ರಾಮನಗರ: ಮನೆಗಳ್ಳನನ್ನು ಬಂಧಿಸಿರುವ ತಾವರೆಕೆರೆ ಪೊಲೀಸರು 45 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 7 ಲಕ್ಷ ರುಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ವಿ. ಸುರೇಶ್ , ಲಕ್ಷ್ಮಿ ನಾರಾಯಣ, ಮಾಗಡಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಎಂ.ಪ್ರವೀಣ್ ಮಾರ್ಗದರ್ಶನದಲ್ಲಿ ಸಬ್ಇನ್ಸ್ ಪೆಕ್ಟರ್ ರಾಮಪ್ಪ ಬಿ ಗುತ್ತೇರ್ ನೇತೃತ್ವದ ತಂಡ ಆರೋಪಿ ಶಿವರಾಜುನನ್ನು ಬಂಧಿಸಿತು. ಆರೋಪಿಯಿಂದ 45 ಲಕ್ಷ ಬೆಲೆ ಬಾಳುವ ಸುಮಾರು 800 ಗ್ರಾಂ ಚಿನ್ನಾಭರಣ, 7 ಲಕ್ಷ ರು. ನಗದು ಹಣ, ಸುಮಾರು 350 ಗ್ರಾಂ ನಕಲಿ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶ ಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಭಾಸ್ಕರ್, ಸಿಂಗೇಗೌಡ, ಸಿಬ್ಬಂದಿ ಮಂಜುನಾಥ್, ಹೇಮಂತ್ ಕುಮಾರ್, ಲಕ್ಷ್ಮಿಕಾಂತ, ಗೋವಿಂದರಾಜು, ಫರ್ಮಾನ್, ಶರಣಪ್ಪ, ತಿಪ್ಪೆಸ್ವಾಮಿ, ಶ್ರೀನಿವಾಸ್, ಹನುಮಂತರಾಜು, ಸೌಮ್ಯ ಪಾಲ್ಗೊಂಡಿದ್ದರು.24ಕೆಆರ್ ಎಂಎನ್ 6.ಜೆಪಿಜಿತಾವರೆಕೆರೆ ಠಾಣೆ ಪೊಲೀಸರು ವಶ ಪಡಿಸಿಕೊಂಡಿರುವ ಚಿನ್ನಾಭರಣ ಹಾಗೂ ನಗದು ಹಣ.