ಗ್ರಾ.ಪಂ. ಚುನಾವಣೆ ಕ್ಷೇತ್ರ ವ್ಯಾಪ್ತಿ, ಸದಸ್ಯ ಸ್ಥಾನ ನಿಗದಿ

KannadaprabhaNewsNetwork |  
Published : Jun 25, 2026, 02:30 AM IST
ಕಡತ ಚಿತ್ರ | Kannada Prabha

ಸಾರಾಂಶ

ಪುನರ್ ರಚನೆಯಾದ ಕೊಡಗು ಜಿಲ್ಲೆಯ ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪುನರ್ ರಚನೆಯಾದ ಕೊಡಗು ಜಿಲ್ಲೆಯ ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಹೊರಡಿಸಿದ್ದಾರೆ.

ಕರಡು ಅಧಿಸೂಚನೆಯಿಂದ ಭಾದಿತರಾಗಬಹುದಾದ ಸಾರ್ವಜನಿಕರು, ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 7 (ಏಳು) ದಿನಗಳ ಒಳಗಾಗಿ (ಜೂ.30)ರೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ. ನಂತರ ಸ್ವೀಕೃತವಾಗುವ ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲ.

ಸದಸ್ಯ ಸ್ಥಾನಗಳ ಹಂಚಿಕೆ ವಿವರಗಳು: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು-1 ಕ್ಚೇತ್ರದ ಗುಡ್ಡೆಹೊಸೂರು ಭಾಗಶಃ, ಮಾದಾಪುರ ಗ್ರಾಮದ ಗಡಿ, ಬಸವನಹಳ್ಳಿ ಗ್ರಾಮದ ಗಡಿ, ಗುಡ್ಡೆಹೊಸೂರು ಗ್ರಾಮದ ಗಡಿ, ಬಸವನಹಳ್ಳಿ ಗ್ರಾಮ, ಗುಡ್ಡೆಹೊಸೂರು-2 ಕ್ಷೇತ್ರದ ಬಸವನಹಳ್ಳಿ, ಹೊಸಕಾಡು, ಆನೆಕಾಡು, ಪಿರಿಯಾಪಟ್ಟಣ ತಾಲೂಕು ಗಡಿ, ಹೇರೂರು ಗ್ರಾಮದ ಗಡಿ, ಅತ್ತೂರು ಅರಣ್ಯ, ಬಸವನಹಳ್ಳಿ ಗ್ರಾಮ, ಬಸವನಹಳ್ಳಿ ಕ್ಷೇತ್ರದ ಬೈಚನಹಳ್ಳಿ, ಬೊಳ್ಳೂರು, ವಾಲ್ನೂರು-ತ್ಯಾಗತ್ತೂರು 1ನೇ ಕ್ಷೇತ್ರ, ಕೂಡ್ಲೂರು ಚೆಟ್ಟಳ್ಳಿ ಗಡಿ, ನಂಜರಾಯಪಟ್ಟಣ ಗಡಿ, ಅಭ್ಯತಮಂಗಲ ಗ್ರಾಮದ ಗಡಿ, ರಸಲ್‍ಪುರ ಕ್ಷೇತ್ರದ ರಸೂಲ್‍ಪುರ ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಅತ್ತೂರು ಅರಣ್ಯ, ಪಿರಿಯಪಟ್ಟಣ ತಾಲೂಕು ಗಡಿ, ಬಸವನಹಳ್ಳಿ ಗ್ರಾಮ, ರಂಗಸಮುದ್ರ ಗ್ರಾಮ, ದೊಡ್ಡಬೆಟ್ಟಗೇರಿ ಗ್ರಾಮ,

ಮಾದಪಟ್ಟಣ ಕ್ಷೇತ್ರದ ಮಾದಪಟ್ಟಣ ಭಾಗಶಃ, ಕುಶಾಲನಗರ ಪಟ್ಟಣ, ಮಾದಪಟ್ಟಣ ಗ್ರಾಮದ ಗಡಿ, ಮುಳ್ಳುಸೋಗೆ ಗ್ರಾಮ, ಮಾದಪಟ್ಟಣ ಗ್ರಾಮ.

ಪೊನ್ನಂಪೇಟೆ ತಾಲ್ಲೂಕಿನ ಬಲ್ಯಮಂಡೂರು ಕ್ಷೇತ್ರದ ಚಿಕ್ಕಮಂಡೂರು, ಕೋತೂರು, ಬೆಕ್ಕೆಸೆಡ್ಲೂರು, ಬೆಳ್ಳೂರು, ಚಿಕ್ಕಮಂಡೂರು ಕ್ಷೇತ್ರದ ಮುಗುಟಗೇರಿ, ಬಲ್ಯಮಂಡೂರು, ಮತ್ತೂರು, ಬೆಳ್ಳೂರು.

ಪೊನ್ನಂಪೇಟೆ ತಾಲೂಕಿನ ಹಾತೂರು ಕ್ಷೇತ್ರದ ಕೈಕೇರಿ ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಕಳತ್ಮಾಡು ಗ್ರಾಮದ ಗಡಿ, ಕುಂದ ಗ್ರಾಮದ ಗಡಿ, ಕುಂದ ಈಚೂರು ಕ್ಷೇತ್ರದ ರುದ್ರಗುಪ್ಪೆ ಗ್ರಾಮದ ಗಡಿ, ಅರುವತ್ತೋಕ್ಲು ಗ್ರಾಮದ ಗಡಿ, ಕೈಕೇರಿ ಗ್ರಾಮದ ಗಡಿ, ಬಿ.ಶೆಟ್ಟಿಗೇರಿ ಗ್ರಾಮದ ಗಡಿ, ಕೈಕೇರಿ-1 ಕ್ಷೇತ್ರದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕಳತ್ಮಾಡು ಗ್ರಾಮದ ಗಡಿ, ಹಾತೂರು ಗ್ರಾಮದ ಗಡಿ, ಕೈಕೇರಿ-2 ಕ್ಷೇತ್ರದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕಳತ್ಮಾಡು ಗ್ರಾಮದ ಗಡಿ, ಹಾತೂರು ಗ್ರಾಮದ ಗಡಿ, ಕೈಕೇರಿ-3 ಕ್ಷೇತ್ರದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಅರುವತೊಕ್ಲು ಗ್ರಾಮದ ಗಡಿ, ಕೈಕೇರಿ-4 ಗ್ರಾಮದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಅರುವತೊಕ್ಲು ಗ್ರಾಮದ ಗಡಿ.

ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಕ್ಷೇತ್ರದ ಕದನೂರು ಗ್ರಾಮದ ಗಡಿ, ಕಾವಡಿ ಗ್ರಾಮದ ಗಡಿ, ಕಣ್ಣಂಗಾಲ ಗ್ರಾಮದ ಗಡಿ, ಕುಕ್ಲೂರು ಐಮಂಗಲ ಗ್ರಾಮದ ಗಡಿ, ದೇವಣಗೇರಿ ಕ್ಷೇತ್ರದ ಮೈತಾಡಿ ಗ್ರಾಮದ ಗಡಿ, ಕಣ್ಣಂಗಾಲ ಗ್ರಾಮದ ಗಡಿ, ಹಾಲುಗುಂದ ಮತ್ತು ಬೈರಂಬಾಡ ಗ್ರಾಮದ ಗಡಿ, ಕದನೂರು ಮತ್ತು ಚೆಂಬೆಬೆಳ್ಳೂರು ಗ್ರಾಮದ ಗಡಿ, ಮಗ್ಗುಲ ಕ್ಷೇತ್ರದ ಕುಕ್ಲೂರು ಗ್ರಾಮದ ಗಡಿ, ಬಿಳುಗುಂದ ಗ್ರಾಮದ ಗಡಿ, ಚೆಂಬೆಬೆಳ್ಳೂರು ಗ್ರಾಮದ ಗಡಿ, ಮಗ್ಗುಲ ಗ್ರಾಮದ ಗಡಿ, ಕುಕ್ಲೂರು ಕ್ಷೇತ್ರದ ಕದನೂರು ಗ್ರಾಮದ ಗಡಿ, ಐಮಂಗಲ ಗ್ರಾಮದ ಗಡಿ, ಕದನೂರು ಮತ್ತು ಚೆಂಬೆಬೆಳ್ಳೂರು ಗ್ರಾಮದ ಗಡಿ, ವಿರಾಜಪೇಟೆ ಪುರಸಭೆಯ ಗಡಿ, ಐಮಂಗಲ ಕ್ಷೇತ್ರದ ಕುಕ್ಲೂರು ಗ್ರಾಮದ ಗಡಿ, ಬಿಳುಗುಂದ ಗ್ರಾಮದ ಗಡಿ, ಚೆಂಬೆಬೆಳ್ಳೂರು ಗ್ರಾಮದ ಗಡಿ, ಮಗ್ಗುಲ ಗ್ರಾಮದ ಗಡಿ.

ವಿರಾಜಪೇಟೆ ತಾಲೂಕಿನ ಮೈತಾಡಿ-1 ಕ್ಷೇತ್ರದ ನಾಲ್ಕೇರಿ ಗ್ರಾಮದ ಗಡಿ, ಹಾಲುಗುಂದ ಗ್ರಾಮದ ಗಡಿ, ಮಡಿಕೇರಿ ತಾಲ್ಲೂಕು ಗಡಿ, ಹಾಲುಗುಂದ ಗ್ರಾಮದ ಗಡಿ, ಮೈತಾಡಿಕ್ಷೇತ್ರದ 2ರ ಗಡಿ, ಮೈತಾಡಿ-2 ಕ್ಷೇತ್ರದ ನಾಲ್ಕೇರಿ ಗ್ರಾಮದ ಗಡಿ, ದೇವಣಗೇರಿ ಗ್ರಾಮದ ಗಡಿ, ಮೈತಾಡಿ ಕ್ಷೇತ್ರ-1ರ ಗಡಿ, ಅರಮೇರಿ ಗಡಿ, ಕದನೂರು ಕ್ಷೇತ್ರದ ಕೆದಮುಳ್ಳೂರು ಗ್ರಾಮದ ಗಡಿ, ಕುಕ್ಲೂರು ಗ್ರಾಮಗಳ ಗಡಿ, ಮೈತಾಡಿ, ದೇವಣಗೇರಿ ಗ್ರಾಮದ ಗಡಿ, ಕುಕ್ಲೂರು ಗ್ರಾಮದ ಗಡಿ, ಅರಮೇರಿ ಕ್ಷೇತ್ರದ ಬೆಳ್ಳುಮಾಡಿ ಗ್ರಾಮದ ಗಡಿ, ಕದನೂರು ಗ್ರಾಮದ ಗಡಿ, ನಾಲ್ಕೇರಿ, ಮೈತಾಡಿ ಗ್ರಾಮಗಳ ಗಡಿ, ಕಡಂಗ ಮರೂರು ಗ್ರಾಮದ ಗಡಿ.

ಬಿಟ್ಟಂಗಾಲ ಕ್ಷೇತ್ರದ ಬಾಳುಗೋಡು ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಮಗ್ಗುಲ ಹಾಗೂ ನಲ್ವತೋಕ್ಲು ಗ್ರಾಮದ ಗಡಿ, ನಾಂಗಾಲ ಗ್ರಾಮದ ಗಡಿ, ಬಾಳುಗೋಡು ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಬಿಟ್ಟಂಗಾಲ ಗ್ರಾಮದ ಗಡಿ, ಮಗ್ಗುಲ ಗ್ರಾಮದ ಗಡಿ, ನಾಂಗಾಲ ಗ್ರಾಮದ ಗಡಿ, ರುದ್ರಗುಪ್ಪೆ ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಬಿ.ಶೆಟ್ಟಿಗೇರಿ, ಕೊಂಗಣ ಕುಂದ ಗ್ರಾಮಗಳ ಗಡಿ, ನಾಂಗಾಲ, ಕೊಳತ್ತೋಡು, ಬೈಗೋಡು ಗ್ರಾಮಗಳ ಗಡಿ, ಬಾಡಗ ಗ್ರಾಮ ಮತ್ತು ಅರಣ್ಯ, ನಾಂಗಾಲ ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ರುದ್ರುಗುಪ್ಪೆ ಗ್ರಾಮದ ಗಡಿ, ಬಾಳುಗೋಡು, ಬಿಟ್ಟಂಗಾಲ ಗ್ರಾಮದ ಗಡಿ, ರುದ್ರಗುಪ್ಪೆ ಗ್ರಾಮದ ಗಡಿ, ವಿ.ಬಾಡಗ ಕ್ಷೇತ್ರದ ವಿರಾಜಪೇಟೆ-ಕೇರಳ ರಸ್ತೆ, ಕುಟ್ಟಂದಿ ಗ್ರಾಮದ ಗಡಿ, ರುದ್ರಗುಪ್ಪೆ ಗ್ರಾಮದ ಗಡಿ, ತಾಲ್ಲೂಕು ಗಡಿ ಮತ್ತು ಪರಕಟಗೇರಿ ಗ್ರಾಮದ ಗಡಿ, ಕೊಳತೋಡು ಬೈಗೋಡು ಕ್ಷೇತ್ರದ ಹಾತೂರು ಗ್ರಾಮದ ಗಡಿ, ನಲ್ವತ್ತೋಕ್ಲು ಗ್ರಾಮದ ಗಡಿ, ಹೊಸೂರು ಗ್ರಾಮದ ಗಡಿ, ಹಾತೂರು ಗ್ರಾಮದ ಗಡಿ.

ವಿರಾಜಪೇಟೆ ತಾಲೂಕಿನ ಬೇಟೋಳಿ-1ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಹೆಗ್ಗಳ ಗ್ರಾಮದ ಗಡಿ, ವಿರಾಜಪೇಟೆ ಪುರಸಭೆ ಗಡಿ, ಕೊಟೋಳಿ ಗ್ರಾಮದ ಗಡಿ, ಬೇಟೋಳಿ-2ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಹೆಗ್ಗಳ ಗ್ರಾಮದ ಗಡಿ, ವಿರಾಜಪೇಟೆ ಪುರಸಭೆ ಗಡಿ, ಕೊಟೋಳಿ ಗ್ರಾಮದ ಗಡಿ, ಹೆಗ್ಗಳ-1 ಕ್ಷೇತ್ರದ ಬೇಟೋಳಿ ಗ್ರಾಮದ ಗಡಿ, ತೋಮರ ಗ್ರಾಮದ ಗಡಿ, ಬೇಟೋಳಿ ಗ್ರಾಮದ ಗಡಿ, ಕೊಟ್ಟೋಳಿ ಗ್ರಾಮದ ಗಡಿ, ಹೆಗ್ಗಳ-2ಕ್ಷೇತ್ರದ ಬೇಟೋಳಿ ಗ್ರಾಮದ ಗಡಿ, ತೋಮರ ಗ್ರಾಮದ ಗಡಿ, ಬೇಟೋಳಿ ಗ್ರಾಮದ ಗಡಿ, ಬೇಟೋಳಿ ಗ್ರಾಮದ ಗಡಿ, ಹೆಗ್ಗಳ-3 ಕ್ಷೇತ್ರದ ಮಾಕುಟ್ಟ ಮೀಸಲು ಅರಣ್ಯ ಗಡಿ, ಹೆಗ್ಗಳ ಗ್ರಾಮ ಗಡಿ, ಕೇರಳ ರಾಜ್ಯ ಗಡಿ, ಆರ್ಜಿ ಗ್ರಾಮದ ಗಡಿ.

ಕರಡು ಅಧಿಸೂಚನೆಗೆ ಕುರಿತಂತೆ ಸ್ವೀಕೃತವಾದ ಆಕ್ಷೇಪಣೆಗಳ ಪರಿಶೀಲನಾ ಅದಾಲತ್ ಅನ್ನು ಜುಲೈ 1 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ, ಜಿಲ್ಲಾಡಳಿತ ಭವನ, 3ನೇ ಮಹಡಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ನಡೆಸಲಾಗುವುದು. ಆಕ್ಷೇಪಣೆ ಸಲ್ಲಿಸಿರುವವರು ಈ ಅದಾಲತ್‍ನಲ್ಲಿ ಭಾಗವಹಿಸಲು ಕೋರಲಾಗಿದೆ. ಆಕ್ಷೇಪಣೆದಾರರು ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿ ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ನಿರ್ಮೂಲನೆಗೆ ಮಹಾನಗರ ಪಾಲಿಕೆ ಕಸರತ್ತು
ಅನಧಿಕೃತ ವೈದ್ಯಕೀಯ ವೃತ್ತಿ ತಡೆಗೆ ವಿಶೇಷ ಪಡೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್