ಕನ್ನಡಪ್ರಭ ವಾರ್ತೆ ಬೆಂಗಳೂರು
ದಾಸನಪುರ ಬಸ್ ನಿಲ್ದಾಣದ ಬಳಿ ರಾಮ್‌ದೇವ್ ಹೆಸರಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್ ನಾಗೇಶ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಜ್ಯುವೆಲ್ಲರಿ ಶಾಪ್‌ನ ಮಾಲೀಕ ಮಾಣಿಕ್ ರಾಮ್ ಎಂಬುವರು ನೀಡಿದ ದೂರಿನನ್ವಯ ರಾಬರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸೋಮವಾರ ಸಂಜೆ 5.30 ರ ಸುಮಾರಿಗೆ ದಾಸನಪುರ ಬಸ್ ನಿಲ್ದಾಣದ ಬಳಿ ರಾಮ್‌ದೇವ್ ಜ್ಯುವೆಲ್ಲರಿ ಶಾಪ್‌ಗೆ ಬೈಕಿನಲ್ಲಿ ಬಂದಿದ್ದ ಮೂವರು ಆರೋಪಿಗಳು ಅಂಗಡಿಯಲ್ಲಿದ್ದ ಇಬ್ಬರು ಬಾಲಕ ಪೈಕಿ ಒಬ್ಬನ ಬಳಿ ಕಿವಿಯೊಲೆ ತೋರಿಸುವಂತೆ ಕೇಳಿದ್ದಾರೆ. ಈ ರೀತಿ ಡಿಸೈನ್ ನಮ್ಮಲ್ಲಿ ಇಲ್ಲ ಎಂದು ಬಾಲಕ ಹೇಳುತ್ತಿದಂತೆ ಗನ್ ತೋರಿಸಿ ಬೆದರಿಸಿ 30 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಒಬ್ಬ ಬಾಲಕನಿಗೆ ಕಿರುಚದಂತೆ ಮುಖ ಪರಚಿ ಗಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಜ್ಯುವೆಲ್ಲರಿ ಶಾಪ್‌ನ ಮಾಲೀಕರ ಮಕ್ಕಳನ್ನು ಹೆದರಿಸಿ 30 ಗ್ರಾಂಗೂ ಹೆಚ್ಚು ಚಿನ್ನಾಭರಣ, 50 ಸಾವಿರ ನಗದು ದೋಚಿಕೊಂಡು ಪರಾರಿ ಆಗಿದ್ದಾರೆ. ಆರೋಪಿಗಳ ಸುಲಿವು ಸಿಕ್ಕಿದ್ದು ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು. ತನಿಖೆ ನಂತರ ಕೃತ್ಯಕ್ಕೆ ಬಳಸಿದ ಗನ್ ಅಸಲಿಯೋ ಅಥವಾ ನಕಲಿಯೋ ತಿಳಿದು ಬರಲಿದೆ.-ಡಿ.ಎಲ್ ನಾಗೇಶ್, ವಾಯುವ್ಯ ವಿಭಾಗದ ಡಿಸಿಪಿಕಿವಿಯೋಲೆ ಕೇಳಿಕೊಂಡು ಬೈಕಿನಲ್ಲಿ ಮೂವರು ಬಂದಿದ್ದರು. ಈ ರೀತಿ ಡಿಸೈನ್ ನಮ್ಮಲ್ಲಿ ಇಲ್ಲ ಎನ್ನುತ್ತಿದಂತೆ ಗನ್ ತೋರಿಸಿ ಬೆದರಿಸಿದರು. ನಗದು ಚಿನ್ನಾಭರಣ ಓಡಿಹೋದರು. ಕಿರುಚದಂತೆ ನನ್ನ ಮುಖ ಪರಚಿ, ಬಾಯಿ ಮುಚ್ಚಿಸಿದರು. ನಂತರ ಬೈಕಿನಲ್ಲಿ ನೆಲಮಂಗಲದ ಕಡೆ ಓಡಿ ಹೋದರು.
-ಗೌತಮ್, ಜ್ಯುವೆಲ್ಲರಿ ಶಾಪ್ ಮಾಲೀಕನ ಮಗ