ಸಂವಿಧಾನದ ಆಶಯಗಳ ಜಾರಿ ಸರ್ಕಾರದ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Feb 10, 2024, 01:47 AM ISTUpdated : Feb 10, 2024, 03:41 PM IST
೯ ಎಚ್‌ಆರ್‌ಆರ್ ೫ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಗೆ ಶ್ರೀಮಠದಿಂದ ಸನ್ಮಾನಿಸಲಾಯಿತು. ಈ ವೇಳೆ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಇದ್ದರು. ೯ ಎಚ್‌ಆರ್‌ಆರ್ ೫ಎಹರಿಹರದ ಮಾಜಿ ಶಾಸಕ ಎಸ್.ರಾಮಪ್ಪ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಗೆ ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಿದರು. ೯ ಎಚ್‌ಆರ್‌ಆರ್ ೫ಬಿಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜದ ಜನರಿಗೆ ಎದ್ದುನಿಂತು ಕೈ ಮುಗಿದರು. | Kannada Prabha

ಸಾರಾಂಶ

ಧರ್ಮ ಧರ್ಮಗಳ, ಜಾತಿ ಜಾತಿಗಳ ಒಡೆಯುವ, ಎತ್ತಿ ಕಟ್ಟುವ ಕೆಲಸವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಸಮ ಸಮಾಜದ ಆಶಯವನ್ನೇ ಸಂವಿಧಾನ ಪ್ರತಿಪಾದಿಸುತ್ತದೆ. ಸಂವಿಧಾನದ ಆಶಯಗಳ ಜಾರಿಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಧರ್ಮ ಧರ್ಮಗಳ, ಜಾತಿ ಜಾತಿಗಳ ಒಡೆಯುವ, ಎತ್ತಿ ಕಟ್ಟುವ ಕೆಲಸವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿವೆ. ಸಮ ಸಮಾಜದ ಆಶಯವನ್ನೇ ಸಂವಿಧಾನ ಪ್ರತಿಪಾದಿಸುತ್ತದೆ. ಸಂವಿಧಾನದ ಆಶಯಗಳ ಜಾರಿಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹರಿಹರ ತಾಲೂಕು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಶುಕ್ರವಾರ 26ನೇ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ-2024 ಹಾಗೂ ಶ್ರೀ ಪ್ರಸನ್ನಾನಂದ ಸ್ವಾಮಿಗಳ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಉದ್ಘಾಟಿಸಿ ಮಾತನಾಡಿ ಸಹಿಷ್ಣುತೆ ಹಾಗೂ ಸಹಬಾಳ್ವೆ ಮಾಡಬೇಕೆಂದು ಸಂವಿಧಾನ ಹೇಳುತ್ತದೆ. 

ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರಿಗೆ ಸರಿಯಾದ ಅವಕಾಶ ಸಿಕ್ಕಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದರು. ಆದರೆ, ಜಾತಿ ವ್ಯವಸ್ಥೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಶೂದ್ರ ಸಮುದಾಯಗಳಿಗೂ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಶೂದ್ರರಿಗೂ ಕಾವ್ಯಶಕ್ತಿ ಇದೆಯೆಂದು ವಾಲ್ಮೀಕಿ, ವ್ಯಾಸರಿಂದ ಸಾಬೀತು: ವಾಲ್ಮೀಕಿ ಜಾತ್ರೆ ಮೂಲಕ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಸಮಾಜದಲ್ಲಿ ಇಂದು ಶೋಷಣೆಗೆ ಒಳಪಟ್ಟ ಜನರು, ಅವಕಾಶ ವಂಚಿತ ಜನರು ಜಾಗೃತರಾಗಬೇಕಾಗಿರುವುದು ಅತ್ಯವಶ್ಯಕ. ಮಹರ್ಷಿ ವಾಲ್ಮೀಕಿ ಬೇಡ ಜನಾಂಗದಲ್ಲಿ ಜನಿಸಿದ ವ್ಯಕ್ತಿ. 

ನಂತರ ರಾಮಾಯಣ ಬರೆದು, ಮಹರ್ಷಿಯಾಗುತ್ತಾರೆ. ಸಮಾಜದಲ್ಲಿ ವಿಚಾರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಕಾವ್ಯಶಕ್ತಿ, ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾಗಿದ್ದಲ್ಲ. ಕಾವ್ಯಶಕ್ತಿ ಶೂದ್ರರಲ್ಲೂ ಇದೆಯೆಂಬುದನ್ನು ವಾಲ್ಮೀಕಿ, ವ್ಯಾಸರು ಸಾಬೀತುಪಡಿಸಿದ್ದಾರೆ.

ನೀನು ಗೌರವ ಕೊಟ್ಟರೆ, ನಾನೂ ಗೌರವ ಕೊಡುತ್ತೇನೆಂಬ ಮನೋಭಾವ ನಿಮ್ಮದಾಗಬೇಕು. ನಿಮ್ಮಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಬೇಕು. ಯಾವುದಾದರೂ ವಿಶ್ವ ವಿದ್ಯಾನಿಲಯಕ್ಕೆ ವಾಲ್ಮೀಕಿ ಹೆಸರಿಡಲು ಬೇಡಿಕೆ ಇಟ್ಟಿದ್ದೀರಿ. 

ಈ ಬಗ್ಗೆ ಪರಿಶೀಲಿಸೋಣ. ಬ್ಯಾಕ್ ಲಾಗ್ ಹುದ್ದೆ ಭರ್ತಿ ಬೇಡಿಕೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ನಾಗಮೋಹನ ದಾಸ್ ಆಯೋಗ ರಚನೆಯಾಗಬೇಕೆಂದು ನಾವೂ ಒತ್ತಾಯಿಸಿದೆವು ಎಂದು ತಿಳಿಸಿದರು.

ಸಮಾನ ಅವಕಾಶವಿರುವ ಸಮಾಜವೇ ರಾಮರಾಜ್ಯ: ಇಂದಿನ ಪ್ರಜಾಪ್ರಭುತ್ವ ರಾಮನ ಕಾಲದಲ್ಲೇ ಇತ್ತೆಂಬುದನ್ನು ಕಾಣುತ್ತೇವೆ. ಬಸವಾದಿ ಶರಣರ ಕಾಲದಲ್ಲೂ ಪ್ರಜಾಪ್ರಭುತ್ವ ಕಾಣಬಹುದು. ಪ್ರಜೆಗಳೇ ಪ್ರಭುಗಳೇ ಎಂಬುದನ್ನೇ ಪ್ರಜಾಪ್ರಭುತ್ವವೆನ್ನುತ್ತೇವೆ. ಅದರ ಮೂಲವನ್ನು ರಾಮಾಯಣ, ಮಹಾಭಾರತದಲ್ಲಿ ಕಾಣಲು ಸಾಧ್ಯವಿದೆ. ವರ್ಗರಹಿತ, ಜಾತಿ ರಹಿತ ಸಮಾಜ, ಸರ್ವರಿಗೂ ಸಮಾನ ಅವಕಾಶ, ಸಮಾನ ಅವಕಾಶವಿರುವ ಸಮಾಜ ಆವತ್ತೇ ಇತ್ತು. ಅದಕ್ಕೆ ರಾಮರಾಜ್ಯವೆಂದು ಹೇಳಲಾಗುತ್ತದೆ. ರಾಮರಾಜ್ಯ ಬಂದಾಗ ಮಾತ್ರ ಜಾತಿ, ವರ್ಗ ರಹಿತ ಸಮಾಜ ನಿರ್ಮಾಣ ಸಾಧ್ಯ. ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌