ಹಿರೇಕೆರೂರು: ಸರಕಾರಿ ಶಾಲೆಗಳು ಎಲ್ಲ ವರ್ಗದ ಜಾತಿಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಹಬಾಳ್ವೆ ಕಲಿಸುತ್ತಿವೆ. ಅಂತಹ ಶಾಲೆಗಳಿಗೆ ಪುಸ್ತಕಗಳನ್ನು ಕೊಟ್ಟು, ಅಲ್ಲಿಯ ಗ್ರಂಥಾಲಯಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶಕುಮಾರ ಎನ್. ಹೇಳಿದರು. ಪಟ್ಟಣದಲ್ಲಿ ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ ಎಂಬ ಯೋಜನೆಯಡಿಯಲ್ಲಿ ಪ್ರಾ. ಎಸ್. ಪಿ. ಗೌಡರ ಅವರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್. ಪಿ. ಗೌಡರ ಮತ್ತು ಅವರ ಪತ್ನಿ ಶಿಲ್ಪಾ ಅವರಿಗೆ ಐವತ್ತು ಪುಸ್ತಕಗಳನ್ನು ನೀಡಿ ವೇದಿಕೆಯ ಗಣ್ಯರಾದ ಲಿಂಗಯ್ಯ ಹಿರೇಮಠ ಮತ್ತು ಮಹೇಂದ್ರ ಬಡಳ್ಳಿ ಸನ್ಮಾನಿಸಿದರು. ಪ್ರತಿಯಾಗಿ ಗೌಡರ ಅವರು ಕೆಲವು ಅಮೂಲ್ಯ ಪುಸ್ತಕಗಳನ್ನು ಗ್ರಂಥಾಲಯ ಚಳವಳಿಗೆ ನೀಡಿದರು.ಈ ವೇಳೆ ಎಸ್. ಆರ್. ಹಿರೇಮಠ, ರಾಘವೇಂದ್ರ ಎ.ಜಿ. ಆರ್.ಎಲ್. ತೆಂಬದ, ಏಕೇಶಪ್ಪ ಬಣಕಾರ, ಬಸವರಾಜ ಸೊರಟೂರ, ಮೌನೇಶ ಮತ್ತೂರ, ಎ.ಬಿ. ಪೂಜಾರ, ನಾಗರಾಜಯ್ಯ, ವೀರನಗೌಡ ಹುಡೇ, ಪಿ.ಬಿ. ನಿಂಗನಗೌಡ, ಎ.ಬಿ. ಮರಿಗೌಡರ, ಲೋಹಿತ ಬಣಕಾರ ಪಾಲ್ಗೊಂಡಿದ್ದರು. ನಾಗಪ್ಪ ಹೆಗ್ಗೇರಿ ಸ್ವಾಗತಿಸಿದರು. ಜಾಗೃತಿ ಸಮಿತಿಯ ಅನಿತ ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊನೆಯಲ್ಲಿ ಎಂ.ಎಂ. ಮತ್ತೂರ ವಂದಿಸಿದರು.