ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರದ ಪ್ರಹಾರ: ಪಂಪಾಪತಿ

KannadaprabhaNewsNetwork |  
Published : Aug 24, 2025, 02:00 AM IST
ಕೊಟ್ಟೂರಿನಲ್ಲಿ ಬಿಜೆಪಿ   ಹಮ್ಮಿಕೊಂಡಿದ ಧರ್ಮಸ್ಥಳ ಉಳಿಸಿ ಪ್ರತಿಭಟನ ಮೆರವಣಿಗೆ ಸಭೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಪಂಪಾಪತಿ ಮಾತನಾಡಿದರು | Kannada Prabha

ಸಾರಾಂಶ

ನಿಜಾಮರ ಕಾಲದಲ್ಲೂ ನಡೆಯದ ಹಿಂದು ಧಾರ್ಮಿಕ ಭಾವನೆಗಳಿಗೆ ದಕ್ಕೆ ಕಾರ್ಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿರುವುದನ್ನು ಗಮನಿಸಿದರೆ ರಾಜ್ಯದಲ್ಲಿನ ಧಾರ್ಮಿಕ ಕೇಂದ್ರ, ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರ ಪ್ರಹಾರ ಮಾಡುತ್ತಿದೆ.

ಪ್ರತಿಭಟನಾ ಸಭೆಯಲ್ಲಿ ಕೊಟ್ಟೂರ ಬಿಜೆಪಿ ಘಟಕದ ಅಧ್ಯಕ್ಷ

ಕನ್ನಡ ಪ್ರಭವಾರ್ತೆ ಕೊಟ್ಟೂರು

ನಿಜಾಮರ ಕಾಲದಲ್ಲೂ ನಡೆಯದ ಹಿಂದು ಧಾರ್ಮಿಕ ಭಾವನೆಗಳಿಗೆ ದಕ್ಕೆ ಕಾರ್ಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿರುವುದನ್ನು ಗಮನಿಸಿದರೆ ರಾಜ್ಯದಲ್ಲಿನ ಧಾರ್ಮಿಕ ಕೇಂದ್ರ, ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರ ಪ್ರಹಾರ ಮಾಡುತ್ತಿದೆ ಎಂದು ಕೊಟ್ಟೂರು ಬಿಜೆಪಿ ಘಟಕದ ಅಧ್ಯಕ್ಷ ಪಂಪಾಪತಿ ಅಂಗಡಿ ಆರೋಪಿಸಿದರು.

ಪಟ್ಟಣದಲ್ಲಿ ಧರ್ಮಸ್ಥಳ ಉಳುವಿಗಾಗಿ ಬಿಜೆಪಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಧರ್ಮಸ್ಥಳ ಹಿಂದುಗಳು ಪಾಲಿನ ಪವಿತ್ರ ಕ್ಷೇತ್ರ ಇಂತಹ ಕೇಂದ್ರದ ಮೇಲೆ ವ್ಯವಸ್ಥಿತವಾಗಿ ಅಪಪ್ರಚಾರ ಸಾಗಿದ್ದರೂ ಈ ಬಗ್ಗೆ ಗಮನ ಹರಿಸದ ರಾಜ್ಯ ಸರ್ಕಾರ ಇದೀಗ ಯಾರೋ ಅನಾಮಿಕರ ದೂರಿನ ಬಗ್ಗೆ ವಿಚಾರಣೆಗೆಂದು ಎಸ್ ಐ ಟಿ ರಚನೆ ಮಾಡಿರುವುದು ಈ ಸರ್ಕಾರದ ಧಾರ್ಮಿಕ ಕ್ಷೇತ್ರಗಳ ಬಗೆಗಿನ ನಕಾರತ್ಮಕ ಮನೋಧೋರಣೆ ಕಾಣಿಸುತ್ತದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ರೆಡ್ಡಿ ಮಾತನಾಡಿ, ಧರ್ಮಸ್ಥಳದ ಬಗ್ಗೆ ಕೆಲ ಸ್ವಘೋಷಿತ ವಿಚಾರವಂತರು ನಡೆಸುತ್ತಿರುವ ಷಡ್ಯಂತ್ರದ ವಿರುದ್ಧ ನಾಡಿನ ಜನತೆ ಎಚ್ಚೆತ್ತುಕೊಂಡು ಬೀದಿಗಿಳಿದು ಇವರ ಬಂಡವಾಳ ಬಯಲಿಗೆ ತರುವ ಕಾರ್ಯ ಸಾಗಿದ್ದು ಇದು ಖಂಡಿತ ಫಲ ನೀಡುತ್ತದೆ ಎಂದರು.

ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಪಿ.ಶ್ರೀಧರ ಶೆಟ್ಟಿ, ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಕಾಶ ಬೆಣಕಲ್ಲು, ಮಠದ ಮಲ್ಲಿಕಾರ್ಜುನ, ವೀಣಾ ವಿವೇಕಾನಂದರಗೌಡ, ಕುಂಬಾರ ರಾಜಮ್ಮ, ವಿಕ್ರಮನಂದಿ ಮತ್ತಿತರರು ಮಾತನಾಡಿ, ಧರ್ಮಸ್ಥಳ ಮತ್ತಿತರ ಧಾರ್ಮಿಕ ಸಂಸ್ಥೆಗಳಿಗೆ ದಕ್ಕೆ ತರಲು ಮುಂದಾದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.

ಪಪಂ ಉಪಾಧ್ಯಕ್ಷ ಜಿ ಸಿದ್ದಯ್ಯ, ಸದಸ್ಯ ಬೋರವೆಲ್ ತಿಪ್ಪೇಸ್ವಾಮಿ, ಚಿರಿಬಿ ಪ್ರಕಾಶ, ವಿರೇಶಗೌಡ ಅಭಿ ಮತ್ತಿತರರು ಇದ್ದರು.

ಇದಕ್ಕೂ ಮೊದಲು ಧರ್ಮಸ್ಥಳ ಉಳಿಸಿ ಪ್ರತಿಭಟನ ಮೆರವಣಿಗೆ ಕೊಟ್ಟೂರೇಶ್ವರ ದೇವಸ್ಥಾನದಿಂದ ಆರಂಭಗೊಂಡು ತೇರು ಬಜಾರ್ ಮೂಲಕ ಮರಿಕೊಟ್ರೇಶ್ವರ ದೇವಸ್ಥಾನದವರೆಗೆ ನಡೆಯಿತು.

ನೂರಾರು ಸಂಖ್ಯೆಯ ಮಹಿಳೆಯರು ಮತ್ತು ಪುರುಷರು ಭಾಗವಹಿಸಿ ಧರ್ಮಸ್ಥಳ ಪರ ಘೋಷಣೆ ಕೂಗಿತ್ತಾ ಸಾಗಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!