ಧರ್ಮಜಾಗೃತಿ ನಡಿಗೆಗೆ ಉತ್ತಮ ಸ್ಪಂದನೆ: ಡಾ.ಚನ್ನಸಿದ್ದರಾಮ ಸ್ವಾಮೀಜಿ

KannadaprabhaNewsNetwork |  
Published : May 17, 2024, 12:32 AM IST
ದಿ.16-ಅರ್.ಪಿಟಿ01ರಿಪ್ಪನಪೇಟೆ ಸಮೀಪದ ಹಾಲುಗುಡ್ಡೆ ಎಚ್.ಎಸ್.ರವಿಯವರು ಆಯೋಜಿಸಿದ್ದ ಧರ್ಮಜಾಗೃತಿ ಶ್ರೀಶೈಲ ಜಗದ್ಗುರುಗಳ ನಡಿಗೆ ಮಲೆನಾಡಕಡೆಗೆ ಧರ್ಮಸಮಾರಂಭದಲ್ಲಿ  ಶ್ರೀಶೈಲ ಜಗದ್ಗುರು ಡಾ.ಶ್ರೀಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.  | Kannada Prabha

ಸಾರಾಂಶ

ಶ್ರೀಶೈಲ ಮಲ್ಲಯ್ಯನಿಗೂ ಹಾಗೂ ಮಲೆನಾಡಿನ ಮಲ್ಲವರಿಗೂ ಭಕ್ತಿಭಾವದ ಅವಿನಾಭಾವ ಸಂಬಂಧವಿದೆ. ಮಲ್ಲಿಕಾರ್ಜುನ ಸ್ವಾಮಿ ದರ್ಶನಾಶೀರ್ವಾದಕ್ಕೆ ಅಗಮಿಸುವ ಭಕ್ತರಿಗಾಗಿ ಶ್ರೀಶೈಲದಲ್ಲಿ ಸುಮಾರು ₹100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಯಾತ್ರಿ ನಿವಾಸ ಮತ್ತು ಶಿಕ್ಷಣ ಸಂಸ್ಥೆ ಆರಂಭಿಸುತ್ತಿದ್ದು ಭಕ್ತರು ತಮ್ಮ ದುಡಿಮೆಯ ಅಲ್ಪ ಹಣವನ್ನು ಧಾರ್ಮಿಕ ಸೇವಾ ಕಾರ್ಯಕ್ಕೆ ನೀಡುವಂತಾಗಿದೆ.

ಕನ್ನಡಪ್ರಭ ವಾರ್ತೆ ರಿಪ್ಪನಪೇಟೆ

ಗುರು-ವಿರಕ್ತ ಪರಂಪರೆ ಒಂದೇ ಸಮಾಜದ ಧಾರ್ಮಿಕ ಭಾವನೆಗೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಆ ನಿಟ್ಟಿನಲ್ಲಿ ಗುರು ವಿರಕ್ತರು ಎಂಬ ಬೇಧ ಭಾವನೆ ಮಾಡದೇ ಸಮಾಜದ ಸಂಘಟನೆಯೊಂದಿಗೆ ಧರ್ಮ ಬೋಧನೆ ಉದ್ದೇಶದಿಂದಾಗಿ ಕಳೆದ 2-3 ದಿನಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ "ಧರ್ಮಜಾಗೃತಿ ನಡಿಗೆ-ಮಲೆನಾಡಕಡೆಗೆ’’ ಈ ಮಹತ್ಕಾರ್ಯಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಶ್ರೀಶೈಲ ಡಾ.ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಿಪ್ಪನ್‍ಪೇಟೆ-ಕೋಣಂದೂರು-ಹೊಸನಗರ-ಕೋಡೂರು-ಹಾಲುಗುಡ್ಡೆ-ವಸವೆ-ಇಂದ್ರೋಡಿ-ಅದುವಳ್ಳಿ-ಅಲುವಳ್ಳಿ-ಗವಟೂರು-ಬೆಳಕೋಡು-ಜಳಬೈಲು-ಹುಳಗದ್ದೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಭಕ್ತರ ಮನೆಮನೆಗೆ ತೆರಳಿ ``ಇಷ್ಟಲಿಂಗ ಮಹಾಪೂಜೆ ಮತ್ತು ಪಾದಪೂಜೆಯೊಂದಿಗೆ ಧರ್ಮಜಾಗೃತಿ’’ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಲೆನಾಡಿನಲ್ಲೂ ಮಳೆಯ ಕೊರತೆ ಎದುರಿಸುವಂತಾಗಿದ್ದು ಬಯಲು ಸೀಮೆಯಂತಾಗಿದೆ. ತಾವು ಮಲೆನಾಡಿನ ವ್ಯಾಪ್ತಿಗೆ ಬರುತ್ತಿದ್ದಂತೆ ಮಲ್ಲಯ್ಯನ ಪವಾಡವೆಂಬಂತೆ ನಾವು ಹೋದ ಕಡೆ ಮಳೆ ಆಗಮನದಿಂದ ಭಕ್ತರು ಹರ್ಷಿತರಾಗಿದ್ದು, ಶ್ರೀಶೈಲ ಮಲ್ಲಯ್ಯನಿಗೂ ಹಾಗೂ ಮಲೆನಾಡಿನ ಮಲ್ಲವರಿಗೂ ಭಕ್ತಿಭಾವದ ಅವಿನಾಭಾವ ಸಂಬಂಧವಿದೆ. ಮಲ್ಲಿಕಾರ್ಜುನ ಸ್ವಾಮಿ ದರ್ಶನಾಶೀರ್ವಾದಕ್ಕೆ ಅಗಮಿಸುವ ಭಕ್ತರಿಗಾಗಿ ಶ್ರೀಶೈಲದಲ್ಲಿ ಸುಮಾರು ₹100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಯಾತ್ರಿ ನಿವಾಸ ಮತ್ತು ಶಿಕ್ಷಣ ಸಂಸ್ಥೆ ಆರಂಭಿಸುತ್ತಿದ್ದು ಭಕ್ತರು ತಮ್ಮ ದುಡಿಮೆಯ ಅಲ್ಪ ಹಣವನ್ನು ಧಾರ್ಮಿಕ ಸೇವಾ ಕಾರ್ಯಕ್ಕೆ ನೀಡುವಂತಾಗಿದೆ ಎಂದರು.

ಈ ಧರ್ಮಜಾಗೃತಿ ಸಭೆಯಲ್ಲಿ ಕೋಣಂದೂರು ಬೃಹನ್ಮಠದ ಷ.ಬ್ರ,ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ತೊಗರ್ಸಿ ಕ್ಯಾಸನೂರು ಹಿರೇಮಠದ ಷ.ಬ್ರ.ಘನ ಬಸವಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿ ಈ ಧರ್ಮಜಾಗೃತಿ ಕಾರ್ಯಕ್ರಮ ಜರುಗಿದೆ.

ಬಿಜಾಪುರ ಬಸವನಬಾಗೇವಾಡಿ ಮಠದ ಷ.ಬ್ರ.ರೇಣುಕ ಶಿವಾಚಾರ್ಯ ಸ್ವಾಮೀಜಿ ಹಾಲುಗುಡ್ಡೆಯ ಎಚ್.ಎಸ್.ರವಿ,ಪವಿತ್ರಾ ರವಿ, ಶ್ರೇಯಾ, ಪ್ರಸಾದ್, ಶ್ರೀಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಆರ್.ಶಾಂತವೀರಪ್ಪ ಗೌಡ, ಕಾರ್ಯದರ್ಶಿಡಿ.ಎಸ್.ರಾಜಾಶಂಕರ್, ಎಚ್.ಎಂ.ವರ್ತೇಶಪ್ಪಗೌಡ, ಬಿ.ವಿ.ನಾಗಭೂಷಣ, ಬಿ.ಎಚ್.ಸ್ವಾಮಿಗೌಡ, ಡಿ.ಈ.ಮಧುಸೂದನ್, ನೆವಟೂರು ದೇವೇಂದ್ರಪ್ಪಗೌಡ, ನೆವಟೂರು ಈಶ್ವರಪ್ಪ (ಸ್ವಾಮಿಗೌಡ), ಬೆನವಳ್ಳಿ ಬಿ.ಎಲ್.ನಿಂಗಪ್ಪ, ಜಿ.ಡಿ.ಮಲ್ಲಿಕಾರ್ಜುನ ಗವಟೂರು, ದೂನ ಕುಮಾರಸ್ವಾಮಿ, ಹಾಲುಗುಡ್ಡೆ ಪುಟ್ಟಪ್ಪ, ಸಮಾಜದ ಇತರರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ