ಬೇಲೂರಿನ ಯುನೈಟೆಡ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳಿಗೆ ಬಂಗಾರದ ಪದಕ

KannadaprabhaNewsNetwork |  
Published : Jan 24, 2024, 02:01 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರಿನ ಕದ್ರಿಮಿದ್ರಿಯ ಇನ್ಫಾಂಟ್ ಜೀಸಸ್ ಶಾಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಟೇಕ್ವಾಂಡೋ ಅಸೋಷಿಯೇಶನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್‌ಶಿಪ್ 2024ರ ಸ್ಪರ್ಧೆಗೆ ಹಾಸನ ಜಿಲ್ಲೆಯ ಬೇಲೂರಿನ ಯುನೈಟೆಡ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 14 ಬಂಗಾರದ ಪದಕ, 9 ಬೆಳ್ಳಿಯ ಪದಕ ಹಾಗೂ 16 ಕಂಚಿನ ಪದಕ ಪಡೆಯುವುದರ ಮೂಲಕ ರಾಜ್ಯಮಟ್ಟದ ಪ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಚಿಕ್ಕಮಗಳೂರಿನ ಕದ್ರಿಮಿದ್ರಿಯ ಇನ್ಫಾಂಟ್ ಜೀಸಸ್ ಶಾಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಟೇಕ್ವಾಂಡೋ ಅಸೋಷಿಯೇಶನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಫ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್‌ಶಿಪ್ 2024ರ ಸ್ಪರ್ಧೆಗೆ ಹಾಸನ ಜಿಲ್ಲೆಯ ಬೇಲೂರಿನ ಯುನೈಟೆಡ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 14 ಬಂಗಾರದ ಪದಕ, 9 ಬೆಳ್ಳಿಯ ಪದಕ ಹಾಗೂ 16 ಕಂಚಿನ ಪದಕ ಪಡೆಯುವುದರ ಮೂಲಕ ರಾಜ್ಯಮಟ್ಟದ ಪ್ರೀಡಂ ಕಪ್ ಟೇಕ್ವಾಂಡೋ ಚಾಂಪಿಯನ್ ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಈ ಚಾಂಪಿಯನ್ ಶಿಪ್ ಗಳಿಸಿಕೊಟ್ಟಂತಹ ಕ್ರೀಡಾಪಟುಗಳಿಗೆ ಹಾಗೂ ಟೇಕ್ವಾಂಡೋ ಮಾಸ್ಟರ್ ಇರ್ಷಾದ್ ಅವರಿಗೆ ಶಾಲೆಯ ಕಾರ್ಯದರ್ಶಿಯಾದ ಹೆಚ್. ಎಂ. ದಿನೇಶ್ ಅಭಿನಂದಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತುಕೊಡದೇ ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳಿಗೆ ಪಠ್ಯಶಿಕ್ಷಣದ ಜೋತೆ ಪಠ್ಯೇತರ ಶಿಕ್ಷಣವನ್ನು ನೀಡುತ್ತಾ ಬಂದಿದ್ದೇವೆ ಈ ರೀತಿಯ ಶಿಕ್ಷಣಗಳು ಮಕ್ಕಳು ಜೀವನದಲ್ಲಿ ಯಶಸ್ಸು ಗಳಿಸಿ ಮುನ್ನಡೆಯಲು ಸಹಕಾರಿಯಾಗುತ್ತವೆ. ಈ ರೀತಿಯ ಕ್ರೀಡಾಸ್ಪರ್ಧೆಗಳಿಗೆ ಮಕ್ಕಳನ್ನು ತರಬೇತಿಗೊಳಿಸಿ ಅವರಿಗೆ ಆತ್ಮಸ್ಥೈರ್ಯವನ್ನು ನಮ್ಮ ನುರಿತ ಶಿಕ್ಷಕರು ನೀಡುತ್ತಿದ್ದು ಅದು ಫಲಪ್ರದವಾಗಿದ್ದು ಶಾಲೆಗೆ ಚಾಂಪಿಯನ್‌ಶಿಪ್‌ ದೊರೆತ್ತಿರುವುದು ಸಂತಸ ತಂದಿದೆ. ಇದೇ ರೀತಿ ಮುಂದೆಯೂ ನೆಡೆಯುವಂತಹ ಎಲ್ಲಾ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿಲು ಶಾಲೆಯ ವತಿಯಿಂದ ಅನುವು ಮಾಡಿಕೊಡಲಾಗುವುದು ಅದನ್ನು ಮಕ್ಕಳು ಸದುಪಯೋಗ ಮಾಡಿಕೊಂಡು ಗುರಿಯನ್ನು ಸಾಧಿಸಿಬೇಕೆಂದರು. ಈ ವೇಳೆ ಶಾಲೆಯ ಖಜಾಂಚಿಯಾದ ಸಿ.ಹೆಚ್. ಲೋಕೇಶ್, ಮುಖ್ಯಶಿಕ್ಷಕಿ ದೀಪಾ, ಎಂ.ಎನ್., ಮುಖ್ಯಶಿಕ್ಷಕ ರಘುರಾಂ, ಟೇಕ್ವಾಂಡೋ ಶಿಕ್ಷಕ ಇರ್ಷಾದ್ ಹಾಗೂ ಶಾಲೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ