ಕನ್ನಡಪ್ರಭ ವಾರ್ತೆ ಗೋಕರ್ಣ
೨೦೨೫-೨೬ನೇ ಸಾಲಿನ ವಲಯ ಮಟ್ಟದ ೧೦ ಶಾಲೆಗಳ ಒಟ್ಟು ೧೦೦ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕಾರ್ಯಕ್ರಮವನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ಆರ್. ನಾಯ್ಕ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಾರ್ಷಿಕ ಪರೀಕ್ಷೆಗೆ ೩೭ ದಿನಗಳಿದ್ದು, ಪರೀಕ್ಷೆ ಸನ್ನದ್ಧರಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯಲು ಇಂದಿನ ದಿನದ ವಿಷಯವಾರು ಸಂಪನ್ಮೂಲ ಶಿಕ್ಷಕರು ತಮಗೆ ಮಾರ್ಗದರ್ಶನ ನೀಡುತ್ತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ಮೊಬೈಲ್, ದೂರದರ್ಶನ ಇತರ ಯಾವುದೇ ಅಭ್ಯಾಸಕ್ಕೆ ಮತ್ತು ಆರೋಗ್ಯಕ್ಕೆ ಮಾರಕವಾಗುವ ಚಟುವಟಿಕೆಗಳಿಂದ ದೂರ ಇದ್ದು, ಅಧ್ಯಯನಕ್ಕೆ ಏಕಾಗ್ರತೆಯಿಂದ ನಿಗಾ ವಹಿಸಿ ಯಶಸ್ಸನ್ನು ಪಡೆಯಿರಿ ಎಂದು ಹಾರೈಸಿದರು.ಡಿಡಿಪಿಐ ಮತ್ತು ಕುಮಟಾ ಡಯಟ್ ಪ್ರಾಚಾರ್ಯ ಎನ್.ಆರ್. ಹೆಗಡೆ ಮಾತನಾಡಿ, ಪರೀಕ್ಷೆಯ ಕುರಿತು ಹಲವಾರು ವಿದ್ವಾಂಸರ, ವಿಜ್ಞಾನಿಗಳ ಉದಾಹರಣೆ ನೀಡಿ ಪರೀಕ್ಷೆಯಲ್ಲಿ ಯಶಸ್ಸನ್ನ ಸಾಧಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಮುಖ್ಯಾಧ್ಯಾಪಕ ಸಿ.ಜಿ. ನಾಯಕ ದೊರೆ ಅಧ್ಯಕ್ಷತೆ ವಹಿಸಿದ್ದರು.ಭದ್ರಕಾಳಿ ಆಂಗ್ಲ ಮಾಧ್ಯಮದ ಮುಖ್ಯಾಧ್ಯಾಪಕಿ ರೇವತಿ ಆರ್. ಮಲ್ಲನ್, ಶಿಕ್ಷಣ ಸಂಯೋಜಕರಾದ ದೀಪ. ವಿ.ಕಾಮತ್, ದಿನೇಶ್ ಪಂಡಿತ್, ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ವಿಜ್ಞಾನ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಮಹದೇವ್ ಗೌಡ, ಸಮಾಜ ವಿಜ್ಞಾನ ತಾಲೂಕು ಅಧ್ಯಕ್ಷ ವಿಜಯಕುಮಾರ್ ನಾಯ್ಕ್, ಸಂಪನ್ಮೂಲ ಶಿಕ್ಷಕರಾದ ರಾಮಕೃಷ್ಣ ನಾವಡ, ಅವಿನಾಶ ಗಾವಡಿ, ಮಾದೇವ್ ಗೌಡ, ಶ್ರೀನಿವಾಸ್ ನಾಯಕ್, ಗಿರೀಶ ಹೆಬ್ಬಾರ್, ಶ್ರೀಧರ ನಾಯಕ, ಪುರಂದರ ನಾಯ್ಕ್, ಜಾನಕಿ ಗೊಂಡ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮಾನಸ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಹಿರಿಯ ಶಿಕ್ಷಕ ಆರ್. ಜಿ.ನಾವಡ ಸ್ವಾಗತಿಸಿದರು. ಶಿಕ್ಷಕರಾದ ವಿವೇಕ್ ಪಟಗಾರ ವಂದಿಸಿದರು. ವಿಜ್ಞಾನ ಶಿಕ್ಷಕಿ ಸಹಜ ವಿ.ಸಿ. ನಿರ್ವಹಿಸಿದರು.