ಹರಿದಾಸ ಪರಂಪರೆಗೆ ಗೋಪಾಲದಾಸರ ಕೊಡುಗೆ ಅನನ್ಯ: ನ್ಯಾಯವಾದಿ ಪ್ರಭಾಕರ ರಾವ್

KannadaprabhaNewsNetwork |  
Published : Feb 05, 2024, 01:48 AM IST
೨೮ಕೆಎನ್‌ಕೆ-೧                                                                                                     ಕನಕಗಿರಿ ತಾಲೂಕಿನ ನವಲಿಯ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಗೋಪಾಲದಾಸರ ಆರಾಧನೆ ನಿಮಿತ್ತ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.  | Kannada Prabha

ಸಾರಾಂಶ

ಭೋಗಾಪುರೇಶಗೆ ಅಭಿಷೇಕ, ಪುಷ್ಪಾರ್ಚನೆ, ತುಳಸಿ ಅರ್ಚನೆ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕನಕಗಿರಿಯ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರು ಹಾಗೂ ಭಕ್ತರಿಂದ ದೇಗುಲದ ಪ್ರಾಂಗಣದಲ್ಲಿ ಭಜನೆಯೊಂದಿಗೆ ಗೋಪಾಲದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ನೆರೆದಿದ್ದ ಭಕ್ತರು, ಮಹಿಳೆಯರು ಭಜನಾ ಹಾಡುಗಳಿಗೆ ಕುಣಿದು ಸಂತಸಪಟ್ಟರು.

ಕನಕಗಿರಿ: ಹರಿದಾಸ ಪರಂಪರೆಗೆ ಗೋಪಾಲದಾಸರ ಕೊಡುಗೆ ಅನನ್ಯ ಎಂದು ನ್ಯಾಯವಾದಿ ಪ್ರಭಾಕರ ರಾವ್ ಮೆಟ್ರಿ ಹೇಳಿದರು.ಅವರು ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಭೋಗಾಪುರೇಶ ದೇವಸ್ಥಾನದಲ್ಲಿ ಮೆಟ್ರಿ ಸಹೋದರರಿಂದ ನಡೆದ ೪ನೇ ವರ್ಷದ ಗೋಪಾಲದಾಸರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದರು.ಅನೇಕ ಕೀರ್ತನೆಗಳು, ಉಗಾಭೋಗ, ಸುಳಾದಿಗಳನ್ನು ರಚಿಸಿದ್ದಾರೆ. ಇಂತಹ ಅಗ್ರಗಣ್ಯ ದಾಸರ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಅವರ ಹಾದಿಯಲ್ಲಿ ನಡೆದು ಬದುಕು ಸಾರ್ಥಕವಾಗಿಸಿಕೊಳ್ಳೋಣ ಎಂದು ತಿಳಿಸಿದರು.ಭೋಗಾಪುರೇಶಗೆ ಅಭಿಷೇಕ, ಪುಷ್ಪಾರ್ಚನೆ, ತುಳಸಿ ಅರ್ಚನೆ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕನಕಗಿರಿಯ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರು ಹಾಗೂ ಭಕ್ತರಿಂದ ದೇಗುಲದ ಪ್ರಾಂಗಣದಲ್ಲಿ ಭಜನೆಯೊಂದಿಗೆ ಗೋಪಾಲದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ನೆರೆದಿದ್ದ ಭಕ್ತರು, ಮಹಿಳೆಯರು ಭಜನಾ ಹಾಡುಗಳಿಗೆ ಕುಣಿದು ಸಂತಸಪಟ್ಟರು.ಬಳ್ಳಾರಿ ಜಿಲ್ಲೆಯ ಕುರುಗೋಡು ತಹಶೀಲ್ದಾರ ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ತೀರ್ಥ, ಪ್ರಸಾದ ಜತೆಗೆ ಅನ್ನಸಂತರ್ಪಣೆ ನಡೆಯಿತು.ಪ್ರಮುಖರಾದ ಕೆ.ಭೀಮರಾವ್, ರಾಘವೇಂದ್ರ ರಾವ್ ಬೆಂಗಳೂರು, ಶ್ರೀನಿವಾಸರಾವ್, ಶ್ರೀನಿವಾಸ ಆಚಾರ್ ಬೆಂಗಳೂರು, ನಾರಾಯಣರಾವ್ ನವಲಿ, ಪ್ರಹ್ಲಾದರಾವ್, ರಘುನಾಥ ರವೀಂದ್ರ, ನರಸಿಂಗಮೂರ್ತಿ, ಸಂತೋಷ, ಗುರುರಾಜ ಗೆಣಕಿಹಾಳ, ಭೀಮರಾವ್ ಶಿರಗೋಳ, ಭಜನಾ ಕಲಾವಿದರಾದ ಸುರೇಶ ರೆಡ್ಡಿ, ವಿಜಯಕುಮಾರ ಹೊಸಳ್ಳಿ, ಭೀಮರೆಡ್ಡಿ, ಶಿವಪ್ಪ ಅಂಕಸದೊಡ್ಡಿ, ರಾಮಣ್ಣ ಗುಂಜಳ್ಳಿ, ಅಶೋಕ ನಾಯಕ, ಕಲೀಲಸಾಬ, ಹಾರ್ಮೋನಿಯಂ ವಾದಕ ಪರಂಧಾಮರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ