ಸುಡುಗಾಡು ಸಿದ್ಧರಿಗೆ ಹಕ್ಕು ಪತ್ರ ನೀಡಲು ಮುಂದಾದ ಸರ್ಕಾರ: ಗೋಪಾಲಕೃಷ್ಣ

KannadaprabhaNewsNetwork |  
Published : Oct 19, 2025, 01:00 AM IST
ಮೊಳಕಾಲುರು ತಾಲೂಕು ರಾಯಾಪುರ ಗ್ರಾಪಂ ವ್ಯಾಪ್ತಿಯ ಮ್ಯಾಸರಹಟ್ಟಿ ಮಾರೇಶ್ವರಿ ದೇವಸ್ಥಾನ ಆವರಣದಲ್ಲಿ ಶನಿವಾರ ಸುಡುಗಾಡು ಸಿದ್ಧರಿಗೆ ನಿವೇಶನ ಮುಂಜೂರಾತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಮ್ಯಾಸರಹಟ್ಟಿಯಲ್ಲಿ ಸುಡುಗಾಡು ಸಿದ್ದರಿಗೆ ನಿವೇಶನ ಪತ್ರ ವಿತರಣೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ತಾಲೂಕಿನ ಅಲೆಮಾರಿ ಸುಡುಗಾಡು ಸಿದ್ಧರಿಗೆ ತಮ್ಮ ವಾಸಸ್ಥಾನದ ಹಕ್ಕು ಪತ್ರ ನೀಡುವ ವಿಷಯವು ದಶಕಗಳಿಂದಲೂ ನೆನಗುದಿಗೆ ಬಿದ್ದಿದ್ದು, ಸರ್ಕಾರ ಹೆಚ್ಚು ಆಸಕ್ತಿ ತೋರಿ ಇವರೆಲ್ಲರಿಗೂ ಹಕ್ಕು ಪತ್ರ ಹಾಗೂ ಇ-ಸ್ವತ್ತು ನೀಡಲು ಮುಂದಾಗಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.

ತಾಲೂಕಿನ ರಾಯಾಪುರ ಗ್ರಾಪಂ ವ್ಯಾಪ್ತಿಯ ಮ್ಯಾಸರಹಟ್ಟಿ ಮಾರೇಶ್ವರಿ ದೇವಸ್ಥಾನ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂಗಳ ಆಶ್ರಯದಲ್ಲಿ ಕಂದಾಯ ಇಲಾಖೆಯಿಂದ ಏರ್ಪಡಿಸಿದ್ದ ಪದಿನಾಮ್ ದೇವರಹಟ್ಟಿ ಕಂದಾಯ ಗ್ರಾಮ ಘೋಷಣೆ ಹಾಗೂ ಸುಡುಗಾಡು ಸಿದ್ದರಿಗೆ ನಿವೇಶನ ಮುಂಜೂರಾತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ವಿತರಿಸುತ್ತಿರುವ ಹಕ್ಕು ಪತ್ರಗಳಿಂದ ಸುಡುಗಾಡ ಸಿದ್ದರು ಸರ್ಕಾರದ ನಾನಾ ಸೌಲಭ್ಯಗಳನ್ನು ಪಡೆಯಲು ಅಧಿಕೃತವಾಗಿ ಅರ್ಹತೆ ಪಡೆದಂತಾಗಿದೆ. ಹಕ್ಕು ಪತ್ರ ಹಾಗೂ ಇ.ಸ್ವತ್ತುಗಳು ತಮ್ಮಗಳ ಸ್ಥಳಕ್ಕೆ ಅಧಿಕೃತ ಸಾಕ್ಷಿಗಳಾಗಿವೆ. ಹಕ್ಕು ಪತ್ರದಿಂದ ಹೊರಗುಳಿದಿರುವ ಕುಟುಂಬದವರು ಆಂದ್ರದ ದಾಖಲೆಗಳನ್ನು ರದ್ದುಪಡಿಸಿಕೊಂಡು, ನಮ್ಮ ರಾಜ್ಯದ ದಾಖಲೆಗಳನ್ನು ಪಡೆದು ಅಧಿಕಾರಿಗಳಿಗೆ ನೀಡಿದಲ್ಲಿ ನಿಮಗೂ ಹಕ್ಕು ಪತ್ರ ಹಾಗೂ ಇ-ಸ್ವತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದರು.

ತಹಸೀಲ್ದಾ‌ರ್ ಟಿ.ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 15 ಗ್ರಾಮಗಳನ್ನು ಹೊಸದಾಗಿ ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಇಂದಿನಿಂದ ಈ ಗ್ರಾಮವನ್ನು ಮ್ಯಾಸರಹಟ್ಟಿಯ ಬದಲಾಗಿ ಪದನಾಮ್ ದೇವರಹಟ್ಟಿ ಎಂದು ಘೋಷಿಸಲಾಗಿದ್ದು, ಇನ್ನು ಮುಂದೆ ಇಲ್ಲಿನ ಎಲ್ಲರೂ ಈ ನೂತನ ಹೆಸರನ್ನು ಬಳಸಿಕೊಳ್ಳುವುದು ಖಡ್ಡಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಎಚ್.ಹನುಮಂತಪ್ಪ, ಗ್ರಾಪಂ ಮಾಜಿ ಸದಸ್ಯರಾದ ಜಿ.ಪಿ.ಸುರೇಶ್, ಪಿ.ಆರ್. ಕಾಂತರಾಜ್, ತಾಪಂ ವ್ಯವಸ್ಥಾಪಕ ನಂದೀಶ್ ಮಾತನಾಡಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ, ಬಿಇಒ ಇ.ನಿರ್ಮಲಾದೇವಿ, ಜಿಪಂ ಮಾಜಿ ಸದಸ್ಯ ವಿ.ಮಾರನಾಯಕ, ಕಾಂಗ್ರೆಸ್ ಎಸ್‌ಸಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಜಯಣ್ಣ, ಗ್ರಾಪಂ ಪಿಡಿಒ ನುರುಲ್ಲಾ, ಸದಸ್ಯರಾದ ವೈ.ಡಿ.ಕುಮಾರಸ್ವಾಮಿ, ಭಾಗ್ಯಮ್ಮ, ಜಿ.ಪಿ.ತಿಪ್ಪೇಸ್ವಾಮಿ, ಸಿದ್ದಮ್ಮ, ಜ್ಯೋತಿ, ಸೌಮ್ಯ, ಪಾಪಣ್ಣ, ಮಹಂತಮ್ಮ, ನಂಜಪ್ಪ, ಬಸವರಾಜ್, ಮೀನಾಕ್ಷಿ, ಬಸಮ್ಮ, ಮಂಜಣ್ಣ, ಗಾದ್ರಿ ಪಾಲಯ್ಯ ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ