ದೇಶ ದ್ರೋಹದ ಬರಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಶುಭದರಾವ್

KannadaprabhaNewsNetwork |  
Published : May 14, 2025, 12:12 AM IST
ಕಾರ್ಕಳಬ್ಲಾಕ್ ಕಾಂಗ್ರೆಸ್  ಅದ್ಯಕ್ಷ  ಶುಭದರಾವ್  ಪ್ರಶ್ನೆ  | Kannada Prabha

ಸಾರಾಂಶ

. ಪೊಲೀಸ್ ಇಲಾಖೆಯು ಉಡುಪಿ ಎಸ್ಪಿ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಅರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಭರವಸೆ ನಮಗಿದೆ ಎಂದು ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ಶುಭದರಾವ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ನಿಟ್ಟೆ ವಿದ್ಯಾ ಸಂಸ್ಥೆಯ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಇಲಾಖೆಯು ಉಡುಪಿ ಎಸ್ಪಿ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಅರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಭರವಸೆ ನಮಗಿದೆ ಎಂದು ಕಾಂಗ್ರೆಸ್‌ ಬ್ಲಾಕ್ ಅಧ್ಯಕ್ಷ ಶುಭದರಾವ್ ಹೇಳಿದ್ದಾರೆ.

ಪಕ್ಷದ ವಿದ್ಯಾರ್ಥಿ ಸಂಘಟಣೆಯ‌ ಪ್ರಮುಖರು ಸಂಸ್ಥೆಗೆ ಭೇಟಿ ನೀಡಿ ಅಕ್ರೋಶವನ್ನು ವ್ಯಕ್ತಪಡಿಸಿದ್ದು. ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಮನವಿಯನ್ನೂ ಮಾಡಿದ್ದಾರೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಅರಿತು ಪ್ರಚೋದನೆಯ ಹೇಳಿಕೆ ನೀಡಿ ಶಾಂತಿ ಕದಡಿ ಭಯದ ವಾತಾವರಣ ಸೃಷ್ಟಿ ಮಾಡುವ ಯಾವುದೇ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಲಿಲ್ಲ.

ಆದರೆ ಈ ಬಗ್ಗೆ ಕ್ಷೇತ್ರ ಬಿಜೆಪಿ ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಅನೇಕ ಅನುಮಾನಗಳು ಹುಟ್ಟುತ್ತವೆ. ಗೋಡೆ ಬರಹದ ಮೇಲೆ ಬಣ್ಣ ಹಚ್ಚಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ಇವರ ನಾಯಕರು ಪ್ರಯತ್ನಿಸುತ್ತಿದ್ದಾರೆಯೇ? ಎನ್ನುವ ಸಂಶಯ ಮೂಡುತ್ತದೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಬಿಜೆಪಿ ಅಧ್ಯಕ್ಷರು ‌ಮೂರ್ಖತನದ ಹೇಳಿಕೆ ನೀಡುವುದನ್ನು ಬಿಟ್ಟು ಸ್ಥಳಿಯ ಶಾಸಕರಿಂದ ಪ್ರತಿಕಿಯೆ ನೀಡಲು ಪ್ರಯತ್ನಿಸಲಿ‌ ಮತ್ತು ತನಿಖೆಗೆ ಸಹಕರಿಸಲಿ ಎಂದು ಬ್ಲಾಕ್ ಅದ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!