ್ಥಳವಾಗಿ ನಿರ್ಮಾಣವಾಗಿದೆ. ಶ್ರೀಗಳು 2011ರಲ್ಲಿ ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್ ಆಗಿದ್ದ ವೇಳೆ ಈ ದೇವಾಲಯಕ್ಕೆ ವಿಶೇಷ ಅನುದಾನ ನೀಡಿದ್ದರು. ಅಲ್ಲದೇ, ಅನೇಕರು ಸಹಾಯ ಮಾಡಿದ್ದಾರೆ. ಒಳ್ಳೆಯ ಕೆಲಸ ಆಗಬೇಕಾದರೆ ಭಗವಂತ ಯಾವ ರೂಪದಲ್ಲಿಯಾದರೂ ಬಂದು ಸಹಾಯ ಮಾಡುತ್ತಾನೆ ಎಂಬುದಕ್ಕೆ ಇದೇ ತಾಜಾ ಉದಾಹರಣೆ ಎಂದರು.ಶ್ರೀ ಕಾಲಭೈರವೇಶ್ವರಸ್ವಾಮಿ ಎಲ್ಲರಿಗೂ ಆರೋಗ್ಯ ಆಯಸ್ಸು ನೀಡಲಿ. ವಿಶೇಷವಾಗಿ ರೈತಾಪಿ ವರ್ಗಕ್ಕೆ ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಸಮೃದ್ಧಿಯಾಗಿ ಜೀವನ ನಡೆಸುವಂತಾಗಲಿ. ನಾಡಿನ ಜನತೆ ಸುಖ ಶಾಂತಿಯಿಂದಿರಲು ಭಗವಂತ ಆಶೀರ್ವಾದ ನೀಡಲಿ. ಗ್ರಾಮಕ್ಕೆ ಬಂದು ನಿಮ್ಮೆಲ್ಲರನ್ನು ಭೇಟಿಯಾಗುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದರು.
ಕೋಟೆ ಭೈರವೇಶ್ವರಸ್ವಾಮಿಯ ಒಕ್ಕಲಿನ ಗ್ರಾಮಗಳಾದ ಮಿರ್ಲೆ, ಸಾಲಿಗ್ರಾಮ ಸೇರಿದಂತೆ ಹಲವು ಗ್ರಾಮಗಳ ಭಕ್ತರ ಶ್ರಮದ ಫಲವಾಗಿ ಇಂದು ಸುಂದರ ದೇವಾಲಯ ನಿರ್ಮಾಣಗೊಂಡಿದೆ. ಐತಿಹಾಸಿಕ ಹಿನ್ನೆಲೆ ಇರುವ ಈ ಸ್ಥಳದಲ್ಲಿ ಶ್ರೀಕಾಲಭೈರವೇಶ್ವರ ನೆಲೆಯಾಗಿದೆ. ಈ ಸ್ಥಳ ಪ್ರವಾಸಿತಾಣವಾಗಿ ಮಾರ್ಪಾಡಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಜಿಲ್ಲಾ ಜೆಡಿಎಸ್ ಪ್ರಧಾನ ಕಾಯದರ್ಶಿ ಬಿ.ಎಂ.ಕಿರಣ್, ಪುರಸಭಾ ಮಾಜಿ ಉಪಾದ್ಯಕ್ಷೆ ಗಾಯಿತ್ರಿ, ವಕೀಲ ರವಿಶಂಕರ್ ನಾಟನಹಳ್ಳಿ ಮಹೇಶ್, ದೇವಸ್ಥಾನ ಸಮಿತಿ ಅಧ್ಯಕ್ಷೆ ಮಂಜುಳಾ ಚನ್ನಕೇಶವ, ಎನ್.ಡಿ.ಯೋಗೇಶ್, ಐನೋರಹಳ್ಳಿ ಮಲ್ಲೇಶ್, ಐಕನಹಳ್ಳಿ ಕೃಷ್ಣೇಗೌಡ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಕೆ.ಆರ್.ಪೇಟೆ:
ಪಟ್ಟಣ ಪುರಸಭೆಗೆ ಸೇರಿದ ಹೊಸಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೋಟೆಭೈರವೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಸಮುದಾಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಎಲ್ಲಿ ಗಂಗೆ ಇರುತ್ತದೆಯೋ ಅಲ್ಲಿ ನಾಗರೀಕತೆ ಬೆಳೆಯುತ್ತದೆ. ಹಾಗೆಯೇ ಈ ಗ್ರಾಮದ ಕೆರೆ ದಂಡೆಯಲ್ಲಿ ಶ್ರೀಕಾಲಭೈರವಸ್ವಾಮಿ ಅದ್ಭುತವಾಗಿ ನೆಲೆಯೂರಿದ್ದಾರೆ. ಈ ಪುಣ್ಯ ಕಾರ್ಯಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಿದ ಎಲ್ಲರಿಗೂ ಭಗವಂತನ ಅನುಗ್ರಹವಿರಲಿ ಎಂದರು.