ಗ್ಯಾರಂಟಿ ತಲುಪಿಸಲು ಸರ್ಕಾರದಿಂದ ಕ್ರಮ: ಶಾಸಕ ಡಿ.ಜಿ.ಶಾಂತನಗೌಡ

KannadaprabhaNewsNetwork |  
Published : Jun 01, 2025, 01:49 AM IST
ಹೊನ್ನಾಳಿ ಫೋಟೋ 31ಎಚ್.ಎಲ್.ಐ1.ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿಯನ್ನು ತಾಲೂಕು ಪಂಚಾಯಿತಿಯ ಅವರಣದಲ್ಲಿ ನೂತನವಾಗಿ ತೆರೆಯಲಾಗಿದ್ದು,  ಶನಿವಾರ ಈ ಕಚೇರಿಯನ್ನು ಉದ್ಘಾಟಿಸಿ  ಹಾಗೂ ಸಮಿತಿಯ ಅಧ್ಯಕ್ಷರು, ಸದಸ್ಯರುಗಳಿಗೆ ಅಭಿನಂದನೆ ನಲ್ಲಿಸಿ ಶಾಸಕ ಡಿ.ಜಿ.ಶಾಂತನಗೌಡ  ಮಾತನಾಡಿದರು. | Kannada Prabha

ಸಾರಾಂಶ

ಚುನಾವಣೆ ಪೂರ್ವದಲ್ಲಿ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಮೂಲಕ ಸಿದ್ದಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತನ್ನು ಈಡೇರಿಸಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟನೆ । ಸಮಿತಿಯ ಅಧ್ಯಕ್ಷ, ಸದಸ್ಯರಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಚುನಾವಣೆ ಪೂರ್ವದಲ್ಲಿ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಐದೂ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಮೂಲಕ ಸಿದ್ದಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತನ್ನು ಈಡೇರಿಸಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿಯನ್ನು ತಾಲೂಕು ಪಂಚಾಯಿತಿಯ ಅವರಣದಲ್ಲಿ ನೂತನವಾಗಿ ತೆರೆಯಲಾಗಿದ್ದು, ಶನಿವಾರ ಈ ಕಚೇರಿಯನ್ನು ಉದ್ಘಾಟಿಸಿ, ಸಮಿತಿಯ ಅಧ್ಯಕ್ಷ, ಸದಸ್ಯರಿಗೆ ಅಭಿನಂದನೆ ನಲ್ಲಿಸಿ ಮಾತನಾಡಿದರು.

ಸರ್ಕಾರ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ್ದರ ಬಗ್ಗೆ ಹೊಸಪೇಟೆಯಲ್ಲಿ ನೆಡೆಸಿದ ಸಾಧನ ಸಮಾವೇಶದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಾರಿಯನ್ನು ಘೋಷಣೆ ಮಾಡಿದ್ದರ ಹಿನ್ನಲೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯನ್ನು ವಿಧ್ಯುಕ್ತವಾಗಿ ಚಾಲನೆಗೊಳಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 5 ಗ್ಯಾರಂಟಿ ಯೋಜನೆಗೆ ಸಂಬಂದಿಸಿದ ಗೃಹಲಕ್ಷ್ಮಿ ಯೋಜನೆ, ಯುವ ನಿಧಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಹಾಗೂ ಶಕ್ತಿ ಯೋಜನೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಗ್ಯಾರಂಟಿ ಅನುಷ್ಠಾನ ಕುರಿತು ಚರ್ಚೆ ನಡೆಸಿ ನಂತರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಕುರಿತು ಮಾತನಾಡಿ, 5 ಗ್ಯಾರಂಟಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ನೂರಕ್ಕೆ ನೂರರಷ್ಟು ಯಾವುದೇ ಸಮಸ್ಯೆಗಳಿಲ್ಲದೆ ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ತಲುಪಿಸುವ ಕುರಿತು ಅನುಷ್ಠಾನ ಸಮಿತಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತಂದು ಮುಂದಿನ ಚುನಾವಣೆಯಲ್ಲಿ ಕೂಡ ಕಾಂಗ್ರೇಸ್ ಸರ್ಕಾರವೇ ಅಧಿಕಾರಕ್ಕೆ ಬರುವಲ್ಲಿ ಸಮಿತಿಯವರು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ಜ್ಯೋತಿ ಅವರು ಮಾಹಿತಿ ನೀಡಿ, ತಾಲೂಕಿನಲ್ಲಿ 36275 ಜನ ನೋಂದಣೆಯಾಗಿದ್ದು ಈ ಪೈಕಿ 35193 ಜನರಿಗೆ ಗೃಹ ಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಸುಮಾರು ₹.70386000.00 ಹಣ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಇನ್ನುಳಿದ 1083 ಫಲಾನುಗಳಿಗೆ ಕೆವೈಸಿ,ಇತರೆ ತಾಂತ್ರಿಕ ಕಾರಣಗಳಿಂದ ಜಮಾ ಅಗುತ್ತಿಲ್ಲ ಈ ಬಗ್ಗೆ ಕೂಡ ಕ್ರಮವಹಿಸಲಾಗುವುದು ಎಂದು ಹೇಳಿದರು.

ಇನ್ನು ಯುನನಿಧಿ ಯೋಜನೆಯಡಿ 3616 ಪದವಿ ಫಲಾನುಭವಿಗಳಿಗೆ ತಲಾ 3 ಸಾವಿರ ರು.ನಂತೆ 10848000.000 ಹಾಗೂ 38 ಡಿಪ್ಲೋಮಾ ಫಲಾನುಭವಿುಗಳಿಗೆ ತಲಾ 1500 ರು. ನಂತೆ 57000 ರು. ಸೌಲಭ್ಯ ಸಿಗುತ್ತಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ತಿಳಿಸಿದರು.

ಇದೇ ರೀತಿ ಗೃಹ ಜ್ಯೋತಿ ಯೋಜನೆಯಲ್ಲಿ 36818 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ, ₹. 1,30 ಕೋಟಿ ಸರಾಸರಿ ಸಂಸ್ಥೆಗೆ ಹಣ ಜಮಾ ಅಗುತ್ತಿದೆ ಅನ್ನಭಾಗ್ಯ ಯೋಜನೆಯಲ್ಲಿ 66 ನ್ಯಾಯ ಬೆಲೆ ಅಂಗಡಿಗಳಿದ್ದು, ಒಟ್ಟು ಪಡಿತರ ಚೀಟಿಗಳ ಸಂಖ್ಯೆ 35868 ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇನ್ನು ಶಕ್ತಿ ಯೋಜನೆ ಸಂಪೂರ್ಣ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಮಿತಿಯ ನೂತನ ಸದಸ್ಯರಾದ ಎಚ್.ಬಿ.ಅಣ್ಣಪ್ಪ, ಶೇಖರಪ್ಪ, ರುದ್ರೇಶ್, ಫಯಾಜ್ ಖಾನ್, ಕೃಷ್ಣಮೂರ್ತಿ ಎಸ್.ಎಚ್. ಎನ್.ಕೆ. ಬಸವರಾಜಪ್ಪ, ಆಶಾ,ಎಚ್.ಬಿ.ಪ್ರಶಾಂತ ಕೃಷ್ಣಚಾರ್, ತಿಪ್ಪಳ್ಳಿ ರಂಗಪ್ಪ, ಶಿವಮೂರ್ತಿ, ಶೋಭ, ಮಂಜುನಾಥ್‌ರನ್ನು ಹೂ ಗುಚ್ಚ ನೀಡಿ ಅಭಿನಂದಿಸಲಾಯಿತು,

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎ.ಗದ್ದಿಗೇಶ್, ಉಪ ವಿಭಾಗಾಧಿಕಾರಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜ ಗೌಡ, ತಾ.ಪಂ. ಅಧಿಕಾರಿ ಪ್ರಕಾಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!