ದೇವಿಯ ಆರಾಧನೆ ಭಾರತೀಯ ಸಂಸ್ಕೃತಿ ಜೀವಾಳ

KannadaprabhaNewsNetwork |  
Published : Oct 30, 2026, 02:45 AM IST
ಕುಮಾರೇಶ್ವರನಗರದ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಉದ್ಘಾಟನೆ | Kannada Prabha

ಸಾರಾಂಶ

ದೇವಿಯ ಆರಾಧನೆ ಸಮುದಾಯವನ್ನು ಒಂದುಗೂಡಿಸುವ ದೈವಿಕ ಪ್ರೇರಣೆ. ಭಕ್ತರ ಪಾಲಿಗೆ ದೇವಿಯು ಕೇವಲ ಆರಾಧನೆಯ ಮೂರ್ತಿಯಲ್ಲ, ಆಕೆ ನಂಬಿಕೆಯ ಶಕ್ತಿ.

ಧಾರವಾಡ:

ದೇವಿಯ ಆರಾಧನೆ ಸಮುದಾಯವನ್ನು ಒಂದುಗೂಡಿಸುವ ದೈವಿಕ ಪ್ರೇರಣೆ. ಭಕ್ತರ ಪಾಲಿಗೆ ದೇವಿಯು ಕೇವಲ ಆರಾಧನೆಯ ಮೂರ್ತಿಯಲ್ಲ, ಆಕೆ ನಂಬಿಕೆಯ ಶಕ್ತಿ ಎಂದು ಮಹಾನಗರ ಪಾಲಿಕೆ ಸದಸ್ಯೆ ಅನಿತಾ ಚಳಗೇರಿ ಹೇಳಿದರು.

ಇಲ್ಲಿಯ ಕುಮಾರೇಶ್ವರನಗರದ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಉದ್ಘಾಟಿಸಿದ ಅವರು, ದೇವಿಯ ಆರಾಧನೆ ನಮ್ಮ ಭಾರತೀಯ ಸಂಸ್ಕೃತಿಯ ಜೀವಾಳ. ಜಾತ್ರಾ ಮಹೋತ್ಸವಗಳಿಂದ ನಾವು ಸಾಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಬಹುದು ಎಂದರು.

ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಜೆ.ವೈ. ತೋಟದ, ಬಸವರಾಜ ಕೊಂಗವಾಡ, ಪ್ರಭು ಹಿರೇಮಠ, ಪುಷ್ಪಾವತಿ ಚವ್ಹಾಣ, ಉದಯ ನಾಯಕ ವೇದಿಕೆ ಮೇಲಿದ್ದರು.

ಶಂಕರ ಗಸ್ತೆ ಮತ್ತು ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಜಿ.ಎಂ. ಹುಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ನಿಗದಿ ಸ್ವಾಗತಿಸಿದರು. ನಂದಾ ಗುಳೇದಗುಡ್ಡ ವಂದಿಸಿದರು. ನಂತರ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಸುಜಾತಾ ಗುರವ ಕಮ್ಮಾರ, ವಿದುಷಿ ಭಾರ್ಗವಿ ಕುಲಕರ್ಣಿ ಅವರ ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ತಬಲಾದಲ್ಲಿ ದಯಾನಂದ ಸುತಾರ, ಹಾರ್ಮೊನಿಯಂದಲ್ಲಿ ಬಸವರಾಜ ಹೂಗಾರ ಸಮರ್ಥ ಸಾಥ್ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನಷ್ಟ ತಡೆಗೆ ಹಾಲಿನ ದರ 8 ರು. ಏರಿಕೆ - ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು?
ರೇ* ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ