ಹೊಸಕೋಟೆ: ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯಿಂದ ಸ್ಥಳೀಯ ಗ್ರಾಮಗಳಿಗೆ ಮೂಲಸೌಕರ್ಯದ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಕೈಗಾರಿಕೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಹೊಸಕೋಟೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆಗಳು ನಡೆಯಲಿದ್ದು, ಉತ್ತಮ ಆಡಳಿತ ಮಂಡಳಿ ಹಾಗೂ ಪಿಡಿಒ ಸಹಕಾರ ದೊರೆತರೆ ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಸಾಧ್ಯ. ಗ್ರಾಮಸ್ಥರು ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಹೊಸಕೋಟೆಯಿಂದ ಮಾಲೂರು ಹಾಗೂ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಸುಮಾರು ೩೦ ಮೀಟರ್ ಅಗಲಕ್ಕೆ ಮೇಲ್ದರ್ಜೆಗೇರಿಸುವ ಕುರಿತು ಚರ್ಚಿಸಲಾಗುತ್ತಿದೆ. ಇದರಿಂದ ಕೈಗಾರಿಕಾ ಪ್ರದೇಶದಲ್ಲಿರುವ ಸಾರ್ವಜನಿಕರು, ರೈತರು ಹಾಗೂ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಭರವಸೆ ನೀಡಿದರು.ದಕ್ಷಿಣ್ ಫೌಂಡ್ರಿ ಸಂಪನ್ಮೂಲ ವ್ಯಕ್ತಿ, ಜಾನಕಿ ಪ್ರಸಾದ್, ಮಂಜುನಾಥ್ ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಎಸ್‌ಎಫ್‌ಸಿಎಸ್ ನಿರ್ದೇಶಕ ರಾಜ್‌ಗೋಪಾಲ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್‌ಗೌಡ, ಗ್ರಾಪಂ ಮಾಜಿ ಸದಸ್ಯ ತಮ್ಮಯ್ಯಗೌಡ, ಯುವ ಮುಖಂಡರಾದ ಅಂಗಡಿ ಕೃಷ್ಣಪ್ಪ, ಬಾಬು, ನಲ್ಲೂರಹಳ್ಳಿ ಶಿವಕುಮಾರ್, ಗೋವಿಂದಪ್ಪ ಲಕ್ಷö್ಮಣ್, ಮದನ್, ಪ್ರಕಾಶ್, ಲಕ್ಷ್ಮಣ್, ಲಯನ್, ಸಂತೋಷ್, ರಾಮಕೃಷ್ಣಪ್ಪ, ರವೀಂದ್ರ, ರಾಜಣ್ಣ ಸೇರಿದಂತೆ ಚಿಕ್ಕನಲ್ಲೂರಹಳ್ಳಿ ಗ್ರಾಮಸ್ಥರು ಹಾಜರಿದ್ದರು.
ಹೊಸಕೋಟೆ ತಾಲೂಕಿನ ಚಿಕ್ಕನಲ್ಲೂರಹಳ್ಳಿಯಲ್ಲಿ ದಕ್ಷಿಣ್ ಫೌಂಡ್ರಿ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿರುವ ಎರಡು ಶಾಲಾ ಕೊಠಡಿಗಳನ್ನು ಶಾಸಕ ಶರತ್ ಬಚ್ಚೇಗೌಡ ಅನಾವರಣಗೊಳಿಸಿದರು.