ರಾಜ್ಯದ ವಿಕಾಸದಲ್ಲಿ ಸರ್ಕಾರಿ ನೌಕರರ ಪಾತ್ರ ಅಧಿಕ

KannadaprabhaNewsNetwork |  
Published : Sep 29, 2026, 02:00 AM IST
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಸರಕಾರಿ ನಿವೃತ್ತ ನೌಕರರ ಸಮಾವೇಶದಲ್ಲಿ ವಿಧಾನಸಭೆಯ ಸ್ಪೀಕರ್ ಜಿ.ಎಸ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಶಾಸಕರು-ಸಚಿವರು ಸೇರಿ ಸದನದಲ್ಲಿ ರೂಪಿಸುವ ಎಲ್ಲ ಕಾನೂನಾತ್ಮಕ ಅಧಿನಿಯಮಗಳನ್ನು ನಿಖರ ನೆಲೆಯಲ್ಲಿ ಅನುಷ್ಠಾನಗೊಳಿಸುವವರೇ ಸರ್ಕಾರಿ ನೌಕರರು.

ಧಾರವಾಡ:

ಸರ್ಕಾರದ ನಿರ್ದೇಶನದಂತೆ ಎಲ್ಲ ಇಲಾಖೆಗಳ ಮೂಲಕವೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಜನಪರ ಕೆಲಸಗಳು ನಡೆಯುತ್ತವೆ. ಹಾಗಾಗಿ ರಾಜ್ಯದ ವಿಕಾಸದಲ್ಲಿ ಸರ್ಕಾರಿ ನೌಕರರ ಪಾತ್ರ ಅಧಿಕವಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಸೋಮವಾರ ನಗರದ ವಿದ್ಯಾವರ್ಧಕ ಸಂಘದ ಡಾ. ಪಾಪು ಸಭಾಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಸರ್ಕಾರಿ ನಿವೃತ್ತ ನೌಕರರ ಸಮಾವೇಶ ಉದ್ಘಾಟಿಸಿದ ಅವರು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಶಾಸಕರು-ಸಚಿವರು ಸೇರಿ ಸದನದಲ್ಲಿ ರೂಪಿಸುವ ಎಲ್ಲ ಕಾನೂನಾತ್ಮಕ ಅಧಿನಿಯಮಗಳನ್ನು ನಿಖರ ನೆಲೆಯಲ್ಲಿ ಅನುಷ್ಠಾನಗೊಳಿಸುವವರೇ ಸರ್ಕಾರಿ ನೌಕರರು ಎಂದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ. ಎಲ್. ಭೈರಪ್ಪ ಮಾತನಾಡಿ, ಸುಮಾರು 30-40 ವರ್ಷಗಳ ವರೆಗೆ ಗೌರವಯುತವಾಗಿ ಸರ್ಕಾರಿ ಸೇವೆಗೈದ ನಿವೃತ್ತ ನೌಕರರಿಗೆ ಸಕಾಲಕ್ಕೆ ನಿವೃತ್ತಿಯ ಎಲ್ಲ ಸೌಲಭ್ಯಗಳು ಲಭಿಸಬೇಕು. ಕಾಲಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕೇಂದ್ರ ಸಮಾನ ಪಿಂಚಣಿ ಸೌಲಭ್ಯಗಳ ನೀಡಿಕೆ, ನಿವೃತ್ತ ನೌಕರರ ಆರೋಗ್ಯ ರಕ್ಷಣೆಗೆ ಪೂರಕ ವೈದ್ಯಕೀಯ ಸೌಲಭ್ಯಗಳ ನೀಡಿಕೆಯೂ ಸೇರಿದಂತೆ ನಿವೃತ್ತ ನೌಕರರ ಯೋಗಕ್ಷೇಮಕ್ಕೆ ಸದಾಕಾಲವೂ ಸ್ಪಂದಿಸಬೇಕು ಎಂದು ಹೇಳಿದರು.

ಶಾಸಕ ಎನ್.ಎಚ್. ಕೋನರಡ್ಡಿ, ಎಐಪಿಟಿಎಫ್ ಅಧ್ಯಕ್ಷ ಬಸವರಾಜ ಗುರಿಕಾರ, ಸಾಹಿತಿ ವೆಂಕಟೇಶ ಮಾಚಕನೂರ, ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಮಾತನಾಡಿದರು. ಶಾಸಕ ಎಂ.ಆರ್. ಪಾಟೀಲ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಮೇಲ್ಮನೆ ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ರಂಗೇಗೌಡ, ಎಸ್.ಎಫ್. ಸಿದ್ಧನಗೌಡರ, ಬಿ.ಎಂ. ಸೂರಗೊಂಡ, ಎಸ್.ಬಿ. ಸಿದ್ನಾಳ, ಎಸ್.ಜಿ. ಬಿರಾದಾರ, ಎಸ್.ಬಿ. ಅಣ್ಣಿಗೇರಿ, ವಿ.ಎಂ. ಹೆಗಡೆ, ಶಿವಶಂಕರ ಹಿರೇಮಠ, ಆರ್.ಸಿ. ಹಲಗತ್ತಿ, ಎಸ್.ಬಿ. ಕೊಡ್ಲಿ, ಆರ್.ಎಸ್. ಮುಳ್ಳೂರ, ರಾಜಶೇಖರ ಹೊನ್ನಪ್ಪನವರ, ವಿ.ಎಫ್. ಚುಳಕಿ, ನಾರಾಯಣ ಭಜಂತ್ರಿ, ಡಾ. ಪಿ.ಎಸ್. ಲಗಮಣ್ಣವರ, ಎಚ್.ಎಸ್. ಬಡಿಗೇರ, ಗುರು ಪೋಳ, ಎಸ್.ಜಿ. ಬಿಸೇರೊಟ್ಟಿ ಮತ್ತು ಶಾರದಮ್ಮ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಧಕ ನಿವೃತ್ತ ನೌಕರರನ್ನು ಗೌರವಿಸಲಾಯಿತು. ಎಸ್.ಬಿ. ಪಾಟೀಲ ನಲವಡಿ ಸ್ವಾಗತಿಸಿದರು. ಗುರು ತಿಗಡಿ ನಿರೂಪಿಸಿದರು. ಎ.ಬಿ. ಚನವೀರಗೌಡರ ವಂದಿಸಿದರು. ಸಂಘದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್