ನ್ಯಾಮತಿ ಅಂಚೆ ಇಲಾಖೆಯಿಂದ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ: ಶಾಂತನಗೌಡ ಶ್ಲಾಘನೆ

KannadaprabhaNewsNetwork | Published : Jun 16, 2024 1:51 AM

ಸಾರಾಂಶ

ಸರ್ಕಾರದ ವಿವಿಧ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಯಡಿಯಲ್ಲಿ ಸಿಗುವಂತಹ ಪಿಂಚಣಿ ಮತ್ತು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಅಂಚೆ ಇಲಾಖೆಯ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಅಲ್ಲದೆ, ಪಟ್ಟಣದ ಅಂಚೆ ಇಲಾಖೆ ಸಾರ್ವಜನಿಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ನ್ಯಾಮತಿಯಲ್ಲಿ ಶ್ಲಾಘಿಸಿದರು.

- ಕಚೇರಿಗೆ ಭೇಟಿ ನೀಡಿ ಸೌಲಭ್ಯಗಳ ಮಾಹಿತಿ ಪಡೆದ ಶಾಸಕ- - - ನ್ಯಾಮತಿ: ಸರ್ಕಾರದ ವಿವಿಧ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಯಡಿಯಲ್ಲಿ ಸಿಗುವಂತಹ ಪಿಂಚಣಿ ಮತ್ತು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಅಂಚೆ ಇಲಾಖೆಯ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಅಲ್ಲದೆ, ಪಟ್ಟಣದ ಅಂಚೆ ಇಲಾಖೆ ಸಾರ್ವಜನಿಕರೊಂದಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡರು ಶ್ಲಾಘಿಸಿದರು.

ಪಟ್ಟಣದ ಅಂಚೆ ಕಚೇರಿಗೆ ಭೇಟಿ ನೀಡಿ, ಅಂಚೆ ಇಲಾಖೆ ಸೌಲಭ್ಯಗಳ ಮಾಹಿತಿ ಪಡೆದು ಅವರು ಮಾತನಾಡಿದರು. ಅಂಚೆ ಇಲಾಖೆಯ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿ 2023-24ನೇ ಸಾಲಿನ ತಮ್ಮ ಅಂಚೆ ಕಚೇರಿಯಲ್ಲಿ 3200ಕ್ಕೂ ಅಧಿಕ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನ್ಯಾಮತಿ ತಾಲೂಕಿಗೆ ಸಂತೋಷದ ವಿಷಯ ಎಂದು ತಿಳಿಸಿದರು.

ನ್ಯಾಮತಿ ಅಂಚೆ ಇಲಾಖೆಯ ಪೋಸ್ಟ್‌ಮಾಸ್ಟರ್‌ ವೀರೇಂದ್ರಸ್ವಾಮಿ ಮಾತನಾಡಿ, ಅಂಚೆ ಇಲಾಖೆಯ ನ್ಯಾಮತಿ ಶಾಖೆಯು ಗ್ರಾಮೀಣ ಅಂಚೆ ವಿಮೆ, ಜೀವ ವಿಮೆ, ಗೋಲ್ಡ್‌ ಬಾಂಡ್‌ ವಿಮೆ, 3200ಕ್ಕೂ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದು ₹2 ಕೋಟಿಗೂ ಅಧಿಕ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆ ಮಾಡಿಸಿದೆ. ಜೊತೆಗೆ 1235 ಗ್ರಾಂ ಗೋಲ್ಡ್‌ ಬಾಂಡ್‌, ನ್ಯಾಮತಿ ತಾಲೂಕಿನ ಜನತೆ ಕೇವಲ 4 ದಿನಗಳಲ್ಲಿ 77,50,000 ಹಣ ವಿನಿಯೋಗ ಮಾಡಿ, ದಾವಣಗೆರೆ ವಿಭಾಗಕ್ಕೆ ಪ್ರಥಮ ಸ್ಥಾನ ತಂದಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವೇಳೆ ನ್ಯಾಮತಿ ಅಂಚೆ ಇಲಾಖೆ ಶಾಖೆಯಿಂದ ಶಾಸಕ ಡಿ.ಜಿ.ಶಾಂತಗೌಡ ಅವರನ್ನು ಸನ್ಮಾನಿಸಲಾಯಿತು. ಅಂಚೆ ಸಹಾಯಕರಾದ ಸಂತೋಷ ಎಚ್‌. ತಳವಾರ, ಸಿಬ್ಬಂದಿ ರಜತ್‌ ಕೆ., ಪರಮೇಶ್ವರಪ್ಪ, ವೇದಮೂರ್ತಿ, ತ್ಯಾಗರಾಜ್‌, ಮುಖಂಡರಾದ ಕೋಡಿಕೊಪ್ಪ ಶಿವಪ್ಪ, ಲೋಕೇಶ್‌, ಶ್ರೀಕಾಂತ್‌, ಯೋಗೇಶಪ್ಪ, ಕರಿಬಸಪ್ಪ, ಷಣ್ಮುಖ ಮತ್ತಿತರರಿದ್ದರು.

- - - (-ಫೋಟೋ:)

Share this article