)
ಕನ್ನಡಪ್ರಭ ವಾರ್ತೆ ಬೆಂಗಳೂರು
ರೇಸ್ ಕೋರ್ಸ್ ರಸ್ತೆ ನಿವಾಸಿಯಾಗಿರುವ 59 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ರಂಜಿತಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಜು.23ರಂದು ನಾನು ಯೆಸ್ ಮೇಡಂ ಆ್ಯಪ್ ಮೂಲಕ ಬ್ಯೂಟಿಷಿಯನ್‌ನನ್ನು ಬುಕ್ ಮಾಡಿದ್ದೆ. ರಂಜಿತಾ ಎಂಬ ಬ್ಯೂಟಿಷಿಯನ್ ಮನೆಗೆ ಬಂದು ಚಿಕಿತ್ಸೆ ನೀಡಿದ್ದು, ಇದೇ ವೇಳೆ ವಾಷಿಂಗ್ ಮಷಿನ್ ಟೆಕ್ನಿಷಿಯನ್ ಕೂಡ ಮನೆಯಲ್ಲಿದ್ದರು. ಅಂದು ನಾನು ಅಡುಗೆ ಮನೆಯ ಕೆಲಸಕ್ಕಾಗಿ ಓಡಾಡುತ್ತಿದ್ದಾಗ ಬ್ಯೂಟಿಷಿಯನ್ ಕೆಲವು ಸಮಯ ಮಲಗುವ ಕೋಣೆಯಲ್ಲಿ ಒಬ್ಬರೇ ಇದ್ದರು. ಜು.24 ರಂದು ನಮ್ಮ ಮನೆಯ ನವೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಕಪಾಟಿನಲ್ಲಿದ್ದ ವಸ್ತುಗಳನ್ನು ಮತ್ತೊಂದು ಕೋಣೆಗೆ ಸ್ಥಳಾಂತರಿಸಲಾಗಿತ್ತು. ಜು.31 ರಂದು ಆಭರಣ ಧರಿಸಲು ಹುಡುಕಿದ್ದಾಗ ನೀಲಿ ಬಣ್ಣದ ಆಭರಣದ ಪೆಟ್ಟಿಗೆಯಲ್ಲಿದ್ದ ವಜ್ರದ ಉಂಗುರ, ಬಳೆ ಮತ್ತು ಕಿವಿಯೋಲೆಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಜು.23 ರಂದು ಮನೆಗೆ ಬಂದಿದ್ದ ಬ್ಯೂಟಿಷಿಯನ್ ಆಭರಣಗಳನ್ನು ತೆಗೆದುಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಮಹಿಳೆ ಆರೋಪಿಸಿದ್ದಾರೆ.