ನೀ ಕೊಡಲಾರೆ ನಾ ಬಿಡಲಾರೆ ಎಂಬಂತ ಸ್ಥಿತಿಗೆ ಉಪನ್ಯಾಸಕರ ಮುಷ್ಕರ । ಕಾಯಂಗೊಳಿಸುವಂತೆ ಅತಿಥಿ ಉಪನ್ಯಾಸಕರ ಪಟ್ಟು 23ನೇ ದಿನಕ್ಕೆ
ಕಾಯಂ ಮಾಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಮುಷ್ಕರವು ಶುಕ್ರವಾರಕ್ಕೆ ೨೨ ದಿನಗಳು ಕಳೆದಿರುವುದರಿಂದ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವ ಪರಿಸ್ಥಿತಿ ಒದಗಿಬಂದಿದೆ.
ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆಯೂ ಕಾಡುತ್ತಿದ್ದು, ಪಾಠ ಮಾಡಲು ತೊಂದರೆ ಉಂಟಾಗಿದೆ. ಜನವರಿ ಅಂತ್ಯದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕೆಲ ಕಾಲೇಜುಗಳಲ್ಲಿ ಇಲ್ಲಿವರೆಗೆ ಶೇ.೫೦ರಷ್ಟು ಪಾಠ ಕೂ[ ಪೂರ್ತಿಯಾಗಿಲ್ಲ.ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳು ವಿಧಿ ಇಲ್ಲದೆ ಅಲೆದಾಡುವ ಪರಿಸ್ಥಿತಿ ಒದಗಿದೆ, ಈ ವೇಳೆಗಾಗಲೇ ಶೇ ೭೫ರಷ್ಟು ಪಾಠ ಪೂರ್ಣಗೊಂಡಿರಬೇಕಿತ್ತು. ಹೆಚ್ಚುವರಿ ತರಗತಿ ನಡೆಸುವಂತೆ ಕಾಯಂ ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ. ಗ್ರಂಥಾಲಯಕ್ಕೆ ಹೋಗಿ ಓದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದೇವೆ. ಆದರೆ, ಕೆಲವರು ಅಡ್ಡಾಡುವುದು ಕಂಡು ಬರುತ್ತಿದೆ’ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎನ್. ಶ್ರೀನಿವಾಸಗೌಡ ವಿವರಿಸಿದ್ದಾರೆ.
ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನಲ್ಲಿ ೩,೨೦೦ ವಿದ್ಯಾರ್ಥಿನಿಯರು ಇದ್ದಾರೆ. ಇವರಿಗೆ ಇರುವುದು ಕೇವಲ ೩೭ ಕಾಯಂ ಶಿಕ್ಷಕರು. ಇಲ್ಲಿ ೭೫ ಮಂದಿ ಅತಿಥಿ ಉಪನ್ಯಾಸಕರಿದ್ದು, ಅವರೆಲ್ಲಾ ಈಗ ಗೈರಾಗುತ್ತಿದ್ದಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.
ಅತಿಥಿ ಉಪನ್ಯಾಸಕರ ಮುಷ್ಕರಿಂದ ತರಗತಿಗಳು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಕಾಯಂ ಶಿಕ್ಷಕರೇ ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕೆಲ ವಿಷಯಗಳಿಗೆ ಕಾಯಂ ಶಿಕ್ಷಕರೂ ಇಲ್ಲ. ಇದರಿಂದ ತರಗತಿ ನಡೆಸಲು ತೊಂದರೆ ಆಗುತ್ತಿದೆ.
ಕೋಟ್...
- ನಾಗನಾಳ ಮುನಿಯಪ್ಪ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಅಧ್ಯಕ್ಷ.
ನಾವು ತರಗತಿಗೆ ಬರುತ್ತೇವೆ. ಪಾಠ ಮಾಡಲು ಉಪನ್ಯಾಸಕರೇ ಇಲ್ಲವಲ್ಲ. ಹೀಗಾಗಿ, ದೂರದ ಹಳ್ಳಿಗಳಿಂದ ನಿತ್ಯ ಕಾಲೇಜಿಗೆ ಬಂದು ವಾಪಸ್ ತೆರಳುತ್ತಿದ್ದೇವೆ. ಕೆಲವೊಂದು ತರಗತಿ ಮಾತ್ರ ನಡೆಯುತ್ತಿದೆ. ಮುಂದೇನು ಎಂಬುದು ನಮಗೂ ಗೊತ್ತಿಲ್ಲ.