ರೈಲು ಹಳಿ ವಿದ್ಯುದೀಕರಣ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಗೊಮಟೇಶ್ವರ ಎಕ್ಸ್‌ಪ್ರೆಸ್‌ ಪುನಾರಂಭ

KannadaprabhaNewsNetwork |  
Published : Dec 19, 2025, 03:00 AM IST
32 | Kannada Prabha

ಸಾರಾಂಶ

ಇತ್ತೀಚೆಗೆ ಯಶವಂತಪುರ, ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ಸಂಚಾರವನ್ನು ಜೂನ್‌ನಿಂದ ನವೆಂಬರ್ ವರೆಗೆ ರದ್ದುಗೊಳಿಸಲಾಗಿತ್ತು. ಈಗ ಸಂಚಾರ ಪುನಾರಂಭಗೊಂಡಿದೆ.

ಮಂಗಳೂರು: ರೈಲು ಹಳಿ ವಿದ್ಯುದೀಕರಣ ಸಲುವಾಗಿ ಆರು ತಿಂಗಳ ಹಿಂದೆ ರದ್ದುಗೊಂಡಿದ್ದ ಬೆಂಗಳೂರು- ಮಂಗಳೂರು-ಕಾರವಾರ ರೈಲು ಸಂಚಾರವನ್ನು ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ. ಕರಾವಳಿಗೆ ಸಂಚಾರ ಮಾಡುವ ವಿವಿಧ ರೈಲುಗಳಲ್ಲಿ ಒಂದಾದ ಗೊಮಟೇಶ್ವರ ಎಕ್ಸ್‌ಪ್ರೆಸ್ ಹಗಲು ರೈಲು (16575/16576) ಸಂಚಾರ ಪುನಾರಂಭಗೊಂಡಿದೆ. ಬೆಂಗಳೂರಿನ ಯಶವಂತಪುರದಿಂದ ಈ ರೈಲು ಸಂಚಾರ ಆರಂಭಿಸಲಿದ್ದು ವಾರದಲ್ಲಿ ಮೂರು ದಿನ ಇರಲಿದೆ. ಇತ್ತೀಚೆಗೆ ಯಶವಂತಪುರ, ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ಸಂಚಾರವನ್ನು ಜೂನ್‌ನಿಂದ ನವೆಂಬರ್ ವರೆಗೆ ರದ್ದುಗೊಳಿಸಲಾಗಿತ್ತು.

ಪ್ರವಾಸೋದ್ಯಮ ಉತ್ತೇಜನ ಉದ್ದೇಶದಿಂದ ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಈ ಗೊಮ್ಮಟೇಶ್ವರ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಿದೆ. ಅಗಲ ಗಾಜಿನ ಕಿಟಕಿ, ಬೃಹತ್ ಗಾಜಿನ ಮೇಲ್ಛಾವಣಿ, ವ್ಯವಸ್ಥಿತ ಆಸನಗಳಿವೆ. ಇದರಿಂದ ಮಳೆಗಾಲದಲ್ಲಿ ಹಾಸನ, ಸಂಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಮಂಗಳೂರು ಮಾರ್ಗದುದ್ದಕ್ಕೂ ಕಾಣುವ ಪ್ರಕೃತಿಯನ್ನು ಸವಿಯಬಹುದಾಗಿತ್ತು. ಮಳೆಗಾಲದಲ್ಲೇ ಈ ರೈಲಿನ ರದ್ದತಿಯಿಂದ ಪ್ರಯಾಣಿಕರಿಗೆ ಒಂದಷ್ಟು ನಿರಾಸೆಯಾಗಿತ್ತು.ಇದೀಗ ಶ್ರವಣಬೆಳಗೊಳ ಮೂಲಕ ಸಾಗುವ ಗೋಮಟೇಶ್ವರ ರೈಲು ಮತ್ತೆ ಆರಂಭಗೊಂಡಿದ್ದು ಯವಂತಪುರದಿಂದ ಭಾನುವಾರ, ಮಂಗಳವಾರ ಮತ್ತು ಗುರುವಾರ ಹೀಗೆ ವಾರದಲ್ಲಿ ಮೂರು ದಿನ ಪ್ರಯಾಣಿಸುತ್ತದೆ. ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರು ತಲುಪುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು